ಅತಿಕ್ರಮಣ ತೆರವಿಗೆ ಮನವಿ
Team Udayavani, Feb 17, 2022, 6:14 PM IST
ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯ ಸರ್ವೇ ನಂ. 615ರಲ್ಲಿರುವ ಸರ್ಕಾರಿ ಮಸಣ ಘಾಟ ಅನ್ನು ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಕೂಡಲೇ ಈ ಜಾಗವನ್ನು ಸರ್ಕಾರದ ವತಿಯಿಂದಲೇ ಸರ್ವೇ ಮಾಡಿಸಿ ಅತಿಕ್ರಮಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಯುವ ಜನ ಸೇನೆ ಪದಾಧಿಕಾರಿಗಳು, ಸದಸ್ಯರು ಬುಧವಾರ ಶಿರಸ್ತೇದಾರ್ ಎ.ಬಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಉತಾರೆಯಲ್ಲಿ ಮಸಮ ಘಾಟ ಪ್ರದೇಶ ಎಂದು ದಾಖಲಿದೆ. ಕೆಲವು ಪಟ್ಟಭದ್ರರು ತಮ್ಮ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಪಟ್ಟಣ ಪಂಚಾಯಿತಿಯ ಫಾರ್ಮ ನಂಬರ್ 9ರಲ್ಲಿ ತಮ್ಮ ಹೆಸರನ್ನು ಸೃಷ್ಟಿಸಿ ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಕೆಲವು ಖಾಸಗಿ ವ್ಯಕ್ತಿಗಳು ಈ ಸರ್ವೇಯಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿದ್ದಾರೆ. ಇನ್ನೂ ಹಲವರು ಖಾಲಿ ಜಾಗ ವಶಪಡಿಸಿಕೊಂಡಿದ್ದು ಸ್ಮಶಾನ ಜಮೀನಿನಲ್ಲಿ ಬೇಕಾಬಿಟ್ಟಿ ಕಟ್ಟಡಗಳು ನಿರ್ಮಾಣಗೊಂಡಿವೆ. ಕೂಡಲೇ ತಹಶೀಲ್ದಾರ್ ಅವರು ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕು. ಸದರಿ ಜಮೀನನ್ನು ಸ್ಮಶಾನಕ್ಕೆ ಮೀಸಲಿಡಬೇಕು. ಇದು ನಾಲತವಾಡದ ಜನತೆಯ ಒತ್ತಾಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ತಾಲೂಕು ಅಧ್ಯಕ್ಷ ಪರಶುರಾಮ ವಾಲಿ, ಅನಿಲ ಧರಿಗೋಳ, ಕಮಲಾ ಭಜಂತ್ರಿ, ನಿಖೀಲ ಮಲಗಲದಿನ್ನಿ, ರವಿ ಮನಗೂಳಿ, ಮಂಜು ಭಜಂತ್ರಿ, ಮಂಜು ಗುರುವಿನ್, ಬಸು ಧರಿಗೋಳ, ಅಕ್ಷಯ ಢವಳಗಿ, ರೇಖಾ ಶಿರೋಳ, ಅನಿಲ ರಾಠೊಡ, ಸಿದ್ದು ಚಲವಾದಿ, ಪವಿತ್ರಾ ನಾಲತವಾಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.