ಬಾಸ್ಕೆಟ್ ಬಾಲ್‌ಕೋರ್ಟ್ ಉದ್ಘಾಟನೆ
Team Udayavani, Feb 19, 2018, 3:39 PM IST
ವಿಜಯಪುರ: ನಗರದಲ್ಲಿ ಸುಸಜ್ಜಿತ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಗೊಂಡಿದೆ. ಇಂತಹ ಮಹತ್ವದ ಅವಕಾಶ ಎಲ್ಲರಿಗೂ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಈ ಮೈದಾನದ ಸದ್ಭಳಕೆ ಮಾಡಿಕೊಡು ಜಿಲ್ಲೆಯ ಬಾಸ್ಕೆಟ್ ಬಾಲ್ ಕ್ರೀಡಾಪಟುಗಳು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರದ ಕೀರ್ತಿ ಪಸರಿಸಬೇಕು ಎಂದು ಸೈನಿಕ ಶಾಲೆ ಪ್ರಾಚಾರ್ಯ ತಮೋಜಿತ್ ಬಿಸ್ವಾಸ್ ಹೇಳಿದರು. ವಿಜಯಪುರದ ಸೈನಿಕ ಶಾಲೆಯಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಸುಸಜ್ಜಿತ ಮ್ಯಾಪಲ್ ವುಡ್ ಬಾಸ್ಕೆಟ್ ಬಾಲ್ ಕೋರ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಮೈದಾನದ ನೆಲವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮ್ಯಾಪಲ್ ವುಡ್ ನಿಂದ ಹಾಸಲಾಗಿದೆ. ಎರಡೂ ಬದಿಗೆ ಚಲಿಸಬಲ್ಲ ಬಾಸ್ಕೆಟ್ ಬಾಲ್ ಪೋಸ್ಟ್ ನಿರ್ಮಿಸಲಾಗಿದೆ. ಮೈದಾನದ ಸುತ್ತಲೂ ಆರು ನೂರು ಪ್ರೇಕ್ಷಕರು ಪಂದ್ಯಗಳನ್ನು ಸುಲಭವಾಗಿ ವೀಕ್ಷಿಸಲು ಗ್ಯಾಲರಿ ನಿರ್ಮಿಸಲಾಗಿದೆ. ಮತ್ತೂಂದೆಡೆ ವಿಶಾಲವಾದ ಡಿಜಿಟಲ್ ಸ್ಕೋರ್ ಬೋರ್ಡ್ ಅಳವಡಿಸಲಾಗಿದೆ ಮತ್ತು ಹೊನಲು ಬೆಳಕಿನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ ಎಂದು ಹೇಳಿದರು.
ಮುರುಳೀಧರನ್, ಕೆ. ದಾಮೋದರ, ಡಾ| ರಾಮರಾವ್, ಮಂಜುನಾಥ ನಾಯಕ, ಮುರುಗೇಶ ಕಿನ್ನಾಳ, ಪಿ.ಎಂ. ಜೋಸೆಫ್, ಸುಕೇಶ ನಾಯಕ, ಎಂ.ಎಚ್. ಸುರೇಶ, ರಾಜು ಜೋಸೆಫ್, ವರಿಷ್ಠ ಶಿಕ್ಷಕ ಜಿ. ರಾಮಮೂರ್ತಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.