ಪಂಚಭೂತಗಳಲ್ಲಿ ಬಿ.ಎಸ್.ಪಾಟೀಲ ಸಾಸನೂರ ಲೀನ
Team Udayavani, Jun 12, 2018, 11:02 AM IST
ತಾಳಿಕೋಟೆ: ಹಿರಿಯ ಮುತ್ಸದ್ದಿ, ಮಾಜಿ ಸಚಿವ ಬಿ.ಎಸ್. ಪಾಟೀಲ (ಸಾಸನೂರ) ಅವರ ಅಂತ್ಯಕ್ರಿಯೆ ಹಿರೂರ ಗ್ರಾಮದ ಭೋಗೇಶ್ವರ ಪ್ರೌಢಶಾಲಾ ಆವರಣದಲ್ಲಿ ರಡ್ಡಿ ಸಮಾಜದ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ನೆರವೇರಿತು.
ಈ ಸಂದರ್ಭದಲ್ಲಿ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಜನ ಸೇವೆಯೇ ಜನಾರ್ಧನ ಸೇವೆ
ಎಂದು ಜನರ ಮಧ್ಯೆಯೇ ಜೀವನ ನಡೆಸುವುದರೊಂದಿಗೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದ ಮಾಜಿ ಸಚಿವ ಬಿ.ಎಸ್. ಪಾಟೀಲ (ಸಾಸನೂರ) ಅವರ ಅಗಲಿಕೆ ಕೇವಲ ಅವರ ಕುಟುಂಬದವರಿಗೆ ನಷ್ಟವಲ್ಲ, ಇಡಿ ರಾಜ್ಯಕ್ಕೆ
ತುಂಬಲಾರದಂತಹ ನಷ್ಟ ಉಂಟಾಗಿದೆ ಎಂದರು.
ಮಾಜಿ ಸಚಿವ ಹಾಲಿ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಿ.ಎಸ್. ಪಾಟೀಲ (ಸಾಸನೂರ) ಮತ್ತು ನಮ್ಮ ತಂದೆ ಬಿ.ಎಂ. ಪಾಟೀಲ ಅವರ ಸ್ನೇಹ ಸಂಬಂಧದೊಂದಿಗೆ ನಡೆದ ರಾಜಕಾರಣದ ಗರಡಿಯಲ್ಲಿ ಬೆಳೆದ ನಾನು ಸಾಸನೂರ ಅವರ ಕುಟುಂಬದ ಸದಸ್ಯರಲ್ಲೊಬ್ಬ. ಅವರ ಕುಟುಂಬದಲ್ಲಿ ಆಗು ಹೋಗುವ ಪ್ರತಿಯೊಂದರಲ್ಲಿಯೂ ಭಾಗಿಯಾಗಿ ಕಷ್ಟ ಸುಖಗಳೊಂದಿಗೆ ರಾಜಕಾರಣವೆಂಬುದನ್ನು ಹೇಗೆ ಮಾಡ ಬೇಕೆಂಬುದನ್ನು ಕಲಿತಿದ್ದೇನೆ. ನನ್ನ ರಾಜಕೀಯ ಜೀವನದ ಗುರುಗಳ ಸಾಲಿನಲ್ಲಿ ಬಿ.ಎಸ್. ಪಾಟೀಲ (ಸಾಸನೂರ) ಅವರು ಒಬ್ಬರಾಗಿದ್ದಾರೆಂದರು.
ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮಾತನಾಡಿ, ಹೂವಿನ ಹಿಪ್ಪರಗಿ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಎರಡು ಬಾರಿ 4 ಖಾತೆಗಳೊಂದಿಗೆ ಸಚಿವ ಸ್ಥಾನ ನಿಭಾಯಿಸಿದ ಧೀಮಂತ ರಾಜಕಾರಣಿ. ನೇರ ನಿಷ್ಟೂರ ರಾಜಕಾರಣಿ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದರು.
ಹಿರೂರ ಹಿರೇಮಠದ ಜಯಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದ ರಾಜಕಾರಣದ ಇತಿಹಾಸದಲ್ಲಿಯೇ ಪರಿಭಾಷೆಯನ್ನು ಬರೆದಂತಹ ಸಾಸನೂರಿನ ನಂದಾದೀಪ ನಂದಿಹೋಗಿದ್ದು ಇದರಿಂದ ಜಿಲ್ಲೆಯಲ್ಲಿಯೇ ನಿಶಬ್ದ ವಾತಾವರಣ ನಿರ್ಮಾಣವಾಗಿದೆ. ಅವರು ಹಾಕಿಕೊಟ್ಟ ಪ್ರತಿಯೊಂದು ಮಾರ್ಗಗಳು ಎಲ್ಲರ ಜೀವನಕ್ಕೆ ದಾರಿ ದೀಪವಾಗಲಿವೆ. ಅವರ ದಾರಿಯಲ್ಲಿ ಎಲ್ಲರೂ ನಡೆಯಬೇಕೆಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಅರುಣ ಶಹಾಪುರ, ಮಾಜಿ ಶಾಸಕ ಸಿ.ಎಸ್. ನಾಡಗೌಡ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಳಗಿ ಮಾಜಿ ಶಾಸಕ ಜಿ.ಟಿ. ಪಾಟೀಲ, ವಿಜುಗೌಡ ಪಾಟೀಲ, ಗುಂಡಕನಾಳಶ್ರೀ, ಮನಗೂಳಿಶ್ರೀ,
ಬ.ಬಾಗೇವಾಡಿಶ್ರೀ, ವಡವಡಗಿಶ್ರೀ, ಕುಂಟೋಜಿಶ್ರೀ, ಖಾಸತ ಮಠದಶ್ರೀ, ಅಂಕಲಗಿ ಶ್ರೀಗಳು ಒಳಗೊಂಡು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.