ಹೆದ್ಧಾರಿ ಕಾಮಗಾರಿಗೆ ಭೂಮಿಪೂಜೆ
ಅಂತಾರಾಜ್ಯಗಳ ಸಂಪರ್ಕಕ್ಕೆ ತೂಗು ಸೇತುವೆಯಾದ ರಸ್ತೆ: ಶಾಸಕ ಪಾಟೀಲ
Team Udayavani, Jan 31, 2020, 3:42 PM IST
ಬಸವನಬಾಗೇವಾಡಿ: ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ನಿರ್ಮಾಣದಿಂದ ಬಸವನಬಾಗೇವಾಡಿ, ತಾಳಿಕೋಟಿ ತಾಲೂಕು ಸೇರಿದಂತೆ ಅನೇಕ ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಳದೊಂದಿಗೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಎರಡು ರಾಜ್ಯಗಳ ಸಂಪರ್ಕಕ್ಕೆ ಈ ರಾಜ್ಯ ಹೆದ್ದಾರಿ ತೂಗು ಸೇತುವೆಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು, ಜಲಸಾರಿಗೆ ಇಲಾಖೆ ಯೋಜನೆಯಡಿ ಉಕ್ಕಲಿ ತಾಂಡಾದಿಂದ ಹತ್ತರಕಿಹಾಳವರೆಗೆ 2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2004ರಲ್ಲಿ ಪ್ರಥಮ ಬಾರಿಗೆ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಪ್ರಚಾರದ ವೇಳೆ ತೆರಳಬೇಕಾದರೆ ರಸ್ತೆ ಸಂಪರ್ಕವಿಲ್ಲದೆ.
ಗುಡ್ಡಸುತ್ತಿ ಮೈಲಾರಲಿಂಗಕ್ಕೆ ಬಂದ ಹಾಗೆ ಕೆಲ ಗ್ರಾಮಗಳಿಗೆ ಬರುವಂತ ಸ್ಥಿತಿ ಇತ್ತು. ಇನ್ನೂ ಕೆಲ ಹಳ್ಳಿಗಳಿಗೆ ಹೋಗಬೇಕಾದರೆ ಹುಡಿಕಿಕೊಂಡು ಹೋಗಿದ್ದೆ. ಆದರೆ ಇಂದು ಕ್ಷೇತ್ರದ ಯಾವುದೇ ಹಳ್ಳಿಗೂ ಹೋಗಬೇಕಾದರೆ ಹತ್ತಾರು ರಸ್ತೆಗಳ ಸಂಪರ್ಕವನ್ನು ಕಲ್ಪಿಸಲಾಗಿದೆ. ನೀವು ಯಾವ ದಿಕ್ಕಿನಿಂದವಾದರು ಕೂಡಾ ನಿಮ್ಮ ಹಳ್ಳಿಗಳಿಗೆ ಹೋಗಲು ರಸ್ತೆಗಳು ನಿರ್ಮಾಣವಾಗಿವೆ ಎಂದು ಹೇಳಿದರು.
ಡೋಣಿ ನದಿ ಭಾಗದ ಹತ್ತಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ಇಲ್ಲದೆ ಡೋಣಿ ನದಿ ಭಾಗದ ಹಳ್ಳಿಗಳ ಜನರು ಮತ್ತು ರೈತರು ಬಹಳ ಕಷ್ಟಪಡುತ್ತಿದ್ದರು. 2003ರಲ್ಲಿ ನಾನು ತಿಕೋಟಾ ಶಾಸಕಯಿದ್ದ ಸಂದರ್ಭದಲ್ಲಿ ಡೋಣಿ ನದಿ ಭಾಗದ ಹಳ್ಳಿಯೊಂದಕ್ಕೆ ಬಂದ ಸಂದರ್ಭದಲ್ಲಿ ಮಳೆ ಆಯಿತು. ನಂತರ ನಾನು ವಿಜಯಪುರಕ್ಕೆ ತೆರಳಬೇಕಾದರೆ ಡೋಣಿ ನದಿಯಲ್ಲಿ ನನ್ನ ವಾಹನ ಸಿಲುಕಿಕೊಂಡಿತ್ತು. ಹತ್ತು ಜನರ ಸಹಾಯದೊಂದಿಗೆ ವಾಹನ ತೆಗೆದುಕೊಂಡು ಹೋದ ನೆನಪು ಇಂದಿಗೂ ಇದೆ ಎಂದರು.
ಬಸವನಬಾಗೇವಾಡಿ ಪಟ್ಟಣ ಜಿಲ್ಲೆಯಲ್ಲೇ ಒಂದು ಮಾದರಿ ಪಟ್ಟಣವಾಗಿ ಹೊರ ಹೊಮ್ಮುತ್ತಿದೆ. ಈ ಪಟ್ಟಣದಲ್ಲಿ ಬೇರೆ-ಬೇರೆ ಭಾಗದ ಜನರು ಬಂದು ವಾಸಿಸಲು ಮುಂದಾಗುತ್ತಿದ್ದಾರೆ. ಪಟ್ಟಣದಲ್ಲಿ ಒಳಚರಂಡಿ, 24/7 ಕುಡಿಯುವ ನೀರು, ನಿರಂತರ ವಿದ್ಯುತ್, ಸುಸಜ್ಜಿತವಾದ ರಸ್ತೆಗಳು ಸೇರಿದಂತೆ ಅನೇಕ ಮೂಲ ಸೌಲಭ್ಯಗಳು ದೊರೆತ ಹಿನ್ನೆಲೆಯಿಂದ ಪಟ್ಟಣ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಅಣ್ಣಾಸಾಹೇಬಗೌಡ ಪಾಟೀಲ, ಅಪ್ಪಾಸಾಹೇಬಗೌಡ ಇಂಡಿ, ಸುಭಾಸ ಕಲ್ಯಾಣಿ, ಬಸಪ್ಪ ಹನಮಶೆಟ್ಟಿ, ನಾನಾಸಾಹೇಬ ಪಾಟೀಲ, ಪಂಡಿತ ಹೊಜಿ, ಬಿ.ಬಿ. ಬಿರಾದಾರ, ಭಾರತಿ ಚಲವಯ್ಯ, ಎಸ್.ಎನ್. ಕೆರೂರ, ಭೀಮನಗೌಡ ಬಿರಾದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.