ಸಾಹಿತ್ಯದಲ್ಲಿ ಗಟ್ಟಿತನ ಮುಖ್ಯ: ರಾಗಂ


Team Udayavani, Dec 29, 2020, 5:27 PM IST

ಸಾಹಿತ್ಯದಲ್ಲಿ ಗಟ್ಟಿತನ ಮುಖ್ಯ: ರಾಗಂ

ವಿಜಯಪುರ: ಲೇಖನಿ ಯಾವತ್ತೂಖಡ್ಗವಾಗಬಾರದು ಹಾಗೂ ಕವಿ ಸಮಾಜದ ಪ್ರೀತಿಯಾಗಬೇಕು. ಎಲ್ಲರನ್ನೂ ಒಗ್ಗೂಡಿಸುವ, ಒಂದನ್ನೊಂದು ಬೆಸೆಯುವ ಕೊಂಡಿಯಾಗಬೇಕು. ಕೃತಿಗಳ ಸಂಖ್ಯೆಗಿಂತಸಾಹಿತ್ಯದಲ್ಲಿ ಗಟ್ಟಿತನ ಮುಖ್ಯ. ಹೀಗಾಗಿ ಲೇಖನಿಸಮಾಜದ ಪ್ರೀತಿಯಾಗಲಿ ಎಂದು ಇಂಗ್ಲಿಷ್‌ಪ್ರಾಧ್ಯಾಪಕರಾದ ಸಾಹಿತಿ ಡಾ| ರಾಜಶೇಖರ ಮಠಪತಿ (ರಾಗಂ) ಅಭಿಪ್ರಾಯಪಟ್ಟರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಆವರಣದಲ್ಲಿ ನಾಗಠಾಣದ ಸೃಜನಶೀಲ ಸಂಸ್ಥೆಹಾಗೂ ವಿಜಯಪುರದ ವಚನ ಶರ  ಸಂಸ್ಥೆಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂಗ್ಲಿಷ್‌ಉಪನ್ಯಾಸಕ ಮುಸ್ತಾಕ್‌ ಮಲಘಾಣ ಅವರಪ್ರಥಮ ಕೃತಿ ಕಾವಿಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಜಗತ್ತನ್ನು ನೋಡಿ ಬದಲಾಗುತ್ತಾನೋಇಲ್ಲವೋ ಎಂಬುದು ಸಾಹಿತಿಯ ಆತ್ಮಸಾಕ್ಷಿಗೆಸೇರಿದ್ದು. ಆದರೆ ಜಗತ್ತನ್ನು ಬದಲಿಸುವ ಶಕ್ತಿ ಒಬ್ಬ ಸಾಹಿತಿಗಿದೆ ಎಂಬುದನ್ನು ಮಾತ್ರಮರೆಯಬಾರದು. ಹೀಗಾಗಿ ಎಲ್ಲ ವರ್ಗದ ಜನರು ಓದುವಂತಹ ಸಾಹಿತ್ಯ-ವಿಚಾರಗಳುಹೊರ ಹೊಮ್ಮಬೇಕು. ಉತ್ಕೃಷ್ಟವಾದಬರಹ-ಚಿಂತನೆಗಳು ಸರ್ವಕಾಲಕ್ಕೂಪ್ರಸ್ತುತವಾಗಿರುತ್ತವೆ ಎಂದು ನುಡಿದರು.

ಹಿಟ್ಟಿನಹಳ್ಳಿಯ ಫೂಲ್‌ಸಿಂಗ್‌ ಚವ್ಹಾಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ| ಸುನೀತಾ ಚವ್ಹಾಣ ಮಾತನಾಡಿ, ಸಾಹಿತ್ಯ ಎಂಬುದು ಸರ್ವರಿಗೂ ಒಳಿತನ್ನು ಬಯಸುತ್ತದೆ. ಸಾಹಿತ್ಯದಿಂದ ನಮ್ಮ ಸಮಾಜ, ಸುತ್ತಲಿನ ವಾತಾವರಣ ಅರಳಿಸಿ, ಬೆಳೆಸುವಂತಿರಬೇಕು. ಪ್ರಸ್ತುತ ವಿಜ್ಞಾನದ ಯುಗದಲ್ಲೂ ಈಗಿನ ತೋರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಅರಕೇರಿ ಕರ್ನಾಟಕ ಎಜ್ಯುಕೇಶನ್‌ ಟ್ರಸ್ಟ್‌ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ,ನಮ್ಮ ಹಿರಿಯ ಸಾಹಿತಿಗಳು ರಚಿಸಿರುವ ಶ್ರೇಷ್ಠಸಾಹಿತ್ಯ ಕೃತಿಗಳ ಅಧ್ಯಯನ ಮಾಡುವ ಮೂಲಕಇಂದಿನ ಪೀಳಿಗೆ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ.ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಬಡ ಲೇಖಕರಿಗೆಆರ್ಥಿಕವಾಗಿ ಉಳ್ಳವರು ಗ್ರಂಥ ದಾಸೋಹಮಾಡಬೇಕು. ಇದಕ್ಕಾಗಿ ನಮ್ಮ ಟ್ರಸ್ಟ್‌ ಪೋಷಕ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಮುಸ್ತಾಕ್‌ ಅವರಂಥ ಯುವಕರು ಸಾಹಿತ್ಯ ಕೃಷಿಗೆಮುಂದಾಗಿರುವುದು ಅತ್ಯಂತ ಹರ್ಷದಾಯಕ ಎಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಶಿವಬಸವ ಯೋಗಾಶ್ರಮದ ಶಂಭುಲಿಂಗ ಶ್ರೀಗಳುಮಾತನಾಡಿ, ಉತ್ತಮ ಸಾಹಿತ್ಯಕ್ಕೆ ಸದಾಬೆಲೆಯಿದೆ. ಶರಣರ ಸಾಹಿತ್ಯ ಕನ್ನಡ ನಾಡಿನಲ್ಲಿ ಹಲವು ಸಾಹಿತ್ಯಗಳಿಗೆ ಪ್ರೇರಕ ಶಕ್ತಿಯಾಗಿಕೆಲಸ ಮಾಡಿದೆ. ವಚನ ಸಾಹಿತ್ಯದಲ್ಲಿಬಗೆದಷ್ಟು ಸಿಗುವ ಬಂಗಾರದಂತೆ ಆಸಕ್ತಿಯುಗಹನವಾದಷ್ಟು ಉತ್ತಮ ಸಂಗತಿಗಳುನಮ್ಮೊಳಗೆ ಹೊಳೆಯುತ್ತವೆ. ಹೀಗಾಗಿ ಕವಿಗಳು ಹಾಗೂ ಲೇಖಕರು ಸದಾ ಚಿಂತನಶೀಲತೆ ಮೈಗೂಡಿಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರಮುಸ್ತಾಕ್‌ ಮಲಘಾಣ, ರಾಜೇಂದ್ರಕುಮಾರಬಿರಾದಾರ ಮಾತನಾಡಿದರು. ಉದ್ಯಮಿಶರಣಬಸಪ್ಪ ಅರಕೇರಿ, ಪದ್ಮಶ್ರೀ ರಾಗಂಎಂ.ಎ. ಮಲಘಾಣ  ನಜೀಬ್‌ ಅಶ್ರಫ್‌ ಇನಾಮದಾರ ವೇದಿಕೆಯಲ್ಲಿದ್ದರು.

ತಾಲೂಕು ಕಸಾಪ ಅಧ್ಯಕ್ಷ ಯು.ಎನ್‌. ಕುಂಟೋಜಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದನಗೌಡ ಕಾಶಿನಕುಂಟೆ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು.

ದಾಕ್ಷಾಯಣಿ ಬಿರಾದಾರ ನಿರೂಪಿಸಿದರು. ಮನು ಪತ್ತಾರ ವಂದಿಸಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.