ಚುನಾಯಿತರು ಮತ್ತೆ ಸ್ಪರ್ಧೆಗೆ ನಿರ್ಬಂಧ, ಚುನಾವಣಾ ಕಾನೂನು ತಿದ್ದುಪಡಿ ಬೇಕಿದೆ: ಯತ್ನಾಳ
Team Udayavani, Jun 21, 2024, 9:15 AM IST
ವಿಜಯಪುರ : ಈಗಾಗಲೇ ಶಾಸಕ-ಸಂಸದ ಆಗಿದ್ದವರು ಮತ್ತೊಂದು ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯ ಪಟ್ಟಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಆದರೆ ಚುನಾವಣಾ ಕಾನೂನಿಗೆ ಕೆಲ ಬದಲಾವಣೆ ತರುವ ಅಗತ್ಯವಿದೆ ಎಂದರು.
ಒಂದು ಕ್ಷೇತ್ರದಲ್ಲಿ ಅದಾಗಲೇ ಶಾಸಕ, ಸಂಸದ ಆಗಿದ್ದವರು ಮತ್ತೊಂದು ವಿಧಾನಸಭೆ- ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧದ ಕಾನೂನು ಬರಬೇಕಿದೆ ಎಂದರು.
ಇದಲ್ಲದೆ ಉಪ ಚುನಾವಣೆ ಕಾರಣಕ್ಕೆ ನೀತಿ ಸಂಹಿತೆ ಜಾರಿಯಾಗಿ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಲಿದೆ. ಈ ವಿಷಯವಾಗಿಯು ಹೊಸ ಕಾನೂನು ತರಬೇಕು ಎಂದರು.
ಇದನ್ನೂ ಓದಿ: BSY ಜೊತೆ ಹೊಂದಾಣಿಕೆ ಸಂಧಾನಕ್ಕೆ ಯತ್ನ ನಡೆದಿವೆ: ಯತ್ನಾಳ ಪಾಟೀಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.