ವಿವಿಧೆಡೆ ಸಾಧಾರಣ ಮಳೆ
Team Udayavani, Jun 27, 2020, 3:25 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ಮನಗೂಳಿ, ಮುತ್ತಗಿ, ಹೂವಿನಹಿಪ್ಪರಗಿ, ಜಾಯವಾಡಗಿ, ಕಾನ್ನಾಳ ಸೇರಿದಂತೆ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ.
ಬೆಳಗ್ಗೆಯಿಂದಲ್ಲೇ ಬಿಸಿಲಿನ ತಾಪ ಹೆಚ್ಚಾಗಿತ್ತು. ಆಗಾಗ್ಗೆ ಮೋಡ ಕವಿದ ವಾತಾವರಣವಿದ್ದರೂ ಶಕೆ ಇತ್ತು. ಸಂಜೆ ಪಟ್ಟಣದಲ್ಲಿ ಕೆಲ ಹೊತ್ತು ತುಂತುರು ಮಳೆಯಾಯಿತು. ಮಧ್ಯರಾತ್ರಿ ಪಟ್ಟಣ ಸೇರಿದಂತೆ ವಿವಿಧೆಡೆ ಕೆಲ ಗಂಟೆಯವರೆಗೆ ಉತ್ತಮ ಮಳೆ ಸುರಿಯಿತು. ನಂತರ ಜಿಟಿ ಜಿಟಿ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ. ಮಳೆಯಿಂದಾಗಿ ಹೊಲದ ಬದುವು, ವಿವಿಧೆಡೆ ತಗ್ಗು ಪ್ರದೇಶ, ರಸ್ತೆ, ಚರಂಡಿ ತುಂಬಿ ಹರಿದಿವೆ. ಮಳೆಯಿಂದಾಗಿ ಮುಂಗಾರು ಬೆಳೆಗೆ ಅನುಕೂಲವಾಗಿದ್ದು, ರೈತರಿಗೆ ಸಂತಸ ಮನೆ ಮಾಡಿದೆ.
ಜತೆಗೆ ಇನ್ನೂ ಬಿತ್ತನೆಗೆ ಅಣಿಯಾಗಿರುವ ರೈತರಿಗೆ ಮಳೆ ನಿರೀಕ್ಷೆ ಹೆಚ್ಚಿಸಿದೆ. ತಾಲೂಕಿನ ವಿವಿಧೆಡೆ ಗುರುವಾರ ಬಸವನಬಾಗೇವಾಡಿ- 23.3 ಮಿ.ಮೀ, ಮಟ್ಟಿಹಾಳ- 31.6 ಮಿ.ಮೀ, ಆಲಮಟ್ಟಿ- 15.5 ಮಿ.ಮೀ, ಮನಗೂಳಿ- 15 ಮಿ.ಮೀ, ಹೂವಿನಹಿಪ್ಪರಗಿ- 63.2 ಮಿ.ಮೀ, ಆರೇಶಂಕರ ಮಳೆ ಮಾಪನ ಕೇಂದ್ರದಲ್ಲಿ 28 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.