ಗ್ರಾಮಾಭಿವೃದ್ಧಿಗೆ ಶ್ರಮಿಸಿ: ಜೈನ್
ಇಂಡಿ: ಮಾವಿನಹಳ್ಳಿಯಲ್ಲಿ ಗ್ರಾಪಂ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
Team Udayavani, Feb 14, 2021, 5:50 PM IST
ಇಂಡಿ: ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಎಲ್ಲ ಪ್ರತಿನಿ ಧಿಗಳು ಪಕ್ಷಪಾತ, ರಾಜಕೀಯ ಮಾಡದೆ ಗ್ರಾಮದ ಸವಾಂಗೀಣ ಅಭಿವೃದ್ಧಿಗೆ
ಬದ್ಧರಾಗಿ ಗ್ರಾಮೋದ್ಧಾರ ಮಾಡಬೇಕು ಎಂದು ಉದ್ಯಮಿ ಅನಂತ ಜೈನ್ ಹೇಳಿದರು.
ಶನಿವಾರ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನೂತನವಾಗಿ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ಸರ್ವ ಸದಸ್ಯರಿಗೆ, ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಎಲ್ಲರೂ ಪ್ರತಿ ದಿನ ಕೂಡಿಯೇ ಇರಬೇಕಾಗುತ್ತದೆ. ಹೀಗಾಗಿ ಯಾರಲ್ಲೂ ದ್ವೇಷ ಭಾವನೆ ಇಟ್ಟುಕೊಳ್ಳದೆ ಸರ್ವ ಜನರನ್ನೂ ಒಂದೇ
ರೀತಿ ಕಾಣಬೇಕು. ನಿಜವಾದ ಬಡವರು, ಅನಾಥರು, ಸೌಲಭ್ಯ ವಂಚಿತರನ್ನು ಗುರುತಿಸಿ ಅವರಿಗೆ ಮೇಲೆತ್ತುವ ಕಾರ್ಯ ಮಾಡಬೇಕು ಎಂದರು. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಅವೆಲ್ಲವನ್ನೂ ಹಂತ-ಹಂತವಾಗಿ ಪರಿಹರಿಸಿಕೊಳ್ಳಬೇಕು. ನಿಮ್ಮ ಇಂಗಳಗಿ ಗ್ರಾಪಂ ರಾಜ್ಯದಲ್ಲಿಯೇ ಮಾದರಿ ಪಂಚಾಯತ್ ಆಗುವಂತೆ ಕೆಲಸ ಮಾಡಿ ತೋರಿಸಿ ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.
ಈರನಗೌಡ ಬಿರಾದಾರ, ಹುಸೇನಿ ಅಹಿರಸಂಗ, ಜಗುಗೌಡ ಬಿರಾದಾರ, ಅಪ್ಪಾಸಾಹೇಬ ಪವಾರ, ಸಚಿನ ರಾಠೊಡ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹನುಮಂತ ಗುಡ್ಲ, ಮಂಜು ಪಾಟೀಲ, ದೋಂಡಿಬಾ ಮಾನೆ, ಸುನೀಲ ದಶವಂತ, ಖಾಜು ಹೊನ್ನಕೋರೆ, ಶಿವು ಶಿವಗದ್ದಗಿ, ಕಲ್ಲಪ್ಪ
ಬಾರಾಣಿ, ಸಚಿನ್ ರಾಠೊಡ, ಯಲ್ಲಪ್ಪ ಪೂಜಾರಿ, ಶಟ್ಟೆಪ್ಪ, ಪ್ರಭು ವಾಲೀಕಾರ, ರಾಜು ಜಾಧವ, ಲಕ್ಷ್ಮಣ ಪೂಜಾರಿ ರಾಜು ಬಾರಾಣೆ ಸೇರಿದಂತೆ ಮತ್ತಿತರರು ಇದ್ದರು.
ಓದಿ : ‘ಪ್ರೇಮಿಗಳ ದಿನ’… ಸಿಂಗಲ್ ಇರೋರಿಗೆ ಚಾರ್ ಮಿನಾರ್ ಚೆಲುವೆಯ ಬಿಗ್ ಗಿಫ್ಟ್…ಏನದು ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.