ಹೋಟೆಲ್-ಕಿರಾಣಿ ಅಂಗಡಿ ಮೇಲೆ ದಾಳಿ
Team Udayavani, Oct 7, 2018, 3:56 PM IST
ಸಿಂದಗಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ| ಮಲ್ಲನಗೌಡ ಬಿರಾದಾರ ನೇತೃತ್ವದ ತಂಡ ಪಟ್ಟಣದ ಹೋಟೆಲ್ ಮತ್ತು ಕಿರಾಣಿ ಅಂಗಡಿಗಳ ಮೇಲೆ ದಿಢೀರನೆ ದಾಳಿ ಮಾಡಿ ಪರಿಶೀಲಿಸಿದ
ಘಟನೆ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಎರಡು ಹೋಟೆಲ್ ಮತ್ತು ಮೂರು ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ ಅಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು. ರಾಹುಲ್ ಲಿಂಗಾಯತ
ಖಾನಾವಳಿ ಮೇಲೆ ದಾಳಿ ಮಾಡಿದಾಗ ಹೋಟೆಲ್ ಮಾಲಿಕ ಹೋಟೆಲ್ ನಡೆಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಆಹಾರ ಪರವಾನಿಗೆ ನೋಂದಣಿ ಪಡೆಯದಿರುವುದು ಬೆಳಕಿಗೆ ಬಂದಿದೆ.
ರಾಹುಲ್ ಲಿಂಗಾಯತ ಖಾನಾವಳಿಯಲ್ಲಿ ಅವಧಿ ಮೀರಿದ ತಂಪು ಪಾನೀಯಗಳಾದ ಸ್ಪೆಟ್ 750 ಎಂಎಲ್ 7 ಬಾಟಲಿಗಳು, ತಮ್‌ಸಪ್ 750 ಎಂಎಲ್ 10 ಬಾಟಲಿಗಳು, 2.5 ಲೀ. 2 ಬಾಟಲಿಗಳು, ಫಂಟಾ 750 ಎಂಎಲ್ 6 ಬಾಟಲಿಗಳು, ಪೆಪ್ಸಿ 2.25 ಲೀ. 2 ಬಾಟಲಿಗಳು, 1.25 ಲೀ. 3 ಬಾಟಲಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ರಾಹುಲ್ ಲಿಂಗಾಯತ ಖಾನಾವಳಿ ಮಾಲೀಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಆಹಾರ ಪರವಾನಿಗೆ ನೋಂದಣಿ ಪಡೆಯದಿರುವುದು ಮತ್ತು ಡೇಟ್ ಡಿಬಾರಾದ ತಂಪು ಪಾನೀಯಗಳನ್ನು ಮಾರಾಟ ಮಾಡಲು ಇಟ್ಟಿರುವುದರಿಂದ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಲ್ಲದೇ ಹೋಟೆಲ್‌ನಲ್ಲಿದ್ದ ಇಡ್ಲಿ ರವೆ ಮತ್ತು ಬಿಸ್ಕತ್ತಿನ ಮಾದರಿಗಳನ್ನು ವಶಪಡಿಸಿಕೊಂಡು ಆಹಾರ ಗುಣಮಟ್ಟದ ಪರೀಕ್ಷೆಗಾಗಿ ಆಹಾರ ಮಾದರಿಯನ್ನು ಬೆಳಗಾವಿಯಲ್ಲಿರುವ ವಿಭಾಗೀಯ ಆಹಾರ ಸುರಕ್ಷತಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿವೇಕಾನಂದ ವೃತ್ತದಲ್ಲಿರುವ ವೈಭವ ಉಡಪಿ ಹೋಟೆಲ್, ಕಿರಾಣಿ ಅಂಗಡಿಗಳಾದ ಗಣೇಶ ಟ್ರೇಡರ್ಸ, ರಾಜಲಕ್ಷ್ಮಿಕಿರಾಣಿ, ಪಿ.ಎ.ಲೋಣಿ ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪರೀಕ್ಷೆ ಮಾಡಿದರು. ಇಲ್ಲಿ ಯಾವುದೇ ತೆರನಾದ ಪ್ರಕರಣಗಳು ಸಿಗದ ಕಾರಣ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಆಹಾರ ತಯಾರಿಸಿ ಕೊಡಬೇಕು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಒಳಾಂಗಣ ಮತ್ತು ಹೊರಾಂಗಣದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು.
ಚಹಾ ಮಾಡಲಿಕ್ಕೆ ಬಳಸುವ ಚಹಾ ಪುಡಿಯನ್ನು ತಣ್ಣೀರಿನಲ್ಲಿ ಹಾಕಿದಾಗ ಬಣ್ಣ ಬಿಟ್ಟರೆ ಅದು ಅಪಾಯಕಾರಿಯಾಗಿದ್ದು ಅಂತ ಚಹಾಪುಡಿ ಬಳಸಬಾರದು. ಡೇಟ್ ಡಿಬಾರಾದ ತಂಪು ಪಾನೀಯಗಳನ್ನು ಮಾರಾಟ ಮಾಡಬಾರದು, ಆಹಾರ ಪದಾರ್ಥಗಳನ್ನು ತಯಾರು ಮಾಡಲು ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಕೆ ಮಾಡಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ| ಮಲ್ಲನಗೌಡ ಬಿರಾದಾರ ಹೋಟೆಲ್
ಮಾಲೀಕರಿಗೆ ಮಾಹಿತಿ ನೀಡಿದರು. ಹೋಟೆಲ್, ಕಿರಾಣಿ ಅಂಗಡಿ ಮತ್ತು ಬೇಕರಿಗಳನ್ನು ನೂತನವಾಗಿ ಪ್ರಾರಂಭಿಸುವವರು ಮೊದಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಆಹಾರ ಪರವಾನಿಗ್ರೆ ಅಥವಾ ನೋಂದಣಿ ಪತ್ರ ಪಡೆಯಬೇಕು.
ನೋಂದಣಿ ಪತ್ರ ಪಡೆಯದಿದ್ದವರು ಕೂಡಲೇ ಪ್ರಾಧಿಕಾರದಿಂದ ನೋಂದಣಿ ಪತ್ರ ಪಡೆದುಕೊಳ್ಳಬೇಕು. ದಾಳಿ ಮಾಡಿದ ಸಂದರ್ಭದಲ್ಲಿ ನೋಂದಣಿ ಪತ್ರ ಇಲ್ಲದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮ 2011ರ ಅಡಿಯಲ್ಲಿ ಆಹಾರ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂತೆ-ಸಂತೆಗೆ ಹೋಗಿ ಮತ್ತು ಬೀದಿ ಬೀದಿಗಳಲ್ಲಿ ಆಹಾರ ಧಾನ್ಯಗಳನ್ನು, ಕಾಳು-ಕಡಿ ಮಾರಾಟ ಮಾಡುವವರು,
ಹಣ್ಣಿನ ವ್ಯಾಪಾರ ಮಾಡುವವರು, ಮಾಂಸ ವ್ಯಾಪಾರ ಮಾಡುವವರು ಕೂಡಾ ಆಹಾರ ವ್ಯಾಪಾರಸ್ಥರಾಗಿದ್ದು ಅವರು ಕೂಡಾ ಪ್ರಾಧಿಕಾರದಿಂದ ಪರವಾನಿಗೆ ಪತ್ರ ಪಡೆದುಕೊಳ್ಳ ಬೇಕು ಎಂದು ತಿಳಿಸಿದ್ದಾರೆ.
ಸಿಂದಗಿ ತಾಲೂಕು ಆಹಾರ ಸುರಕ್ಷತಾಧಿಕಾರಿ ರಮೇಶ ಗೆಣ್ಣೂರ, ಬಸವನಬಾಗೇವಾಡಿ ತಾಲೂಕಿನ ಆಹಾರ ಸುರಕ್ಷತಾಧಿಕಾರಿ ಈ.ಎಚ್.ಪಾರೂಕಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.