ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡಮಟ್ಟದ ಸ್ಫೋಟವಾಗಲಿದೆ: ಮತ್ತೆ ಕಿಡಿಕಾರಿದ ಯತ್ನಾಳ್
Team Udayavani, Apr 2, 2021, 2:07 PM IST
ವಿಜಯಪುರ: ಸಚಿವ ಈಶ್ವರಪ್ಪ ಕೂಡ ಯಡಿಯೂರಪ್ಪ ಅವರಂತೆ ಪಕ್ಷ ಕಟ್ಡಿದ ಹಿರಿಯ ನಾಯಕ. ಅವರಿಗೆ ಇಲಾಖೆಯಲ್ಲಿ ಸಚಿವರಾಗಿ ಮುಕ್ತ ಸ್ವಾತಂತ್ರ್ಯ ಇಲ್ಲವಾಗಿದ್ದು, ತಾಳ್ಮೆ ಮೀರಿ ಸ್ಫೋಟಗೊಂಡಿದ್ದಾರೆ. ಸಂಪುಟದಲ್ಲಿ ಇನ್ನೂ ಸ್ಪೋಟಗಳಾಗುತ್ತದೆ ನೋಡ್ತಾ ಇರಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ವಾರ್ಡ್ ನಂ22 ರಲ್ಲಿ ಏಕತಾ ನಗರದಲ್ಲಿ ಸಮುದಾಯ ಭವನದ ಕಾಮಗಾರಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೇ 2 ರ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡ ಮಟ್ಟದ ಸ್ಫೋಟ ಆಗಲಿದೆ. ರಾಜ್ಯದಲ್ಲಿ ಮೋದಿ ಅವರು ಬಯಸಿದ ಬಿಜೆಪಿ ಸರ್ಕಾರ ಇಲ್ಲ, ಅಪ್ಪ-ಮಕ್ಕಳ ಆಡಳಿತದ ಸರ್ಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಪಕ್ಷದ ಶಾಸಕರು ದುಂಬಾಲು ಬಿದ್ದು ಗೋಗರೆದರೂ 10 ಕೋಟಿ ಅನುದಾನ ನೀಡದ ಸಿ.ಎಂ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಿಗೂ ತಿಳಿಯದಂತೆ ನೂರಾರು ಕೋಟಿ ರೂ. ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮುಖ್ಯಮಂತ್ರಿಗಳ ವಿರುದ್ಧದ ಈಶ್ವರಪ್ಪ ಪತ್ರಕ್ಕೆ ಡಿಸಿಎಂ ಗೋವಿಂದ ಕಾರಜೋಳ ಗರಂ
ಮುಖ್ಯಮಂತ್ರಿ, ಮುಖ್ಯಮಂತ್ರಿ ಮಗ ಎಂದ ಮಾತ್ರಕ್ಕೆ ವಿಜಯೇಂದ್ರ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆ ಯಾವ ಸಚಿವರು ತಾನೆ ಸಹಿಸಲು ಸಾಧ್ಯ. ಈಶ್ವರಪ್ಪ ಏನು ಅನನುಭವಿಗಳೇ? ಹಿರಿಯ ಸಚಿವರಾಗಿರುವ ಈಶ್ವರಪ್ಪ ಗಮನಕ್ಕೆ ತರದಂತೆ ಅವರ ಇಲಾಖೆಯ ನೂರಾರು ಕೋಟಿ ರೂ. ಅನುಮೋದನೆ ಇಲ್ಲದೇ ಬಿಡುಗಡೆ ಮಾಡುವುದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ದವೂ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ, ಅರುಣ್ ಸಿಂಗ್ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯೇ ಹೊರತು ಸಿಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಉಸ್ತುವಾರಿ ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಲಿ ಎಂದು ಕುಟುಕಿ, ಸಚಿವ ಸಂಪುಟದ ಎಲ್ಲಾ ಸಚಿವರ ಬದಲಾಗಿ ವಿಜಯೇಂದ್ರನಿಗೆ ಎಲ್ಲ ಖಾತೆ ನೀಡಿಬಿಡಿ ಹರಿಹಾಯ್ದರು.
ಇದನ್ನೂ ಓದಿ: ನನ್ನ ಗಮನಕ್ಕೆ ತರದೆ ಸಿಎಂ ಹಣ ಬಿಡುಗಡೆ ಮಾಡಿದ್ದಾರೆ: ‘ಪತ್ರ’ವನ್ನು ಸಮರ್ಥಿಸಿಕೊಂಡ ಈಶ್ವರಪ್ಪ
ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದರ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವ ನಡೆ ಸರಿಯಾಗಿದೆ. ತಾಳ್ಮೆಗೂ ಮಿತಿ ಇದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇನ್ನಾದರೂ ಅರಿಯಲಿ ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.