ಏತ ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆ: ಶಿವಾನಂದ
Team Udayavani, Mar 14, 2020, 6:23 PM IST
ಬಸವನಬಾಗೇವಾಡಿ: ಮತಕ್ಷೇತ್ರ ವ್ಯಾಪ್ತಿ ಕೊನೆ ಗ್ರಾಮದ ಜನತೆಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಿದ್ದು ಬರಲಿರುವ ದಿನಗಳಲ್ಲಿ ಅನ್ನದಾತರ ಜಮೀನುಗಳಿಗೆ ವಿವಿಧ ಏತ ನೀರಾವರಿ ಯೋಜನೆಗಳ ನೀರನ್ನು ಹರಿಸುವುದು ಪ್ರಥಮ ಆದ್ಯತೆಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ನಾಗವಾಡ ಗ್ರಾಮದಲ್ಲಿ ಕೃಷ್ಣಾ ಕಾಡಾ ಕೆಬಿಜೆಎನ್ನೆಲ್ ಎಸ್‌ಡಿಪಿ 2019-20ನೇ ಯೋಜನೆ ಅಡಿಯಲ್ಲಿ ನಾಗವಾಡ-ಗೊಳಸಂಗಿ ರಸ್ತೆ ಅಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆ ಎಸ್‌ಸಿಪಿ 2019-20ನೇ ಯೋಜನೆ ಅಡಿಯಲ್ಲಿ ನಾಗವಾಡ ತಾಂಡಾ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸಿದ್ದು ಬರಲಿರುವ ದಿನಮಾನಗಳಲ್ಲಿ ಕ್ಷೇತ್ರದ ಅನ್ನದಾತರ ಜಮೀನಗಳಿಗೆ ವಿವಿಧ ಏತ ನೀರಾವರಿ ಯೋಜನೆಗಳಿಂದ ನೀರು ಹರಿಸಲು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
13 ತಿಂಗಳ ಅವ ಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಈ ಹಿಂದಿನ ಯಾವುದೇ ಸಚಿವರು ಮಾಡದ ಕಾರ್ಯವನ್ನು ಕಡಿಮೆ ಅವಧಿಯಲ್ಲಿ ಮಾಡಿದ್ದೇನೆ. ವಿಶೇಷವಾಗಿ ಜಿಲ್ಲೆಗೆ ವಿವಿಧ ಸೌಲಭ್ಯ ಕಲ್ಪಿಸಿದ್ದು ಜಿಲ್ಲಾಸ್ಪತ್ರೆ, ನವಜಾತು ಶಿಶು ಆಸ್ಪತ್ರೆ, ತಾಲೂಕಾಸ್ಪತ್ರೆಗಳಿಗೆ ವಿಶೇಷ ಅನುದಾನ ತಂದು ಸಾಮಾನ್ಯ ಜನರ ಸೇವೆಗೆ ಶ್ರಮಿಸಿದ್ದೇನೆ.
ಕ್ಷೇತ್ರದಲ್ಲಿ 2 ಪಾಲಿಟೆಕ್ನಿಕ್, 3 ಸರಕಾರಿ ಡಿಗ್ರಿ ಕಾಲೇಜು ಮಂಜೂರು ಮಾಡಿಸಿ ಕಾರ್ಯಾರಂಭ ಮಾಡಿದ್ದು ಕೊಲ್ಹಾರ ಪಟ್ಟಣಕ್ಕೆ ಈ ಹಿಂದಿನವರು 10 ಕೋಟಿ ರೂ. ಅನುದಾನ ತಂದಿಲ್ಲ, ಆದರೇ ನಾನು 50 ಕೋಟಿ ಅನುದಾನ ತಂದು ಕೊಲ್ಹಾರ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆದರೆ ಕೆಲವರು ಈ ಅಭಿವೃದ್ಧಿಗೆ ಅಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕ್ಷೇತ್ರದ ಜನತೆಯ ಆಶೀರ್ವಾದ ಮತ್ತು ಸಹಕಾರ ಇರುವರೆಗೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಆದರೇ ಅಧಿಕಾರವಧಿಯಲ್ಲಿ ಕೆಲಸ ಮುಖ್ಯವಾಗಬೇಕು. ಅಭಿವೃದ್ಧಿ ಚಲನಶೀಲವಾಗಬೇಕು. ರೈತರ ಜಮೀನಗಳಿಗೆ ನೀರು ಹರಿಸಲು ವಿದ್ಯುತ್ ಸಮಸ್ಯೆ ಆಗಬಾರದು ಎಂದು ಉಕ್ಕಲಿ-ರೋಣಿಹಾಳ ಗ್ರಾಮದಲ್ಲಿ 110 ಕೆವಿ ಸ್ಟೇಶನ್ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿವೆ. ಕ್ಷೇತ್ರದ ಬಹುತೇಕ ರಸ್ತೆಗಳು ಅಭಿವೃದ್ಧಿಯಾಗಿದ್ದು ನಾಗವಾಡ ಗ್ರಾಮಸ್ಥರ ಬೇಡಿಕೆ ಅನ್ವಯ ಮುಂಬರುವ ದಿನಗಳಲ್ಲಿ ನಾಗವಾಡ ಗುಡ್ಡಕ್ಕೆ ಹಾಗೂ ಮಣ್ಣೂರ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಹಿರಿಯ ಮುಖಂಡ ರಮೇಶ ಸೂಳಿಭಾವಿ ಮಾತನಾಡಿ, ಶಾಸಕರು ಕ್ಷೇತ್ರದ ರಸ್ತೆಗಳನ್ನು ಪಟ್ಟಿ ಮಾಡಿ ಅಭಿವೃದ್ಧಿ ಪಡಿಸಿದ್ದು ನೀರಿನ ಸಮಸ್ಯೆ ದೂರಾಗಿಸಿದ್ದಾರೆ. ಜನಪರ ಕಾಳಜಿಯಿಂದ ಗ್ರಾಮಸ್ಥರನ್ನು ಭೇಟಿ ಮಾಡಿ ಕಾಮಗಾರಿಗೆ ರೂಪುರೇಷೆ ಸಿದ್ಧಪಡಿಸಿ ಸರಕಾರದಿಂದ ಅನುದಾನ ತರುತ್ತಿರುವುದು ಶಾಸಕರ ಅಭಿವೃದ್ಧಿ ಪರ ಚಿಂತನೆಯಾಗಿದೆ ಎಂದು ಹೇಳಿದರು.
ಬಸಯ್ಯ ಹಿರೇಮಠ, ರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಹನುಮಂತ್ರಾಯಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಕುಮಾರ ಮ್ಯಾಗೇರಿ, ಹನುಮಂತ್ರಾಯ ಮೇಲ್ದಾಪುರ, ಭೋಜು ಪವಾರ, ಹುಚ್ಚಪ್ಪ ಕಮತಗಿ, ಬಂದೇನವಾಜ್ ಬಿಜಾಪುರ, ಶಂಕರಗೌಡ ಬಿರಾದಾರ, ಮೈಬೂಬಸಾಬ ಹತ್ತರಕಿ, ರೆಹಮಾನಸಾಬ ವಾಲೀಕಾರ ಸೇರಿದಂತೆ ಅನೇಕರು ಇದ್ದರು. ಎಸ್.ಎಸ್. ಚಿಮ್ಮಲಗಿ ಸ್ವಾಗತಿಸಿದರು. ಶಿವಾನಂದ ಶೆಟ್ಟೆಪ್ಪಗೋಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.