ಆರೋಗ್ಯ ಹಸ್ತ ಯೋಜನೆ ಕಿಟ್ ವಿತರಣೆ
Team Udayavani, Aug 26, 2020, 6:00 PM IST
ಇಂಡಿ: ಆರೋಗ್ಯ ಅಭಯ ಹಸ್ತ ಯೋಜನೆ ಹಳ್ಳಿ ಜನರ ಆರೋಗ್ಯ ತಪ್ಪಾಸಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕುಮಾರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಆರೋಗ್ಯ ಅಭಯ ಹಸ್ತ ಯೋಜನೆ ಆರೋಗ್ಯ ಕಿಟ್ ಅನ್ನು ಶಾಸಕ ಯಶವಂತರಾಯಗೌಡ ಪಾಟೀಲ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪ್ರತಿ ಗ್ರಾಪಂಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್-19 ರೋಗ ದೇಶವ್ಯಾಪಿ ಹರಡಿದ್ದು ಇಂದು ಪ್ರತಿಯೊಬ್ಬರು ರೋಗ ಬರುವುದಕ್ಕಿಂತ ಮುಂಚೆ ಜಾಗೃತರಾಗಿರಬೇಕು. ಕೋವಿಡ್ ರೋಗದಿಂದ ಇಂದು ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸರಕಾರದ ಕೆಲವೊಂದು ಯೋಜನೆಗಳಿಗೆ ಹಣಕಾಸಿನ ಮೂಲ ಸ್ಥಗಿತವಾಗಿರುವುದರಿಂದ ಯೋಜನೆಗಳು ಸಹಿತ ಹಿನ್ನಡೆಯಾಗಿವೆ. ಕಳೆದ 2013ರಲ್ಲಿ ನನ್ನ ಮತಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನ ತಂದು ಮತಕ್ಷೇತ್ರದ ಸರ್ವಾಂಗೀಣ ಪ್ರಗತಿ ಸಾಧಿಸಿದ್ದೇನೆ. ಆದರೆ ಇಂದು ಅಭಿವೃದ್ಧಿ ಮಾಡಬೇಕೆಂದರೆ ಸಾಕಷ್ಟು ಅಡೆ ತಡೆಯಾಗಿದೆ. ಕೊರೊನಾ ರೋಗದ ಬಾಧೆ ನಿಯಂತ್ರಿಸಲು ಸರಕಾರಗಳು ಶ್ರಮಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಸಹಕಾರ ನೀಡುವದು ಅನಿವಾರ್ಯವಾಗಿದೆ ಎಂದರು.
ಗ್ರಾಮೀಣ ಭಾಗದ ಜನರು ಅತ್ಯಂತ ಮುಗ್ಧರಾಗಿದ್ದು ಕೋವಿಡ್-19 ರೋಗ ಇತ್ತಿತ್ತಲಾಗಿ ಇಡಿ ಸಮುದಾಯ ವ್ಯಾಪಿಸಿರುವುದರಿಂದ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಮನೆಯಿಂದ ಹೊರ ಹೋದಾಗ ಕೈಗಳನ್ನು ತೊಳೆದುಕೊಳ್ಳಬೇಕು. ದಿನಕ್ಕೆ ಎರಡು ಬಾರಿಯಾದರೂ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಕೋವಿಡ್-19 ರೋಗ ಆರಂಭದಲ್ಲಿ ದೂರದಲ್ಲೆಲ್ಲೋ ರೋಗದ ಒಂದು ಪ್ರಕರಣ ದಾಖಲಾದರೂ ದೇಶ ಹಾಗೂ ರಾಜ್ಯ ವ್ಯಾಪಿ ಚರ್ಚೆಯಾಗುತ್ತಿತ್ತು. ಈಗ ಅದು ಸರ್ವೇ ಸಾಮಾನ್ಯವಾಗಿದೆ. ಕಾರಣ ಯಾರೂ ಈ ರೋಗಕ್ಕೆ ಹೆದರದೆ ಸುರಕ್ಷಿತ ನಿಯಗಳನ್ನು ಪಾಲಿಸಿ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಇದರಲ್ಲಿ ಜಯಶಾಲಿಯಾಗುತ್ತೀರಿ. ಈಗಾಗಲೆ ನಮ್ಮ ಅರಿವಿಗೆ ಬಾರದೆ ದೇಶದ ಪ್ರತಿಶತ 60ರಷ್ಟು ಜನರಿಗೆ ಕೋವಿಡ್ ಸೋಂಕು ಬಂದು ಹೋಗಿರುವುದಾಗಿ ತಜ್ಞರ ಅಭಿಪ್ರಾಯವಾಗಿದೆ ಎಂದರು.
ಭೀಮಣ್ಣ ಕೌಲಗಿ, ಗುರಣ್ಣಗೌಡ ಪಾಟೀಲ, ತಾಪಂ ಸದಸ್ಯ ಜೀತಪ್ಪ ಕಲ್ಯಾಣಿ, ಅಶೋಕ ಕರೋರ, ಜಾವಿದ್ ಮೋಮಿನ್, ಅಶೋಕಗೌಡ ಚೋರಗಿ, ನೀಲಕಂಠ ಅರ್ಜನಾಳ, ಪುಂಡಲೀಕ ಅರವತ್ತು, ಸಂತೋಷ ಪರೇಶನವರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.