ಸಾವಯವ ಕೃಷಿಯಲ್ಲಿ ಬಸವನಾಡು ಫಸ್ಟ್
ವಿಜಯಪುರ ಜಿಲ್ಲೆಯೊಂದರಲ್ಲೇ 8500 ಅರ್ಜಿ ಇರುವುದೇ ಇದಕ್ಕೆ ಸಾಕ್ಷಿ.
Team Udayavani, Feb 19, 2021, 6:29 PM IST
ವಿಜಯಪುರ: ರಸಗೊಬ್ಬರ ಬಳಕೆಗೆ ಒಗ್ಗಿಕೊಳ್ಳದ ವಿಜಯಪುರ ಜಿಲ್ಲೆ ಪಾರಂಪರಿಕ ಸಾವಯವ ಕೃಷಿ ಉತ್ಪಾದನೆ ಮಾತ್ರವಲ್ಲ, ಸಾವಯವ ಉತ್ಪಾದನೆ
ದೃಢೀಕರಣ ಪ್ರಮಾಣೀಕರಣ ಪಡೆಯುವಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಂದ ಪ್ರಸಕ್ತ ವರ್ಷದಲ್ಲಿ ಸಾವಯವ ಕೃಷಿ ಉತ್ಪಾದನೆ ದೃಢೀಕರಣ ಪ್ರಮಾಣ ಪತ್ರಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಶೇ.48 ರಷ್ಟು ವಿಜಯಪುರ ಜಿಲ್ಲೆಗೆ ಸೇರಿದ್ದವು. ಇದು ಸಾವಯವ ಕೃಷಿ ಉತ್ಪಾದನೆಗೆ ಬಸವನಾಡಿನ ರೈತರು ತೋರುತ್ತಿರುವ ಬದ್ಧತೆಗೆ ಸಾಕ್ಷಿ.
ಅಖಂಡ ವಿಜಯಪುರ ಜಿಲ್ಲೆಯಲ್ಲಿ 2005ರಲ್ಲಿ ವಿಜಯಪುರ-ಬಾಗಲಕೋಟೆ ಸಾವಯವ ಕೃಷಿ ಪ್ರಾಂತೀಯ ಸಂಘಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದರ ಅ ಧೀನದಲ್ಲೇ ವಿಜಯಪುರ ಜಿಲ್ಲೆಯ ರೈತರು ಸಾವಯವ ಕೃಷಿ ಉತ್ಪಾದಿಸಿ, ಮಾರುಕಟ್ಟೆ ಕಂಡುಕೊಂಡಿದ್ದರು. ಆದರೆ ಆಡಳಿತಾತ್ಮಕ ಕಾರಣಗಳಿಂದಾಗಿ 2018 ರಲ್ಲಿ ಜಿಲ್ಲೆಯ ಸಾವಯವ ಕೃಷಿ ಉತ್ಪಾದಕರು ಪ್ರತ್ಯೇಕ ಒಕ್ಕೂಟ ರಚಿಸಿಕೊಂಡಿದ್ದಾರೆ.
ಇದರ ಅಡಿಯಲ್ಲಿ ಸಾವಯವ ಕೃಷಿ ಉತ್ಪಾದನೆ ಮಾಡುವ ರೈತರ 30 ಸಂಘಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿ 1300 ರೈತರು ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಉತ್ಪಾದನೆ ಮಾಡುವ ತಮ್ಮ ಉತ್ಪಾದನೆಗಳಿಗೆ ಸಾವಯವ ಕೃಷಿ ಪ್ರಮಾಣೀಕರಣ ಮತ್ತು ದೃಢೀಕರಣ ಪಡೆದಿದ್ದಾರೆ. ಇದಲ್ಲದೇ 2016 ರಿಂದ 2019 ರವರೆಗೆ ಕೃಷಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯಲ್ಲಿ ಜಿಲ್ಲೆಯ ಅವಿಭಜಿತ 5 ತಾಲೂಕುಗಳಲ್ಲಿ ತಲಾ 150 ರೈತರಂತೆ ಜಿಲ್ಲೆಯಲ್ಲಿ
750 ರೈತರು ಸಾವಯವ ಕೃಷಿ ಉತ್ಪಾದನೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಹೊಸದಾಗಿ 750 ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಕೃಷಿ ಉತ್ಪಾದನೆಗೆ ರೈತರು ಜಮೀನು ಹದಗೊಳಿಸಿಕೊಂಡಿದ್ದಾರೆ.
ಪರಿಣಾಮ ಸ್ವಯಂ ಪ್ರೇರಣೆ ಹಾಗೂ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ಜಿಲ್ಲೆಯ ರೈತರು ತಮ್ಮ ಉತ್ಪನ್ನಗಳಿಗೆ ಸಾವಯವ ಪ್ರಮಾಣೀಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೊಸದಾಗಿ ತಮ್ಮ ಉತ್ಪನ್ನಗಳಿಗೆ ಸಾವಯವ ಕೃಷಿ ಪ್ರಮಾಣೀಕರಣ ಮತ್ತು
ದೃಢೀಕರಣ ಪಡೆಯಲು ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 8500 ಅರ್ಜಿಗಳು ದೃಢೀಕರಣಗೊಂಡಿವೆ. ಈ ಪ್ರಮಾಣದಲ್ಲಿ ಸಾಯವ ದೃಢೀಕರಣ ಪತ್ರ ಪಡೆದ
ಜಿಲ್ಲೆ ಎಂಬ ಹೆಗ್ಗಳಿಕೆ ರಾಜ್ಯದಲ್ಲೇ ವಿಜಯಪುರ ಜಿಲ್ಲೆಗೆ ಸಿಕ್ಕಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 20 ಸಾವಿರ ಅರ್ಜಿಗಳಿಗೆ
ಮಾತ್ರ ದೃಢೀಕರಣ ಸಿಕ್ಕಿದ್ದು, ಇದರಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲೇ 8500 ಅರ್ಜಿ ಇರುವುದೇ ಇದಕ್ಕೆ ಸಾಕ್ಷಿ.
ಇನ್ನು ಸಾವಯವ ಕೃಷಿಯಲ್ಲಿ ಪ್ರಮುಖವಾಗಿರುವ ಸಿರಿಧಾನ್ಯ ಉತ್ಪಾದನೆ ಉತ್ತೇಜನಕ್ಕೂ ಜಿಲ್ಲೆಯ ರೈತರು ಆದ್ಯತೆ ನೀಡಿದ್ದಾರೆ. ಇದಲ್ಲದೇ ಸಿರಿಧಾನ್ಯಗಳನ್ನು
ಸಂಸ್ಕರಿಸಿ ಗ್ರಾಹಕರಿಗೆ ತಲುಪಿಸಲು ಅವಿಭಜಿತ ಐದೂ ತಾಲೂಕಿನಲ್ಲಿ ತಲಾ 20 ಲಕ್ಷ ರೂ. ಮೊತ್ತದ ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.
ಸರ್ಕಾರ ಸಾವಯವ ಕೃಷಿಭಾಗ್ಯ ಯೋಜನೆ ಹಾಗೂ ಪಾರಂಪರಿಕ ಕೃಷಿ ಯೋಜನೆಯಲ್ಲಿ ಸರ್ಕಾರ ಶೇ.50 ರಷ್ಟು ಸಹಾಯ ಧನದ ನೆರವು ನೀಡಿದೆ.ವಿಜಯಪುರ ತಾಲೂಕಿನಲ್ಲಿ 3 ವರ್ಷದ ಹಿಂದೆಯೇ ಸಂಸ್ಕರಣಾ ಘಟಕ ಕಾರ್ಯಾರಂಭ ಮಾಡಿದ್ದರೆ, ಸಿಂದಗಿ ತಾಲೂಕಿನಲ್ಲಿ ವರ್ಷದ ಹಿಂದೆ ಸಂಸ್ಕರಣೆ ಆರಂಭಗೊಂಡಿದೆ. ಇಂಡಿ, ಬಸವನಬಾಗೇವಾಡಿ ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ಘಟಕಗಳು ಸಂಸ್ಕರಣೆ ನಡೆಸಿದ್ದರೆ, ಮುದ್ದೇಬಿಹಾಳ ತಾಲೂಕಿನಲ್ಲಿ ಸಂಸ್ಕರಣೆ ಆರಂಭಕ್ಕೆ ಸಿದ್ಧತೆ ಅಂತಿಮಗೊಂಡಿದೆ.
ಪರಿಣಾಮ ಸಿರಿಧಾನ್ಯ ಯೋಜನೆಯಲ್ಲಿ ನವಣೆ, ಹಾರಕ, ಬರಕ, ಸಜ್ಜೆಯಂತ ಸಿರಿಧಾನ್ಯ ಬೆಳೆಯಲು ರೈತರಿಗೆ ಉತ್ತೇಜನ ನೀಡಲು ಸರ್ಕಾರವೂ ಯೋಜನೆ
ರೂಪಿಸಿದೆ. ನವಣೆ ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 10 ಸಾವಿರ ರೂ. ಸಹಾಯ ಧನ ನೀಡಿದ್ದರಿಂದ 2019ರಲ್ಲಿ 5000 ಎಕರೆ ಪ್ರದೇಶದಲ್ಲಿ
ನವಣೆ ಬೆಳೆದಿದ್ದು, ಪ್ರಸಕ್ತ ವರ್ಷದ ಹಂಗಾಮಿನಲ್ಲಿ 2500 ಎಕರೆ ಪ್ರದೇಶದಲ್ಲಿ ನವಣೆ ಬೆಳೆಯಲಾಗಿದೆ.
ಆದರೆ ಜಿಲ್ಲೆಯಲ್ಲಿ ಸರ್ಕಾರದ ನೆರವಿನ ಯೋಜನೆಯಲ್ಲಿ ನವಣೆ ಬೆಳೆದ ರೈತರಿಗೆ ಮಾರುಕಟ್ಟೆಯದ್ದೇ ಸಮಸ್ಯೆ. ಕಳೆದ ವರ್ಷ ಸಿರಿಧಾನ್ಯ ಮಾರಾಟವಾಗದೇ ಕೊಳೆಯುತ್ತಿದ್ದು, ಪ್ರಸಕ್ತ ವರ್ಷದ ಬೆಳೆಗೂ ಮಾರುಕಟ್ಟೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಅಗತ್ಯ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಿ ಉತ್ತೇಜನ ನೀಡಲಿ ಎಂಬುದು ಜಿಲ್ಲೆಯ ರೈತರ ಒಕ್ಕೊರಲ ಆಗ್ರಹವಾಗಿದೆ.
ಜಿಲ್ಲೆಯ ಬಹುತೇಕ ರೈತರು ಸಾವಯವ ಕೃಷಿಯನ್ನೇ ಅವಲಂಬಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯನ್ನು ಸಾವಯವ ಕೃಷಿ ಕ್ಷೇತ್ರವಾಗಿಸುವುದು ಸುಲಭವೂ ಇದೆ. ಆದರೆ ಜಿಲ್ಲೆಯ ಸಾವಯವ ಕೃಷಿ ಹಾಗೂ ಸಿರಿಧಾನ್ಯ ಉತ್ಪಾದನೆಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಆದಲ್ಲಿ ಮಾರುಕಟ್ಟೆ ಕಲ್ಪಿಸಿಕೊಳ್ಳಲು ಸುಲಭವಾಗಲಿದೆ.
ಮಹಾದೇವ ಅಂಬಲಿ,
ಜಿಲ್ಲಾಧ್ಯಕ್ಷ ಸಾವಯವ ಕೃಷಿ ಸಂಘಗಳ
ಪ್ರಾಂತೀಯ ಒಕ್ಕೂಟ.
*ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.