ಮಳೆ, ಗಾಳಿಗೆ ಧರೆಗುರುಳಿದ ಬಾಳೆ ಮರ
Team Udayavani, Jun 4, 2018, 11:16 AM IST
ನಾಲತವಾಡ: ಪಟ್ಟಣ ಸೇರಿದಂತೆ ರವಿವಾರ ಮಧ್ಯಾಹ್ನ ಏಕಾಏಕಿ ವಿಪರಿತ ಗಾಳಿ ಹಾಗೂ ಗುಡುಗು ಸಮೇತ ಸುರಿದ ಭಾರಿ ಮಳೆಗೆ ಸಮೀಪದ ಹಿರೇಮುರಾಳ ಗ್ರಾಮದಲ್ಲಿ ಸಿಡಿಲಿನ ಅಬ್ಬರಕ್ಕೆ ಎರಡು ಕುರಿಗಳು ಮೃತಪಟ್ಟಿದ್ದು ತೆಂಗಿನ ಮರ ಉರುಳಿ ಬಿದ್ದಿದೆ.
ಗ್ರಾಮದ ಶಿವಾಜಿ ಬೈಲಪತ್ತಾರ ಎಂಬುವರಿಗೆ ಸೇರಿದ ಕುರಿಗಳು ಹಾಗೂ ದಾವಲಸಾಬ್ ಎಂಬುವರಿಗೆ ತೆಂಗಿನ ಮರ ಸೇರಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎ.ಐ. ಸಾಲಿಮಠ ಹಾಗೂ ಪಶು ವೈದ್ಯರಾದ ಸೀತಿಮನಿ ರಾಮಣ್ಣ ವಾಲೀಕಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಸ್ತವ್ಯಸ್ತ: ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಸುರಿದ ಮಳೆಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿದಾಡಿ ಅಂಗಡಿಯೊಳಗೆ ನುಗ್ಗಿ ವ್ಯವಹಾರಕ್ಕೆ ಕೆಲ ಹೊತ್ತು ಅಡಚಣೆಯಾಯಿತು. ಇನ್ನೊಂದೆಡೆ ಬಸ್ ನಿಲ್ದಾಣದಲ್ಲೂ ಸಹ ಹರಿದ ಮಳೆ ನೀರು ಪ್ರಯಾಣಿಕರಿಗೂ ತೀವ್ರ ಪರದಾಡಬೇಕಾಯಿತು.
ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲೆಲ್ಲಾ ಹರಿದಾಡಿದ ವಿಪರಿತ ನೀರಿನ ಪರಿಣಾಮ ವಾಹನ ಹಾಗೂ ಬೈಕ್ ಸವಾರರು ಸಂಕಷ್ಟ ಅನುಭವಿಸಿದ ಪ್ರಸಂಗ ನೆಡೆಯಿತು. ಮಳೆ ಗಾಳಿಗೆ ಪಟ್ಟಣದ ಹಲವು ತೋಟಗಳಲ್ಲಿ ಬಾಳೆ ನೆಲಕ್ಕುರುಳಿತು. ರಮೇಶ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ್ಣ ಕೆಂಭಾವಿ, ರೆವಣೆಪ್ಪ ಕೆಂಭಾವಿ ಅವರಿಗೆ ಸೇರಿದ ಬಾಳೆ ನೆಲಕ್ಕುರುಳಿದ ಪರಿಣಾಮ ರೈತರು ಹಾನಿ ಅನುಭವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.