ಅನಾಥ ಅಸ್ಥಿಗಳಿಗೆ ಯತ್ನಾಳ ಕೃಷ್ಣಾರ್ಪಣ
Team Udayavani, Jun 12, 2021, 10:19 AM IST
ವಿಜಯಪುರ: ಕೋವಿಡ್ ಎಂಬ ಸಾಂಕ್ರಾಮಿಕ ಮಹಾರೋಗ ರಕ್ತ ಸಂಬಂಧಗಳಿದ್ದರೂ ಅಂತ್ಯ ಸಂಸ್ಕಾರಕ್ಕೂ ಬಾರದಂತೆ ಮಾಡಿದ್ದು ಹಲವು ಪ್ರಕರಣದಲ್ಲಿ ಸಂಬಂಧಗಳಿಗೆ ಕೊಳ್ಳಿ ಇಟ್ಟಿದೆ. ಇದಕ್ಕೆ ಇಂಬು ನೀಡುವಂತೆ ವಾರಸುದಾರರಿದ್ದರೂ ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ನೂರಕ್ಕೂ ಹೆಚ್ಚು ಜನರ ಅಸ್ಥಿಗಳನ್ನು ಪಡೆಯಲು ವಾರಸುದಾರರು ಮುಂದೆ ಬಂದಿಲ್ಲ. ಪರಿಣಾಮ ಇದೀಗ ಶಾಸಕ ಯತ್ನಾಳ ಅವರೇ ಸಾಮೂಹಿಕ ಅಸ್ಥಿ ವಿಸರ್ಜನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಇತರೆ ಕಾಯಿಲೆಗಳಿಂದ ಮೃತಪಟ್ಟವರ ಸಂಖ್ಯೆ ಸುಮಾರು 500 ಮೀರುತ್ತದೆ. ಇದರಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರ ಸಂಬಂಧಿ ಗಳಿದ್ದರೂ ಸ್ಮಶಾನಗಳ ಚಿತಾಗಾರದಲ್ಲಿರುವ ಅಸ್ಥಿ ಪಡೆಯಲು ಮುಂದೆ ಬಂದಿಲ್ಲ. ಹೀಗಾಗಿ ವಿವಿಧ ಸ್ಮಶಾನಗಳಲ್ಲಿ ಅನಾಥವಾಗಿದ್ದ ಮೃತರ ಅಸ್ಥಿ ಕುಂಡಗಳನ್ನು ಶಾಸ್ತ್ರೋಕ್ತವಾಗಿ ಕೃಷ್ಣಾ ನದಿಯಲ್ಲಿ ವಿಸರ್ಜಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವ ವಹಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ ನೇತೃತ್ವದಲ್ಲಿ ಈಚೆಗೆ ಅನಾಥವಾದ ಅಸ್ಥಿ ಕುಂಡಗಳಿಗೆ ರಾಜ್ಯ ಸರ್ಕಾರದಿಂದಲೇ ಸಾಮೂಹಿಕ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ವಿಜಯಪುರ ಜಿಲ್ಲೆಯಲ್ಲೂ ಅನಾಥವಾಗಿರುವ ಅಸ್ಥಿಗೆ ಮುಕ್ತಿ ಕಾಣಿಸಲು ಜಿಲ್ಲಾಡಳಿತ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಸಿದ್ಧತೆ ಮಾಡಿಕೊಂಡಿತ್ತು. ವಿಜಯಪುರ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ವಿವಿಧ ಸ್ಮಶಾನಗಳಲ್ಲಿ ಅನಾಥವಾಗಿರುವ ಅಸ್ಥಿಗಳ ವಿವರ ಸಂಗ್ರಹಿಸಿದೆ.
ಆದರೆ ಶಾಸಕ ಯತ್ನಾಳ ಅವರು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಅವರೊಂದಿಗೆ ಸೇರಿ ಅನಾಥವಾಗಿರುವ ಅಸ್ಥಿ ಕುಂಡಗಳಿಗೆ ಶಾಸ್ತ್ರೋಕ್ತ ವಿಸರ್ಜನೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚವಾಗುತ್ತಿದ್ದರೂ, ಎಲ್ಲ ಅಸ್ಥಿಗಳಿಗೂ ಹಿಂದೂ ಧಾರ್ಮಿಕ ವಿ ಧಿ ವಿಧಾನಗಳಂತೆ ಜೀವನದಿ ಕೃಷ್ಣೆಯಲ್ಲಿ ಅರ್ಪಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆಲಮಟ್ಟಿ ಬಳಿಯ ಕೃಷ್ಣಾ ನದಿಗೆ ಯಲಗೂರು ತೀರದಲ್ಲಿ ಅಸ್ಥಿ ವಿಸರ್ಜನೆಗೆ ಸ್ಥಳ ಗುರುತಿಸಿದ್ದು, ಸ್ಥಳೀಯ ಗ್ರಾಪಂ ಆಡಳಿತ ಸಾಮೂಹಿಕ ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೆ ಸ್ಥಳ ಸ್ವತ್ಛ ಮಾಡಿಕೊಡಲು ಮುಂದಾಗಿದೆ. ಮೃತರ ಅನಾಥ ಅಸ್ಥಿಗಳ ವಿಸರ್ಜನೆಗೆ ವಿಜಯಪುರ ನಗರ ಹಾಗೂ ಯಲಗೂರ ಗ್ರಾಮದ ಅರ್ಚಕರು ಆಗಮಿಸುತ್ತಿದ್ದಾರೆ.
ರವಿವಾರ ಸಾಮೂಹಿಕವಾಗಿ ಅಸ್ಥಿ ವಿಸರ್ಜನೆಗೆ ನಗರದ ದೇವಗಿರಿ ಸ್ಮಶಾನದಲ್ಲಿನ 56, ಮನಗೂಳಿ ರಸ್ತೆಯ ಸ್ಮಶಾನದಲ್ಲಿ 3, ಬಬಲೇಶ್ವರ ರಸ್ತೆಯ ಸ್ಮಶಾನದಲ್ಲಿ 2 ಅನಾಥ ಅಸ್ಥಿ ಕುಂಡಗಳನ್ನು ಸಂಗ್ರಹಿಸಲಾಗಿದೆ. ಅನಾಥ ಅಸ್ತಿಗಳ ಸಾಮೂಹಿಕ ವಿಸರ್ಜನೆ ವಿಷಯ ತಿಳಿದ ಇಂಡಿ ಭಾಗದ ಜನರು ತಮ್ಮ ಬಳಿಯೂ ಅನಾಥವಾಗಿರುವ 35 ಅಸ್ಥಿ ಕುಂಡಗಳಿದ್ದು, ಶಾಸಕ ಯತ್ನಾಳ ನೇತƒತ್ವದ ಕಾರ್ಯಕ್ರಮದಲ್ಲಿ ವಿಸರ್ಜನೆಗೆ ಮನವಿ ಮಾಡಿದೆ. ಸಾಮೂಹಿಕ ವಿಸರ್ಜನೆಗೆ ಸಿದ್ಧವಾಗಿರುವ ಅಸ್ಥಿ ಕುಂಡಗಳಲ್ಲಿ ಬಹುತೇಕ ಕುಂಡಗಳಲ್ಲಿ ಮೃತರ ವಾರಸುದಾರರು ಇಲ್ಲದವುಗಳೇನಲ್ಲ. ಕೆಲವನ್ನು ಹೊರತು ಪಡಿಸಿದರೆ ಎಲ್ಲ ಅಸ್ಥಿಗಳಿಗೂ ವಾರಸುದಾರಿದ್ದರೂ, ಕೋವಿಡ್ ಸೋಂಕಿನ ಭೀತಿಯ ಕಾರಣಕ್ಕೆ ಅಸ್ಥಿಗಳನ್ನು ಪಡೆಯಲು ಮುಂದಾಗಿಲ್ಲ. ಮತ್ತೆ ಕೆಲವು ಅಸ್ಥಿ ಪಡೆಯುವಲ್ಲಿ ಲಾಕ್‌ಡೌನ್ ಕೂಡ ಕಾರಣವಾಗಿದೆ ಎನ್ನುವ ಮಾತಿದೆ. ಕೆಲವರು ಆರ್ಥಿಕ ಸಂಕಷ್ಟದಿಂದ ಅಸ್ಥಿ ಸಂಗ್ರಹದ ಸಹವಾಸಕ್ಕೆ ಮುಂದೆ ಬಂದಿಲ್ಲ ಎನ್ನಲಾಗುತ್ತಿದೆ. ಹೀಗೆ ವಿವಿಧ ಕಾರಣಗಳಿಗೆ ವಾರಸುದಾರರಿದ್ದರೂ ತಮ್ಮ ಕುಟುಂಬದವರ ಅಸ್ಥಿಗೆ ಮುಕ್ತಿ ಕಾಣಿಸಲು ವಿಸರ್ಜನೆ ಮುಂದೆ ಬಂದಿಲ್ಲ.
ಸರ್ಕಾರದ ಮಾರ್ಗಸೂಚಿಯಂತೆ ವಾರಸುದಾರರಿಲ್ಲದ ಅಸ್ಥಿಗಳ ವಿಸರ್ಜನೆಗೆ ಪಾಲಿಕೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಶಾಸಕರು,ವೂಡಾ ಅಧ್ಯಕ್ಷರು ಸ್ವಂತ ಹಣದಲ್ಲಿ ಅಸ್ಥಿಗಳನ್ನು ಸಾಮೂಹಿಕ ವಿಸರ್ಜನೆ ಮಾಡಲು ಮುಂದಾಗಿರುವ ಕಾರಣ, ಅವರಿಗೆ ಬಿಡಲಾಗಿದೆ. ನಗರದ ವಿವಿಧ ಸ್ಮಶಾನಗಳಲ್ಲಿರುವ ಅನಾಥ ಅಸ್ಥಿ ಕುಂಡಗಳ ಪರಿಶೀಲನೆ ನಡೆಸಿದ್ದೇವೆ. –ಹರ್ಷಾ ಶೆಟ್ಟಿ, ಪೌರಾಯುಕ್ತ, ಮಹಾನಗರ ಪಾಲಿಕೆ ವಿಜಯಪುರ
ವಾರಸುದಾರರಿದ್ದರೂ ಕಾರಣಾಂತರಗಳಿಂದ ಹಲವರು ಅಸ್ಥಿಗಳನ್ನು ಸಂಗ್ರಹಿಸಲು ಹಾಗೂ ಅಸ್ಥಿ ಕುಂಡ ಪಡೆಯಲು ಮುಂದೆ ಬಂದಿಲ್ಲ. ಹೀಗಾಗಿ ಶಾಸಕ ಯತ್ನಾಳ ಅವರ ನೇತೃತ್ವದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಕೃಷ್ಣೆಯಲ್ಲಿ ನಾವೇ ಸಾಮೂಹಿಕ ಅಸ್ಥಿ ವಿಸರ್ಜನೆ ಮಾಡಲು ಮುಂದಾಗಿದ್ದೇವೆ. ರವಿವಾರ ಬೆಳಗ್ಗೆ ಯಲಗೂರ ಬಳಿ ಅನಾಥ ಅಸ್ಥಿಗಳ ವಿಸರ್ಜನೆಗೆ ನಡೆಯಲಿದೆ. –ಶ್ರೀಹರಿ ಗೊಳಸಂಗಿ ಅಧ್ಯಕ್ಷರು, ವೂಡಾ, ವಿಜಯಪುರ
ಶವಗಳನ್ನು ಚಿತಾಗಾರದಲ್ಲಿ ಚಿತೆ ಮಾಡಲು ಹಾಗೂ ಚಿತಾಭಸ್ಮಗಳನ್ನು ಪಡೆಯಲು ವಾರಸುದಾರರ ಮೃತರ ಹಾಗೂ ವಾರಸುದಾರರ ಆಧಾರ್ ಕಾರ್ಡ್ ಸಂಖ್ಯೆ ಪಡೆಯಲಾಗುತ್ತದೆ. ಕಳೆದ ಎರಡು ತಿಂಗಳಲ್ಲಿ ಕೋವಿಡ್, ಕೋವಿಡ್ ರಹಿತ ಸಾವಿನ ಸಂಖ್ಯೆ ಹೆಚ್ಚಿದ್ದರಿಂದ ಹಲವು ಶವಗಳನ್ನು ಆಂಬ್ಯುಲೆನ್ಸ್ ಮೂಲಕ ಕಳುಹಿಸಿದಾಗ ಅನಿವಾರ್ಯವಾಗಿ ನಾನೇ ಚಿತೆ ಮಾಡಿದ್ದೇನೆ. ಅಸ್ಥಿ ಸಂಗ್ರಹಿಸಿ ಮೃತರ ಹೆಸರು ಬರೆದು ಕುಂಡದಲ್ಲಿ ಇರಿಸಿದ್ದೇನೆ. ಆದರೆ ಈವರೆಗೆ 50 ಮೃತರ ಅಸ್ಥಿಗಳನ್ನು ಪಡೆಯಲು ಕುಟುಂಬದವರು ಬರದಿದ್ದರಿಂದ ಚಿತಾಗಾರದಲ್ಲೇ ದಾಸ್ತಾನು ಮಾಡಿಟ್ಟಿದ್ದೇನೆ. –ಶಂಕರ ಕಾಳೆ ದೇವಗಿರಿ ಚಿತಾಗಾರದ ನೌಕರ, ವಿಜಯಪುರ
–ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.