ಮೋದಿ ಮಾದರಿ ಅನುಸರಿಸಲಿ ಬೊಮ್ಮಾಯಿ: ಯತ್ನಾಳ್
Team Udayavani, Oct 8, 2022, 11:30 PM IST
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಮುಖ ಐದಾರು ಖಾತೆಗಳನ್ನು ತಮ್ಮ ಖಾತೆಗಳನ್ನು ಇರಿಸಿಕೊಂಡಿರುವುದು ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಯಾವ ಖಾತೆಯನ್ನೂ ಹೊಂದಿರಲಿಲ್ಲ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಸರಿಸಲಿ ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿಯವರು ಮುಖ್ಯಮಂತ್ರಿ ಹುದ್ದೆ ಹೊರತಾಗಿ ಉಳಿದ ಎಲ್ಲ ಖಾತೆಗಳನ್ನು ಸಂಪುಟದ ಸಹೋದ್ಯೋಗಿಗಳಿಗೆ ಹಂಚಲಿ ಎಂದರು.
ಈಶ್ವರಪ್ಪರಿಗೆ
ಸಚಿವ ಸ್ಥಾನ ನೀಡಲಿ
ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಏನಾದರೊಂದು ಆಗಲಿ. ಸುಳ್ಳು ಆರೋಪ ಹೊರಿಸಿ ಕೆ.ಎಸ್. ಈಶ್ವರಪ್ಪ ಅವರಿಂದ ರಾಜೀ ನಾಮೆ ಪಡೆದಿದ್ದನ್ನು ಮರಳಿ ಕೊಡಲಿ. ಆರೋಪ ಮುಕ್ತರಾದ ಮೇಲೂ ಅವರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳಲಿ. ದೊಡ್ಡ ಖಾತೆಗಳು ಖಾಲಿ ಇದ್ದು, ಸಂಪುಟ ಪುನಾರಚನೆ ಸಂದರ್ಭ ಸಚಿವ ಸ್ಥಾನ ದಕ್ಕಿದರೆ ಜಿಲ್ಲಾ ಉಸ್ತುವಾರಿ ಆಗುತ್ತೇನೆ ಎಂದರು.
ಹೊರಟ್ಟಿ ಸಭಾಪತಿ ಆಗಲಿ
ಜೆಡಿಎಸ್ ಪಕ್ಷದಲ್ಲಿದ್ದ ಬಸವರಾಜ ಹೊರಟ್ಟಿ ಅವರನ್ನು ಮೇಲ್ಮನೆ ಸಭಾಪತಿ ಮಾಡುವ ಭರವಸೆಯೊಂದಿಗೆ ಬಿಜೆಪಿಗೆ ಕರೆ ತರಲಾಗಿದೆ. ಅವರಿಗೆ ನೀಡಿರುವ ಭರವಸೆಯನ್ನು ಈಡೇರಿಸಲಿ. ಇಲ್ಲದಿದ್ದರೆ ತಪ್ಪು ಸಂದೇಶ ರವಾನಿಸಿದಂತಾಗಲಿದ್ದು, ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.
ರೈಲಿನ ಹೆಸರು
ಬದಲಾವಣೆಗೆ ಸ್ವಾಗತ
ಟಿಪ್ಪು ಎಕ್ಸ್‌ಪ್ರೆಸ್ ಹೆಸರಿನ ಮೈಸೂರು ರೈಲಿಗೆ ಒಡೆಯರ್ ಹೆಸರು ಇರಿಸಿದ್ದನ್ನು ಸ್ವಾಗತಿಸಿದ ಯತ್ನಾಳ್, ಒಡೆಯರ ವಂಶಸ್ಥರಿಗೆ ಮೋಸ ಮಾಡಿದ್ದ ಟಿಪ್ಪು ಹೆಸರನ್ನು ಪ್ರಮುಖ ರೈಲಿಗೆ ನಾಮಕರಣ ಮಾಡಿ ಸಿದ್ದರಾಮಯ್ಯ ಸರಕಾರ ಪ್ರಮಾದ ಮಾಡಿತ್ತು. ಒಡೆಯರ ಆಸ್ಥಾನದಲ್ಲಿ ನೌಕರನಾಗಿದ್ದ ಟಿಪ್ಪು ತಂದೆ ಹೈದರಲಿ ಒಡೆಯರಿಗೆ ಮೋಸ ಮಾಡಿದ್ದ ವಿಶ್ವಾಸ ಘಾತಕ. ಅಂಥ ವಂಚಕನ ಮಗನಾದ ಟಿಪ್ಪು ಹೆಸರನ್ನು ರೈಲಿಗೆ ಇರಿಸಿದ್ದು ಸಿದ್ದು ಹಾಗೂ ಯುಪಿಎ ಸರಕಾರ ಮಾಡಿದ ದೊಡ್ಡ ತಪ್ಪಾಗಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಬೀದರ್ ಗಲಾಟೆ ಸರಿಯಲ್ಲ
ಬೀದರ್‌ನ ಪ್ರಾರ್ಥನಾ ಮಂದಿರದಲ್ಲಿ ನಡೆದ ಗಲಾಟೆ ಸರಿಯಲ್ಲ. ಈ ಹಿಂದೆ ಅಲ್ಲಿ ಅಂಬಾಭವಾನಿ ಮಂದಿರವಿತ್ತು. ಮಥುರಾ, ಅಯೋಧ್ಯೆ ಮಾದರಿಯಲ್ಲಿ ಅಲ್ಲೂ ನಿತ್ಯ ಪೂಜೆ ನಡೆಯಲೇಬೇಕು ಎಂದು ಯತ್ನಾಳ್ ಹೇಳಿದರು.
ಕಾಂಗ್ರೆಸ್ ಭ್ರಷ್ಟರನ್ನು ಪ್ರಧಾನಿ ಬೀದಿಗೆ ತಂದಿದ್ದಾರೆ
ಭ್ರಷ್ಟರನ್ನೆಲ್ಲ ರಸ್ತೆಗೆ ತಂದು ಬಿಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ಭಾರತ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ಹಾಗೂ ಗಾಂ ಧಿ ಪರಿವಾರ ಬೀದಿಗೆ ಬಂದಿರುವುದು ಬಿಜೆಪಿ ದೊಡ್ಡ ಸಾಧನೆ ಅಲ್ಲವೇ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಎಂದೂ ನೆಲದ ಮುಖವನ್ನೇ ನೋಡದ, ಮಣ್ಣಿನ ಮೇಲೆ ಕಾಲಿಡದ ಹಾಗೂ ಹವಾ ನಿಯಂತ್ರಿತ ಕೋಣೆ ಬಿಟ್ಟು ಹೊರಬಾರದ ಗಾಂ ಧಿ ಪರಿವಾರದ ಸೋನಿಯಾ, ರಾಹುಲ್ ಅವರನ್ನು ಬಿಜೆಪಿ ಬೀದಿಗೆ ತಂದಿದೆ. ಭಾರತ ಜೋಡೋ ಹೆಸರಿನಲ್ಲಿ ಬೀದಿಗೆ ಬಂದಿರುವ ನೆಹರೂ ಪರಿವಾರ ಹುಚ್ಚು ಹಿಡಿದವರಂತೆ ರಸ್ತೆಯಲ್ಲಿ ಕುಣಿಯುತ್ತಿದೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.