![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 10, 2024, 2:49 PM IST
ವಿಜಯಪುರ: ವಿಶ್ವಗುರು ಬಸವೇಶ್ವರರ ಜಯಂತಿ ಅಂಗವಾಗಿ ಸಾಮಾಜಿಕ ಕಾಳಜಿಯಿಂದ ಸಂಗಮೇಶ ಬಬಲೇಶ್ವರ ಕುಟುಂಬ ಬಡ ವಿದ್ಯಾರ್ಥಿಯೊಬ್ಬರ ಶೈಕ್ಷಣಿಕ ದತ್ತು ಪಡೆದು ವಿಶೇಷ ರೀತಿಯಲ್ಲಿ ಮಾದರಿಯಾಗಿ ಬಸವೇಶ್ವರ ಜಯಂತಿ ಆಚರಿಸಿದ್ದಾರೆ.
ಅಮ್ಮನ ಮಡಿಲು ಚಾರಿಟೇಬಲ್ ಹೆಸರಿನ ಸೇವಾ ಸಂಸ್ಥೆಯನ್ನು ನಡೆಸುತ್ತಿರುವ ಸಂಗಮೇಶ ಬಬಲೇಶ್ವರ ಹಾಗೂ ಶ್ವೇತಾ ಬಬಲೇಶ್ವರ ಇವರು ತಂದೆ-ತಾಯಿಯನ್ನು ಕಳೆದುಕೊಂಡಿರುವ ಅಭಿಷೇಕ ಜಾಧವ ಎಂಬ ವಿದ್ಯಾರ್ಥಿಯ ಶಿಕ್ಷಣ ದತ್ತು ಪಡೆದು ವಿಶೇಷ ಸ್ಮರಣೆಯೊಂದಿಗೆ ಬಸವ ಜಯಂತಿ ಆಚರಿಸಿದ್ದಾರೆ.
ಅಭಿಷೇಕ ಮುಂದಿನ ಓದಿಗೆ ಆರ್ಥಿಕ ಸಮಸ್ಯೆ ಎದುರಿಸುವುದನ್ನು ತಮ್ಮ ಮನೆ ಪರಿಸರದ ಅಜ್ಜಿಯಿಂದ ತಿಳಿದು ಬಸವೇಶ್ವರ ಜಯುಂತಿ ದಿನ ವಿದ್ಯಾರ್ಥಿಯ ಮನಗೆ ತೆರಳಿ, ಆತನನ್ನು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್‍ಗೆ ಕರೆಸಿದ ಬಬಲೇಶ್ವರ ದಂಪತಿ ಆರ್ಥಿಕ ನೆರವು ನೀಡಿದ್ದಾರೆ.
ಸಂಗಮೇಶ್ವರ ದೇವಸ್ಥಾನದ ಅರ್ಚಕಸಿದ್ದರಾಮಯ್ಯ ಹಿರೇಮಠ ಅವರ ಮೂಲಕ ಅಭಿಷೇಕನನ್ನು ಪತ್ತೆ ಮಾಡಿ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್‍ನಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅಭಿಷೇಕನನ್ನೇ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ.
ಅಲ್ಲದೇ ಅರ್ಚಕ ಸಿದ್ದರಾಮಯ್ಯ ಹಿರೇಮಠ ಅವರ ಮೂಲಕ ಅಭಿಷೇಕನ ಶೈಕ್ಷಣಿಕ ವೆಚ್ಚದ ಸಂಪೂರ್ಣ ವೆಚ್ಚಕ್ಕಾಗಿ ನಗದು ಹಣವನ್ನು ಹಸ್ತಾಂತರಿಸುವ ಮೂಲಕ ಮಾದರಿ ಸೇವೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹೆತ್ತವರಿಲ್ಲದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನನ್ನ ಬದುಕಿನ ಬಹು ಮುಖ್ಯ ಜವಾಬ್ದಾರಿ. ಈ ಸೇವಾ ಕಾರ್ಯದಲ್ಲಿ ಸಿಗುವ ಆತ್ಮತೃಪ್ತಿ ನನಗೆ ಬೇರೆ ಯಾವುದರಲ್ಲೂ ಇಲ್ಲ ಎಂದರು.
ಶ್ವೇತಾ ಬಬಲೇಶ್ವರ ಮಾತನಾಡಿ, ನಮ್ಮ ಮನೆಗೆ ಬಂದ ಅಜ್ಜಿಯೊಬ್ಬರು ನನ್ನೊಂದಿಗೆ ಹಂಚಿಕೊಂಡ ನೋವಿನ ಸಂಗತಿಗೆ ನಾವು ಪರಿಹಾರವಾಗಬೇಕು ಎಂಬ ಆಶಯದೊಂದಿಗೆ ಅಭಿಷೇಕನನ್ನು ಹುಡುಕಿಕೊಂಡು ಹೋಗಿದ್ದೇವೆ. ಆತನ ಶೈಕಣಿಕ ಬದುಕಿಗೆ ನೆರವು ನೀಡಿರುವುದು ಸಮಾಜಕ್ಕೆ ಸಕಾತಾತ್ಮಕ ಸಂದೇಶ ನೀಡುವುದಾಗಿದಯೇ ಹೊರತು, ಪ್ರಚಾರದ ಉದ್ದೇಶವಿಲ್ಲ ಎಂದು ಸಮಜಾಯಿಸಿ ನೀಡಿದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.