ಭೀಮಾ ತೀರದ ಹಂತಕ ಭೈರಗೊಂಡ ಸೆರೆ
Team Udayavani, Jul 6, 2018, 6:00 AM IST
ವಿಜಯಪುರ: ಭೀಮಾ ತೀರದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡನನ್ನು ಕೊನೆಗೂ ಸಿಐಡಿ ಪೊಲೀಸರು ಗುರುವಾರ ಬೆಳಗ್ಗೆ ಬಂ ಧಿಸಿದ್ದು, ಇಂಡಿ ನ್ಯಾಯಾಲಯ ಜು.12ರವರೆಗೆ ಹೆಚ್ಚಿನ ತನಿಖೆಗಾಗಿಸಿಐಡಿ ವಶಕ್ಕೆ ನೀಡಿದೆ.
ಚಡಚಣ ತಾಲೂಕಿನ ಕೆರೂರ ಗ್ರಾಮದ ತನ್ನ ಮನೆಯಲ್ಲಿ ಮಹಾದೇವ ಭೈರಗೊಂಡ ಅಡಗಿರುವ ಖಚಿತ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳತಂಡ ಸ್ಥಳೀಯ ಪೊಲೀಸರ ಭಾರಿ ಭದ್ರತೆಯಲ್ಲಿ ಗುರುವಾರ ನಸುಕಿನಲ್ಲೇ ದಾಳಿ ನಡೆಸಿತು. ಡಿಎಸ್‌ಪಿ ಬಸವರಾಜ ಅಂಗಡಿ ನೇತೃತ್ವದಲ್ಲಿ ರಚಿಸಲಾಗಿದ್ದ 7 ಸಿಪಿಐ ಹೊಂದಿದ್ದ ತಂಡ ಮನೆಗೆ ದಾಳಿ ನಡೆಸಿದಾಗ, ಯಾವುದೇ ಪ್ರತಿರೋಧ ತೋರದೇ ಮಹಾದೇವ
ಭೈರಗೊಂಡ ಶರಣಾದ.
ಬಂಧಿತ ಮಹಾದೇವ ಭೈರಗೊಂಡನನ್ನು ಭಾರಿ ಭದ್ರತೆಯಲ್ಲೇ ವಿಜಯಪುರ ನಗರಕ್ಕೆ ಕರೆತಂದ ಸಿಐಡಿ ಅ ಧಿಕಾರಿಗಳು, ಸ್ಥಳೀಯ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ತೀವ್ರ ವಿಚಾರಣೆ ನಡೆಸಿದರು. ಬೆಳಗ್ಗೆ 7ರಿಂದ ಮಧ್ಯಾಹ್ನ 3.30ರವರೆಗೆ ನಿರಂತರ ಸುಮಾರು 8 ಗಂಟೆಗೂ ಹೆಚ್ಚಿನ ಕಾಲ ವಿಚಾರಣೆ ನಡೆಸಿದ ಎಸ್ಪಿ ಆನಂದಕುಮಾರ ಅವರಿದ್ದ ಸಿಐಡಿ ಅ ಧಿಕಾರಿಗಳ ತಂಡ, ಮಹತ್ವದ ಮಾಹಿತಿ ಸಂಗ್ರಹಿಸಿದೆ.
ಪ್ರಾಥಮಿಕ ವಿಚಾರಣೆ ಬಳಿಕ ಮಧ್ಯಾಹ್ನ 4 ಗಂಟೆ ಸುಮಾರಿಗೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಹಾದೇವ ಭೈರಗೊಂಡ ವೈದ್ಯಕೀಯ ಪರೀಕ್ಷೆ ನಡೆಸಿದ ಸಿಐಡಿ ಅಧಿಕಾರಿಗಳು, ಭಾರಿ ಭದ್ರತೆಯಲ್ಲೇ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಈ ಹಂತದಲ್ಲಿ ಸದರಿ ಆರೋಪಿಯನ್ನು ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಜು.12ರವರೆಗೆ ಆರೋಪಿಯನ್ನು ಸಿಐಡಿ ವಶಕ್ಕೆ ನೀಡಿದೆ.
ಈ ಮಧ್ಯೆ ಆರೋಪಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮತ್ತೆ ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿ ಗಂಗಾಧರ ಹತ್ಯೆಯ ಪ್ರಮುಖ ಸೂತ್ರಧಾರನಾಗಿರುವ ಕಾರಣ ತನಿಖಾ ತಂಡ, ಈಗಾಗಲೇ ಬಂಧಿತ ಆರೋಪಿಗಳು ನೀಡಿರುವ
ಹೇಳಿಕೆ ಆಧರಿಸಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡಿದ್ದ ಮಹಾದೇವ ಭೈರಗೊಂಡ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಬುಧವಾರವೇ ನ್ಯಾಯಾಲಯಕ್ಕೆ
ಶರಣಾಗಲು ನಿರ್ಧರಿಸಿದ್ದ. ಈ ಮಾಹಿತಿ ದೊರೆಯುತ್ತಲೇ ಇಂಡಿ ನ್ಯಾಯಾಲಯದ ಸುತ್ತ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಆಗಮಿಸಿದೇ ಭೂಗತ ಸ್ಥಳದಿಂದ ಸದ್ದಿಲ್ಲದೇ ತವರೂರು ಕೆರೂರು ಗ್ರಾಮಕ್ಕೆ ಆಗಮಿಸಿ, ತನ್ನ ಮನೆಯಲ್ಲಿ ಅಡಗಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ಗುರುವಾರ ನಸುಕಿನಲ್ಲೇ ಸಿಐಡಿ ಅಧಿಕಾರಿಗಳು ಮನೆಗೆ ದಾಳಿ ನಡೆಸಿ ಬಂಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.