Interstate ಕಳ್ಳರ ಬಂಧನ; 61ಲಕ್ಷ ರೂ. ಮೌಲ್ಯದ ಸಿಗರೇಟ್ ವಶಕ್ಕೆ
Team Udayavani, Aug 9, 2023, 8:53 PM IST
ವಿಜಯಪುರ : ನಗರದಲ್ಲಿ ಈಚೆಗೆ ಸಂಭವಿಸುತ್ತಿದ್ದ ಕಳ್ಳತನ ಪ್ರಕರಣದ ತನಿಖೆಯಲ್ಲಿದ್ದ ಪೊಲೀಸರಿಗೆ ಅಂತರಾಜ್ಯ ಸಿಗರೇಟ್-ವಾಹನ ಕಳ್ಳರು ಸೆರೆ ಸಿಕ್ಕಿದ್ದಾರೆ. 8 ಆರೋಪಿಗಳಲ್ಲಿ ಸೆರೆ ಸಿಕ್ಕಿರುವ ಐವರಿಂದ 61.49 ಲಕ್ಷ ರೂ. ಮೌಲ್ಯದ ಸಿಗರೇಟ್-ಕಾರು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಮಹಾರಾಷ್ಟ್ರದ ನವಿಮುಂಬೈನ ಶಿವಾಜಿನಗರದ ಡ್ರೈವರ್ ಮಹ್ಮದ್ ರೆಹಾನೆ ಶೇಖ್(45), ಪುಣೆಯ ಹಳೆಸಾಂಗ್ಲಿ ಕಿರಾಣಿ ವ್ಯಾಪಾರಿ ರಾಮಪಾಲ್ ಹರಿರಾಮ ಚೌಧರಿ( 31), ಪುಣೆಯ ರಾವೇತ್ ನಿವಾಸಿ ಹೊಟೇಲ್ ಕಾರ್ಮಿಕ ತೇಜರಾಮ ಚಂಪಾಲಾಲ್ ಉನೇಚ್( 39), ಪುಣೆಯ ಸಾಸವಾಡದ ಕಿರಾಣಿ ವ್ಯಾಪಾರಿ ರಾಜಸ್ಥಾನ ಮೂಲದ ಚೈನಾರಮ್ ಮಿಶ್ರೀಲಾಲ್ ಜಾಟ(36), ರಾಜಸ್ಥಾನ ಮೂಲದ ಇನ್ನೋರ್ವ ಆರೋಪಿ ಪುಣೆಯ ಸಾಸವಾಡದ ಕಿರಾಣಿ ವ್ಯಾಪಾರಿ ದೀಪಾರಾಮ ಜಾಟ್ (32 )ಬಂಧಿತ ಆರೋಪಿಗಳು. ಪ್ರಕರಣದ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಬಂಧಿತರಿಂದ 37,49,514 ಲಕ್ಷ ರೂ. ಮೌಲ್ಯದ ಐಟಿಸಿ ಕಂಪನಿಯ ಸಿಗರೇಟ್ ಹಾಗೂ ಒಂದು ಗೂಡ್ಸ್ ವಾಹನ, ಫೋರ್ಡ್ ಕಾರು, ಮಹಿಂದ್ರಾ ಕಾರು ಸೇರಿದಂತೆ 61,49,514 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಎಚ್.ಡಿ.ಆನಂದಕುಮಾರ, ಎಎಸ್ಪಿ ಎಸ್.ಕೆ.ಮಾರಿಹಾಳ, ಡಿಎಸ್ಪಿ ಬಸವರಾಜ ಯಲಿಗಾರ, ಸಿದ್ದೇಶ್ವರ ಕೃಷ್ಣಾಪೂರ, ಪೊಲೀಸ್ ಉಪ-ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಗೋಲಗುಂಬಜ ಸಿಪಿಯ ವಿಜಯಮಾಹಾಂತೇಶ ಮಠಪತಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್‍ಐಗಳಾದ ಐ.ಎಂ.ದುಂಡಸಿ, ಎಸ್.ಸಿ.ಗುರುಬೇಟ್ಟಿ ಜ್ಯೋತಿ ವಾಲಿಕಾರ, ಸಚಿನ ಆಲಮೇಲಕರ ತನಿಖಾ ತಂಡದಲ್ಲಿದ್ದರು.
ಸಿಬ್ಬಂದಿಗಳಾದ ಎಸ್.ಎಸ್.ಮಾಳೆಗಾಂವ್ ಹಬಿ.ಎಂ.ಪವಾರ್, ವೈ.ಪಿ.ಕಬಾಡೆ, ಐ.ಆರ್.ಮಂಕಣಿ, ಎಸ್.ಜಿ.ಗಾಯನ್ನವರ, ಸಂಜು ಬನಪಟ್ಟಿ, ಪುಂಡಲಿಕ ಬಿರಾದಾರ, ಮಹೇಶ ಸಾಲಿಕೇರಿ, ಜೆ.ಎಸ್.ವನಂಜಕರ, ಈರಪ್ಪ ಸೋಡ್ಡಿ, ಆನಂದ ಕಂಬಾರ, ಮೌನೇಶ ಬಡಿಗೇರ, ನಿಂಗಣ್ಣ ವಟಾರ, ಸುನೀಲ ಗೌಳಿ, ಗುಂಡು ಗಿರಣೀವಡ್ಡರ, ಮತೀನ ಬಾಗವಾನ ಇವರಿದ್ದ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ
H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.