ಹಿಂದೂ ಪರ ಕೆಲ್ಸ ಮಾಡಿ,ಸಾಬ್ರ್ ಪರವಾಗಿ ಅಲ್ಲ:ಶಾಸಕ ಯತ್ನಾಳ್ ವಿವಾದ
Team Udayavani, Jun 7, 2018, 12:44 PM IST
ವಿಜಯಪುರ : ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೋಮ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಸಂಘಟನೆಯೊಂದರ ವತಿಯಿಂದ ನಡೆದ ಶಿವಾಜಿ ಮಹಾರಾಜರ ಕುರಿತಾಗಿನ ಸಮಾರಂಭದ ವೇದಿಕೊಯಂದರಲ್ಲಿ ಮಾತನಾಡಿದ ಯತ್ನಾಳ್ ಅವರು ಮಾಡಿರುವ ವಿವಾದಾತ್ಮಕ ಭಾಷಣದ ವಿಡಿಯೋ ಬಹಿರಂಗವಾಗಿದ್ದು ವೈರಲ್ ಆಗಿದೆ.
‘ಸಾಬ್ರ್‌ಗ್ ನಾನ್ ಮೊದಲೇ ಹೇಳಿದ್ದೆ ವೋಟ್ ಹಾಕೋದ್ ಬ್ಯಾಡಿ ಅಂತಾ.ನಮ್ಮವರಿಗೆಲ್ಲಾ ತಾಕೀತ್ ಮಾಡಿದ್ದೆ ,ಕಾರ್ಪೋರೇಟರ್‌ಗಳನ್ನು ಕರೆದು ಹೇಳಿದ್ದೆ, ಇನ್ನು ನೀವು ಹಿಂದೂ ಪರ ಕೆಲ್ಸ ಮಾಡ್ಬೇಕು, ಸಾಬ್ರ್ ಪರವಾಗಿ ಅಲ್ಲ. ನನ್ ಆಫೀಸ್ ಮುಂದೆ ಬುರ್ಖಾ,ಟೋಪಿ ಹಾಕ್ದೋರು ತಪ್ಪಿನೂ ಬರ್ಬಾರ್ದು ಅಂತಾ ಹೇಳಿದ್ದೇನೆ’ ಎಂದರು.
‘ವಿಜಯಪುರ ನಗರದಲ್ಲಿ ನನಗ್ ವೋಟ್ ಹಾಕ್‌ದೋರು ಯಾರು? ಸಾಬ್‌ರಿಗೆ ಕೆಲ್ಸ ಮಾಡುವುದು ಬ್ಯಾಡ’ ಎಂದಿದ್ದಾರೆ.
ಹಿಂದೂ ಪರ ಮಾತನಾಡುವುದೇ ತಪ್ಪಾ ?
ವಿವಾದಾತ್ಮಕ ಹೇಳಿಕೆ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯತ್ನಾಳ್ ‘ದೇಶದಲ್ಲಿ ಹಿಂದೂ ಪರ ಮಾತನಾಡುವುದು ತಪ್ಪಾ’ ಎಂದು ಪ್ರಶ್ನಿಸಿದರು.
‘ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ದೇಶ ವಿರೋಧಿ ಹೇಳಿಕೆ ಕೊಟ್ಟರೆ ಅವರ ವಿರುದ್ಧ ಕ್ರಮವಿಲ್ಲ. ಓವೈಸಿ ಮಾತನಾಡಿದರೆ ಸರಿ ನಾನು ಮಾತನಾಡಿದರೆ ತಪ್ಪೇ’ ಎಂದು ಪ್ರಶ್ನಿಸಿದರು.
‘ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಹಫ್ತಾ ವಸೂಲು, ದೌರ್ಜನ್ಯ ಆಗುತ್ತಿದೆ ಹಾಗಾಗಿ ನಾನು ಮಾತನಾಡಿದ್ದೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.