ಸಾಕು ಪ್ರಾಣಿಗಳ ಪ್ರೀತಿ ಅರಿತುಕೊಳ್ಳಿ
ಶ್ವಾನಗಳಿಗೆ ಉಚಿತ ರೆಬಿಸ್ ಲಸಿಕ
Team Udayavani, Feb 14, 2021, 5:24 PM IST
ಮುದ್ದೇಬಿಹಾಳ: ಸಾಕು ನಾಯಿಯಿಂದ ಬಹಳಷ್ಟು ರೋಗಗಳು ಕಡಿಮೆಯಾಗುತ್ತವೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.
ಸಾಕು ನಾಯಿಯಿಂದ ಇರುವ ಅನುಕೂಲಗಳು, ಅದರಿಂದ ದೊರೆಯುವ ಪ್ರೀತಿ, ವಿಶ್ವಾಸ ಮುಂತಾದವುಗಳನ್ನು ನಾವು ಅರಿತುಕೊಳ್ಳಬೇಕು
ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ| ಪ್ರಾಣೇಶ ಜಹಾಗಿರದಾರ ಹೇಳಿದರು.
ಪಟ್ಟಣದ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು ಜಿಲ್ಲಾ ಪ್ರಾಣಿ ದಯಾ ಸಂಘ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ವಾನಗಳ ಪ್ರದರ್ಶನ, ಶ್ವಾನಗಳಿಗೆ ಉಚಿತ ರೆಬಿಸ್ ಲಸಿಕೆ ಹಾಗೂ ರೆಬಿಸ್ ರೋಗದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಪಂ ಕ್ರಿಯಾಯೋಜನೆ ಅನುಮೋದನೆ ನೀಡಿದ್ದರಿಂದ ಈ ಕಾರ್ಯಕ್ರಮದ ಮೂಲಕ ಈ ಭಾಗದ ಬಹುಜನರ, ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಜನರೂ ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ. ಇತ್ತೀಚಿಗೆ ಈ ಭಾಗದಲ್ಲಿ ನೀರಾವರಿ ಹೆಚ್ಚಾಗುತ್ತಿದೆ. ಕೆರೆಗಳು ತುಂಬುತ್ತಿವೆ.
ಇದರೊಟ್ಟಿಗೆ ಪಶು ಸಂಗೋಪನೆ, ಹೈನುಗಾರಿಕೆಯೂ ಅಭಿವೃದ್ಧಿ ಆಗಬೇಕು. ನಾಯಿ ಸಾಕಣೆ ಹೆಚ್ಚಾಗಬೇಕು. ಬರುವ ದಿನಗಳಲ್ಲಿ ಇಲಾಖೆಯ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಮುದ್ದೇಬಿಹಾಳದಲ್ಲಿ ಬೇಟೆ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇರಾನ್ ದೇಶದ ನಾಯಿಯ ತಳಿಗಳನ್ನು ಹೋಲುವ ಮಾದರಿಯ ನಾಯಿಗಳು ಈ ಭಾಗದಲ್ಲಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಶ್ವಾಸಕ್ಕೆ ಪಾತ್ರವಾಗಿರುವ ನಾಯಿ ನಿಯತ್ತಿನ
ಪ್ರಾಣಿ. ತನ್ನನ್ನು ಸಾಕಿದವರಿಗೆ ಅದು ಎಂದೂ ಬೊಗಳುವುದಿಲ್ಲ. ಆದರೆ ಮನುಷ್ಯ 10 ಬಾರಿ ನಮ್ಮಿಂದ ಸಹಾಯ ಪಡೆದುಕೊಂಡರೂ ಒಂದು ಬಾರಿ ಸಹಾಯ ಮಾಡದಿದ್ದರೆ ಆ ಹತ್ತೂ ಸಹಾಯ ಮರೆತು ನಮ್ಮನ್ನು ಟೀಕಿಸುತ್ತಾನೆ, ವಿರೋಧಿ ಸುತ್ತಾನೆ. ಇದು ಮನುಷ್ಯ
ಮನುಷ್ಯನಿಗೆ ವಿರೋಧಿ ಯಾದರೆ, ನಾಯಿ ತನ್ನ ಸಾಕಿದ ಮನುಷ್ಯನಿಗೆ ಎಂದೂ ವಿರೋಧಿಯಾಗೊಲ್ಲ ಎನ್ನುವುದನ್ನು ತೋರಿಸಿಕೊಡುತ್ತದೆ.
ನಾಯಿಯಂತೆ ಅಲೆದಾಡುವವನು ಬಡವ, ನಾಯಿಯೊಂದಿಗೆ ತಿರುಗಾಡುವವನು ಶ್ರೀಮಂತ ಎನ್ನುವ ಮಾತು ಚಾಲ್ತಿಯಲ್ಲಿದೆ. ನಾಯಿಗೆ
ಇರುವಂಥ ನಿಯತ್ತು ಮನುಷ್ಯರ ಬಳಿ ಇಲ್ಲ. ನಾಯಿ ಸಾಯುವವರೆಗೂ ಸಾಕಿದವರಿಗೆ ಬೊಗಳುವುದಿಲ್ಲ. ಅದು ಅದರ ನಿಯತ್ತು. ಈ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ತಾಲೂಕು
ಕಸಾಪ ಅಧ್ಯಕ್ಷ ಎಂ.ಬಿ. ನಾವದಗಿ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ದೇವೇಂದ್ರ ವಾಲೀಕಾರ, ಇಲಾಖೆಯ ಸಹಾಯಕ
ನಿರ್ದೇಶಕ ಶಿವಾನಂದ ಮೇಟಿ, ಮುಖ್ಯ ಪಶು ವೈದ್ಯಾ ಧಿಕಾರಿ ರಮೇಶ ರಾಠೊಡ, ಡಾ| ಸತೀಶ ಮುಂಡಾಸ, ಡಾ| ಎಸ್.ಬಿ.
ಕುಂಬಾರ, ಗುರುಸಂಗಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.
ಬಿ.ಜಿ. ಹಿರೇಮಠ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿದರು. ಮುಖ್ಯ ಪಶು ವೈದ್ಯಾ ಧಿಕಾರಿ ಡಾ|ಸುರೇಶ ಭಜಂತ್ರಿ ವಂದಿಸಿದರು.
ಓದಿ : ‘ಪ್ರೇಮಿಗಳ ದಿನ’… ಸಿಂಗಲ್ ಇರೋರಿಗೆ ಚಾರ್ ಮಿನಾರ್ ಚೆಲುವೆಯ ಬಿಗ್ ಗಿಫ್ಟ್…ಏನದು ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.