ಬೀಸುತ್ತಿದೆ ಒಣಗಾಳಿ: ಆತಂಕದಲ್ಲಿ ರೈತ

Team Udayavani, Jun 29, 2018, 11:59 AM IST

vij-2.jpg

ಇಂಡಿ: ಮುಂಗಾರು ತಿಂಗಳು ಕಳೆದರೂ ತಾಲೂಕಿನಲ್ಲಿ ಮಳೆಯಾಗಿಲ್ಲ. ಒಣಗಾಳಿ ಬೀಸುತ್ತಿದ್ದು, ರೈತರು ಆತಂಕಗೊಳ್ಳುವಂತೆ ಮಾಡಿದೆ. ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧರಾಗಿದ್ದು, ಮಳೆರಾಯನ ದಾರಿ ಕಾಯುತ್ತ ಕುಳಿತಿದ್ದಾರೆ. ಕೃಷಿ ಇಲಾಖೆಯಿಂದ ದೊರೆಯುವ ಸಹಾಯಧನದ ಬೀಜ ಖರೀದಿಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಮುಬಿದ್ದಿದ್ದಾರೆ. ತೊಗರಿ, ಹೆಸರು, ಉದ್ದು, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೀಜ ಬಿತ್ತನೆ ಮಾಡಲು ಸರದಿಯಲ್ಲಿ ನಿಂತು ಬೀಜ ಖರಿಸಿದ್ದರು. ಅಲ್ಲದೆ ಕೆಲ ರೈತರು ಬಿತ್ತನೆ ಸಹ ಮಾಡಿದ್ದರು. ಈಗ ಮಳೆ ಬಾರದೆ ಇರುವುದರಿಂದ ರೈತರು ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯುತ್ತಲೆ ಕಮರುತ್ತಿವೆ. ಬರೀ ಮೋಡಕವಿದ ವಾತಾವರಣವಿದೆ. ಭೂಮಿ ಉಳುಮೆ ಮಾಡಿ ಹದಗೊಳಿಸಿದ್ದ ರೈತನ ಬಾಳಿಗೆ ತಣ್ಣಿರು ಎರಚಿದಂತಾಗಿದೆ. ಬಿತ್ತನೆ ಮಾಡಿದ ರೈತರು ಹಾಗೂ ಇನ್ನೂ ಬಿತ್ತನೆ ಮಾಡಬೇಕೆಂದು ಹೊಲ ಸಿದ್ಧ ಮಾಡಿಕೊಂಡ ತಾಲೂಕಿನ ರೈತ ಸಮುದಾಯ ಚಿಂತಾಕ್ರಾಂತದಲ್ಲಿ ಮುಳುಗಿದೆ.

ತಾಲೂಕಿನಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಸಮರ್ಪಕವಾಗಿ ಮಳೆಯಾದ ಬಗ್ಗೆ ಉದಾಹರಣೆಗಳಿಲ್ಲ. ಸರಕಾರ ಮುಂಜಾಗ್ರತ ಕ್ರಮ ಕೈಗೊಳ್ಳ ಬೇಕಾಗಿರುವುದರಿಂದ ಮೋಡ ಬಿತ್ತನೆಯಂತ ಕಾರ್ಯಕ್ರಮ ಅಳವಡಿಸಿಕೊಂಡಲ್ಲಿ ಈ ಭಾಗದ ರೈತರಿಗೆ ಅನುಕೂಲವಾಗಬಹುದು  ರೈತ ಈ ದೇಶದ ಬೆನ್ನೆಲುಬಾಗಿದ್ದು, ಯಾವುದೆ ಕಾರಣಕ್ಕೂ ಎದೆಗುಂದಬಾರದು. ಸರಕಾರ ನಿಮ್ಮ ಜೊತೆಗಿದೆ. ಆಲಮಟ್ಟಿ ಆಣೆಕಟ್ಟು ನಿಗದಿತ ಪ್ರಮಾಣದಲ್ಲಿ ನೀರು
ಭರ್ತಿಯಾಗಿಲ್ಲ. ಆದರೂ ಭರ್ತಿಯಾಗುವ ನಿರಿಕ್ಷೆಯಲ್ಲಿದ್ದೇವೆ. ಮುಂಬರುವ ಐಸಿಸಿ ಸಭೆಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರಲಾಗುವುದು. 
ಯಶವಂತರಾಯಗೌಡ ಪಾಟೀಲ. ಶಾಸಕರು.

ರೈತರಿಗೆ ಬೇಕಾಗುವ ಬೀಜ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ರೈತರಿಗೆ ತೊಂದರೆಯಾಗದಂತೆ
ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ತೊಗರಿ ಬೀಜದ ಬೇಡಿಕೆ ಇದೆ. ಅದನ್ನು ಕೂಡಾ ತ್ವರಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಸಮರ್ಪಕ ಮಳೆಯಾಗದೆ ಇರುವುದರಿಂದ ರೈತರು ಬಿತ್ತನೆ ಸ್ಥಗಿತಗೊಳಿಸಿದ್ದಾರೆ.
ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕರು. 

ಮಳೆ ಪ್ರಮಾಣ ಪ್ರಸ್ತುತವಾಗಿ ಮುಂಗಾರು ಬಿತ್ತನೆ ಹಂಗಾಮಿಗೆ ವಾಡಿಕೆಯ ಮಳೆ ಸರಾಸರಿ 102.00 ಎಂ.ಎಂ ಮಳೆ ಆಗಬೇಕಾಗಿತ್ತು. ಆದರೆ 84.17 ಎಂ.ಎಂ ರಷ್ಟು ಮಾತ್ರ ಮಳೆ ಬಂದಿದೆ. ಹೀಗಾಗಿ ಬಿತ್ತನೆಗೆ ಬೇಕಾದ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ಕೇವಲ ಶೇಕಡಾ 8.8ರಷ್ಟು ಮಾತ್ರ ಬಿತ್ತನೆಯನ್ನು ರೈತರು ಅಲ್ಲಲ್ಲಿ ಕೆಲವು ಭಾಗಗಳಲ್ಲಿ ಮಾಡಿದ್ದಾರೆ.

ಕಡಿಮೆ ಪ್ರಮಾಣದಲ್ಲಿ ಮಾರಾಟ ಇಂಡಿ, ಬಳ್ಳೊಳ್ಳಿ ಹಾಗೂ ಚಡಚಣ ರೈತ ಸಂಪರ್ಕ ಕೇಂದ್ರದದಿಂದ ತೊಗರಿ 585 ಕ್ವಿಂಟಲ್‌ ಬೀಜ ದಾಸ್ತಾನು ಮಾಡಲಾಗಿದೆ. ಹೆಸರು 24ಕ್ವಿಂಟಲ ದಾಸ್ತಾನಾಗಿದ್ದು, ಇದರಲ್ಲಿ ಒಟ್ಟು 12 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ. ಉದ್ದು 6 ಕ್ವಿಂಟಲ್‌ನಲ್ಲಿ 3.50 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ. ಮೆಕ್ಕೆಜೋಳ 244 ಕ್ವಿಂಟಲ್‌ ದಾಸ್ತಾನನಲ್ಲಿ ಕೇವಲ 76 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ. ಸೂರ್ಯಕಾಂತಿ 25 ಕ್ವಿಂಟಲ್‌ ದಾಸ್ತಾನಿನಲ್ಲಿ 8 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ. ಸಜ್ಜೆ 48 ಕ್ವಿಂಟಲ್‌ ದಾಸ್ತಾನನಲ್ಲಿ ಕೇವಲ 15.5 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ. 

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.