ಸರ್ಕಾರಿ ಆಸ್ಪತ್ರೆಬಳಿ ನಿಲ್ಲಿಸಿದ್ದ ಕಾರಿನಲ್ಲಿ ಶವ ಪತ್ತೆ; ಕೊಲೆ ಮಾಡಿದ್ದಾರೆಂದು ಮಗನ ದೂರು
Team Udayavani, Jul 30, 2024, 7:41 PM IST
ವಿಜಯಪುರ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವ್ಯಕ್ತಿಯೊಬ್ಬರು ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿರುವ ಕಾರಿನಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಂಗಳವಾರ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿರುವ ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರಿನಲ್ಲಿ ಪತ್ತೆಯಾಗಿರುವ ಶವವನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿಯ 58 ವರ್ಷದ ಸಂಗಪ್ಪ ದೇವಕತೆ ಎಂದು ಗುರುತಿಸಲಾಗಿದೆ.
ನಿಗೂಢ ರೀತಿಯಲ್ಲಿ ಪತ್ತೆಯಾಗಿರುವ ಸಂಗಪ್ಪ ಅವರದು ಅಸಹಜ ಸಾವು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೃತ ಸಂಗಪ್ಪ ಅವರ ಮಗ ಸಚಿನ್ ನಮ್ಮ ತಂದೆಯನ್ನು ಹತ್ಯೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಥಣಿ ತಾಲೂಕಿನ ಬಾಡಗಿ ಗ್ರಾಮದ ಶಂಭುಲಿಂಗ ಮಮದಾಪುರ ಎಂಬವರ ಬಳಿ ನಾವು 1 ಲಕ್ಷ ರೂ. ಸಾಲ ಪಡೆದಿದ್ದೆವು. ಇದೇ ವಿಷಯವಾಗಿ ನನ್ನ ತಂದೆಯನ್ನು ಇತರೆ ನಾಲ್ವರೊಂದಿಗೆ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಶಂಭುಲಿಂಗ ಅಪಹರಿಸಿದ್ದರು. ಹೀಗಾಗಿ ಅವರೇ ಈ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ನನ್ನ ತಂದೆಯನ್ನು ಕಾರಿನಲ್ಲಿ ಅಪಹರಿಸಿದ ಬಳಿಕ ಶಂಭುಲಿಂಗಗೆ ಕರೆ ಮಾಡಿದ ನಾನು, ಹಣ ಪಾವತಿಸುತ್ತೇವೆ ನಮ್ಮ ತಂದೆಯನ್ನು ಮನೆ ತಂದು ಬಿಡುವಂತೆ ಮನವಿ ಮಾಡಿದ್ದೆ. ಆದರೆ ತನ್ನ ಬದಲಾಗಿ ಬೇರೆಯವರ ಬಳಿ ಹಣ ಕೊಡಲು ಶಂಭುಲಿಂಗ ಹೇಳಿದ್ದರಿಂದ ನಾನು ನಿರಾಕರಿಸಿದೆ ಎಂದಿದ್ದಾರೆ.
ಬದಲಾಗಿ ಬ್ಯಾಂಕ್ ಖಾತೆಗೆ ಆರ್‌ಡಿಜಿಎಸ್ ಮೂಲಕ ಹಣ ಜಮೆ ಮಾಡುತ್ತೇನೆ. ನಗದು ಹಣವೇ ಬೇಕಿದ್ದರೆ ನಾಲ್ಕದು ದಿನ ಸಮಯಾವಕಾಶ ಬೇಕು ಎಂದು ಕೇಳಿದ್ದೆ. ಈ ಹಂತದಲ್ಲೇ ನಾನು ಐಗಳಿ ಠಾಣೆ ಪೊಲೀಸರಿಗೆ ನನ್ನ ತಂದೆಯ ಅಪಹರಣದ ಕುರಿತು ಮಾಹಿಯನ್ನೂ ನೀಡಿದ್ದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಆದರೆ ಬೆಳಕು ಹರಿಯುವ ವೇಳೆಗೆ ನನ್ನ ತಂದೆ ಶವವಾಗಿ ಪತ್ತೆಯಾಗಿದ್ದು, ತಂದೆಯ ಸಾವಿನ ಸುದ್ಧಿ ಆಘಾತ ಉಂಟು ಮಾಡಿದೆ. ಹಣ ವಸೂಲಿ ನೆಪದಲ್ಲಿ ನನ್ನ ತಂದೆಯನ್ನು ಶಂಭುಲಿಂಗ ಅವರ ತಂಡ ಹತ್ಯೆ ಮಾಡಿದೆ ಎಂದು ಆರೋಪಿಸಿರುವ ಮೃತನ ಮಗ ಸಚಿನ್, ನಗರ ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.
ಸ್ಥಳಕ್ಕೆ ಆಗಮಿಸಿರುವ ವಿಜಯಪುರದ ಗಾಂಧಿಚೌಕ್ ಠಾಣೆ ಹಾಗೂ ಅಥಣಿ ತಾಲೂಕಿನ ಐಗಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಳಿಕ ಸಂಗಪ್ಪ ಅವರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.