ಬಜೆಟ್‌: ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ


Team Udayavani, Feb 2, 2018, 3:07 PM IST

budget9_660_020218091230.jpg

ವಿಜಯಪುರ: ಕೇಂದ್ರ ಹಣಕಾಸು ಖಾತೆ ಸಚಿವ ಅರುಣ ಜೇಟ್ಲಿ ಅವರು ಗುರುವಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ ಬಗ್ಗೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಜನಪರ, ಕೃಷಿ ಪೂರಕ, ರೈತ ಸ್ನೇಹಿ ಬಜೆಟ್‌ ಎಂದು ಬಣ್ಣಿಸಿದ್ದರೆ, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನಿರಾಸೆ ಬಜೆಟ್‌, ಬಡ-ಮಧ್ಯಮ ವರ್ಗ ಕಡೆಗಣಿಸಿದ ನೀರಸ ಬಜೆಟ್‌ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಕೃಷಿಗೆ ಹೆಚ್ಚಿನ ಆದ್ಯತೆ 
ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ಬಜೆಟ್‌, ರೈತರ ಕಾಯಲು ಮುಂದಾಗಿದೆ. ಕೃಷಿಗೆ ಬೆಂಬಲ ಬೆಲೆ ನೇರವಾಗಿ ರೈತರ ಖಾತೆಗೆ 8 ಕೋಟಿ, ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌. 2020ರ ವೇಳೆಗೆ ಎಲ್ಲ ಬಡಕುಟುಂಬಗಳಿಗೆ ಮನೆ ನಿರ್ಮಾಣ, 16 ಸಾವಿರ ಕೋಟಿ ಕುಟುಂಬಕ್ಕೆ ಉಚಿತ ವಿದ್ಯುತ್‌ ಸಂಪರ್ಕ, ಎಲ್ಲ ಜಿಲ್ಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ. ಹೀಗೆ ಎಲ್ಲ ರಂಗಕ್ಕೂ ಆದ್ಯತೆ ನೀಡಿರುವ ಸಮನ್ವಯದ ಬಜೆಟ್‌
 ಎಸ್‌.ಕೆ. ಬೆಳ್ಳುಬ್ಬಿ, ಮಾಜಿ ಸಚಿವ 

ರೈತರ ಹಿತ ರಕ್ಷಣೆ 
ರೈತರ ಹಿತ ರಕ್ಷಣೆ. ಬಡ ಕುಟುಂಬಕ್ಕೆ ಉಚಿತ ಗ್ಯಾಸ್‌ ಸಿಲಿಂಡರ್‌, ಬಡಕುಟುಂಬ ಮನೆ ಹೊಂದುವ ಕನಸು ನನಸಾಗಿಸಲು ಯೋಜನೆ ರೂಪಿಸಿದ್ದಲ್ಲದೇ ಉಚಿತ ವಿದ್ಯುತ್‌ ಸಂಪರ್ಕ, ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ. ಬಡವರಿಗಾಗಿ ಏಕಲವ್ಯ ಶಾಲೆಗಳ ಪ್ರಾರಂಭ, 24 ಹೊಸ ಮೆಡಿಕಲ್‌ ಕಾಲೇಜುಗಳಿಗೆ ಅನುಮತಿ, ಬೆಂಗಳೂರಿಗೆ ಸಬ್‌ ಅರ್ಬನ್‌ ರೈಲಿಗೆ 17 ಸಾವಿರ ಕೋಟಿ ರೂ. ಮೀಸಲು ನೀಡಿರುವ ಎಲ್ಲರ ಹಿತ ಬಯಸಿದ ಜನಪ್ರಿಯ ಬಜೆಟ್‌
 ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಜಿ ಸಚಿವ, ವಿಜಯಪುರ

ಮಹಿಳೆಯರಿಗೆ ಏನಿಲ್ಲ
 ಕೇಂದ್ರ ಸರ್ಕಾರದ ಪ್ರಸಕ್ತ ಬಜೆಟ್‌ ಜನರನ್ನು ಮೂರ್ಖರನ್ನಾಗಿಸುವ ಬಜೆಟ್‌. ಸೌಲಭ್ಯಗಳಿಲ್ಲದೇ ನವೋದಯ ಶಾಲೆಗಳು ನರಳುತ್ತಿದ್ದು, ಏಕಲವ್ಯ ಶಾಲೆ ಆರಂಭಕ್ಕೆ ಮುಂದಾಗಿರುವ ಕ್ರಮ ಹಾಸ್ಯಾಸ್ಪದವಾಗಿದೆ. ಮಹಿಳೆಯರಿಗೆ ಏನನ್ನೂ ಕೊಡದೇ, ಬಡವರನ್ನು ಗಣನೆಗೆ ತೆಗೆದುಕೊಳ್ಳದ, ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಕಡೆಗಣಿಸಿದ ಕೇಂದ್ರ ಸರ್ಕಾರ ನಿರುದ್ಯೋಗ ನಿವಾರಣೆಗೆ ವಿಶೇಷ ಕ್ರಮ ಕೈಗೊಳ್ಳುವಲ್ಲಿಯೂ ವಿಫಲವಾಗಿದೆ.
 ಮಹಾದೇವಿ ಗೋಕಾಕ, ಜಿಲ್ಲಾಧ್ಯಕ್ಷೆ, ಕಾಂಗ್ರೆಸ್‌ ಮಹಿಳಾ ಘಟಕ, ವಿಜಯಪುರ  

ಬಡ-ಮಧ್ಯಮ ವರ್ಗ ಕಡೆಗಣನೆ
ಕೃಷಿಗೆ ಆದ್ಯತೆ ನೀಡಿದಂತೆ ಭಾಸವಾಗುವ ನೈಜ ಕೃಷಿ ವಿರೋಧಿ  ಬಜೆಟ್‌ ಇದಾಗಿದ್ದು, 2014ರ ಮುಂಚೆ ಶೇ.4ರಷ್ಟಿದ್ದ ಕೃಷಿ ಪ್ರಗತಿ ನಂತರದ 4 ವರ್ಷಗಳಲ್ಲಿ ಶೇ.2.1ಗೆ ಇಳಿಸಿದ್ದೆ ಕೊಡುಗೆಯೇ? ಉಳಿದಂತೆ ಮಹಿಳೆಯರು, ಮಕ್ಕಳನ್ನು ಕಡೆ ಗಣಿಸಿರುವ ಈ ಬಾರಿಯ ಕೇಂದ್ರ ಬಜೆಟ್‌, ಶಿಕ್ಷಣ, ಆರೋಗ್ಯ ಎಲ್ಲ ಕ್ಷೇತ್ರಗಳನ್ನೂ ಕಡೆಗಣಿಸಿದೆ. ಬಡ- ಮಧ್ಯಮ ವರ್ಗವನ್ನು ಕಡೆಗಣಿಸಿರುವ ಬಜೆಟ್‌. ಆದಾಯ ತೆರಿಗೆ ವಿಷಯದಲ್ಲಿ ಏನೂ ನೀಡಿಲ್ಲ.
 ರೇಷ್ಮಾ ಪಡೇಕನೂರ ಜಿಲ್ಲಾಧ್ಯಕ್ಷೆ ಜೆಡಿಎಸ್‌, ವಿಜಯಪುರ

ಸಂತೃಪ್ತ 
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಕೃಷಿ ಕ್ಷೇತ್ರದ ನಿರ್ಲಕ್ಷಿತ ಅದರಲ್ಲೂ ತುರ್ತು ಹಾಳಾಗುವ ಕೃಷಿ ಬೆಳೆಗಳ ಸಂರಕ್ಷಣೆಗೆ
ಆದ್ಯತೆ ನೀಡುರುವುದು ರೈತಪರ ಕಾಳಜಿಗೆ ಪ್ರತೀಕ. ಇದಲ್ಲದೇ ಬಡವರು, ಶೋಷಿತ ಎಲ್ಲ ಸಮುದಾಯಗಳ ಅಭ್ಯುದಯ ಹೀಗೆ ಎಲ್ಲ ಕ್ಷೇತ್ರವನ್ನೂ ಗಮನದಲ್ಲಿರಿಸಿಕೊಂಡು ಸಮಾನ ಅವಕಾಶ ನೀಡಿರುವ ಸಂತೃಪ್ತ ಬಜೆಟ್‌.
 ಕೃಷ್ಣಾ ಗುನ್ನಾಳಕರ, ಮಾಧ್ಯಮ ಪ್ರಮುಖ, ಜಿಲ್ಲಾ ಬಿಜೆಪಿ, ವಿಜಯಪುರ

ರೈತರ ಪರ
ಕೇಂದ್ರ ಬಜೆಟ್‌ ರೈತರ ಪರವಾಗಿದೆ. ರೈಲು-ವಿಮಾನ ಸಾರಿಗೆ ಸೇವೆ ಬಲವರ್ಧನೆಗೆ ಆದ್ಯತೆ ನೀಡಿದೆ. ಇದರ ಜತೆಗೆ ದೇಶದ ಸಾಮಾನ್ಯರಿಗೆ ಹಲವು ಕಾರ್ಯಕ್ರಮ ನೀಡಿರುವ ನಾಗರಿಕರ ಪರವಾದ ಬಜೆಟ್‌ಇದಾಗಿದೆ.  ವಿಜಯ ಜೋಶಿ, ಸಹ ಸಂಚಾಲಕ ರಾಜ್ಯ ಗೋಪ್ರಕೋಷ್ಟ, ವಿಜಯಪುರ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಕೇಂದ್ರ ಹಣಕಾಸು ಸಚಿವ ಜೇಟ್ಲಿ ಅವರು ಮಂಡಿಸಿರುವ 2018-19ನೇ ಬಜೆಟ್‌ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದ್ದು, ಎಲ್ಲ ವಲಯಗಳಿಗೂ ಗಮನ ಹರಿಸಲಾಗಿದೆ. ರೈತ, ಸಾಮಾನ್ಯ, ಅಭಿವೃದ್ಧಿ ಸ್ನೇಹಿ ಬಜೆಟ್‌.
 ಶಿವರುದ್ರ ಬಾಗಲಕೋಟ, ಅಧ್ಯಕ್ಷರು, ಬಿಜೆಪಿ ನಗರ ಘಟಕ, ವಿಜಯಪುರ

ಕೃಷಿಕರ ವಿರೋಧಿ
ಪ್ರಸಕ್ತ ವರ್ಷದ ಕೇಂದ್ರ ಸರಕಾರದ ಬಜೆಟ್‌ ಕೃಷಿಕರ ವಿರೋಧಿಯಾಗಿದೆ. ದೇಶ ಕಟ್ಟುವ ಯುವಕರಿಗೆ ಉದ್ಯೋಗದ
ಪ್ರೋತ್ಸಾಹ ನೀಡದ ನಿರಾಸೆ ಬಜೆಟ್‌ ಎನಿಸಿದೆ.  ಹಾಸಿಂಪೀರ ವಾಲೀಕಾರ, ಮುಖಂಡರು, ಜಿಲ್ಲಾ ಕಾಂಗ್ರೆಸ್‌ ವಿಜಯಪುರ

ಅನುಕೂಲಕರ ಇಂಡಿ: ರೈತರು ಮತ್ತು ಬಡವರಿಗೆ ಅನುಕೂಲಕರ ಬಜೆಟ್‌ ಇದಾಗಿದೆ. ದೇಶದ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದೆ. ಮೋದಿ ಸರಕಾರ ಬಡವರಿಗೆ 5 ಲಕ್ಷರೂ. ವರೆಗೆ ಉಚಿತ ವೈದ್ಯಕೀಯ ಸೇವೆ ನೀಡಿದೆ. ಒಟ್ಟು ಬಡವರಿಗೆ 33 ಲಕ್ಷ ಮನೆ ನಿರ್ಮಾಣ ಗುರಿ ಹೊಂದಲಾಗಿದೆ. ನೂತವಾಗಿ 900 ಕಿಮೀ ರಾಷ್ಟ್ರೀಯ ಹೆದ್ದಾರಿ ಘೋಷಣೆ, 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್‌ ಹೀಗೆ ಇಂದಿನ ಬಜೆಟ್‌ಜನಪರವಾಗಿದೆ.
 ಬಾಬುಗೌಡ ಬಿರಾದಾರ ಬಿಜೆಪಿ ಮುಖಂಡ

ಜನಪರ
ಇಂಡಿ: ಇಂದಿನ ಬಜೆಟ್‌ ಜನಪರವಾಗಿದೆ. ಅಭಿವೃದ್ಧಿ ಕುರಿತು ಪಾರದರ್ಶಕ ಮತ್ತು ಪ್ರಮಾಣಿಕ ಬಜೆಟ್‌ ಮಂಡಿಸ ಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒಲವು ನೀಡಲಾಗಿದೆ. ಕೃಷಿ ಬೆಂಬಲ ಬೆಲೆ ರೈತರಿಗೆ ಸಿಗುವಂತೆ 4 ಕೋಟಿ ರೂ. ಬಡವರ ಮನೆಗಳಿಗೆ ವಿದ್ಯುತ್‌, 2 ಕೋಟಿ ಸಾರ್ವಜನಿಕ ಶೌಚಾಲಯ, 11 ಲಕ್ಷ ರೈತರಿಗೆ ಕೃಷಿ ಸಾಲ, 51 ಲಕ್ಷ ನೂತನ ಮನೆಗಳು ಹೀಗೆ ಬಜೆಟ್‌ ಅತ್ಯಂತ ಶ್ರೇಷ್ಠದಾಯಕವಾಗಿದೆ.
 ಶ್ರೀಶೈಲಗೌಡ ಬಿರಾದಾರ ಬಿಜೆಪಿ ಮುಖಂಡ 

ಐಸಿಹಾಸಿಕ
ಇಂಡಿ:
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ ಐತಿಹಾಸಿಕವಾಗಿದೆ. ಜನಪರ ಯೋಜನೆ ಜಾರಿ ಮಾಡಿದೆ. ಬಡವರಿಗೆ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಮಹಿಳೆಯರಿಗೆ ಉಚಿತ ಗ್ಯಾಸ್‌, ರಾಷ್ಟ್ರೀಯ ಹೆದ್ದಾರಿಗಳಿಗೆ ಅಪಾರ ಅನುದಾನ ಬಜೆಟ್‌ ಇಡಲಾಗಿದೆ. ಜನಪರ ಕಾಳಜಿ ಹೊಂದಿದ ಬಜೆಟ್‌ ಇದಾಗಿದೆ.
 ದಯಾಸಾಗರ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

ಪಾರದರ್ಶಕ
ಇಂಡಿ: ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಬಡವರಿಗೆ ಮತ್ತು ಗ್ರಾಮೀಣ ಭಾಗದ ಜನರು, ರೈತರ ಹಿತದೃಷ್ಟಿ ಗಮನದಲ್ಲಿಟ್ಟು ಪಾರದರ್ಶಕವಾದ ಬಜೆಟ್‌ ಮಂಡಿಸಲಾಗಿದೆ. 
 ಕಾಸುಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ

ರೈತ ವಿರೋಧಿ
ಉತ್ತಮ ಬೆಲೆ ಸಿಗದೆ ನಲುಗಿದ ರೈತರನ್ನು ಆರ್ಥಿಕವಾಗಿ ಸದೃಢವಾಗಿಸುವಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡುವ ಆಸೆ ಹೊಂದಲಾಗಿತ್ತು. ಆದರೆ, ಇದು ರೈತ ವಿರೋಧಿ ಬಜೆಟ್‌ನಲ್ಲಿ ಹೇಳಿದೆ. ಇಂದು ನಾಳೆ ಅಚ್ಚೇದಿನ್‌ ಬರುತ್ತದೆ ಎಂದು ಕಾದಿರುವ ಅನೇಕ ನಿರುದ್ಯೋಗಿ ಯುವಕರ ಕನಸು ಸಾಕಾರಗೊಳಿಸಲಾಗಿಲ್ಲ. ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕಕ್ಕೆ ಬಂಪರ್‌ ಕೊಡುಗೆ ಸಿಗಬಹುದು ಎನ್ನಲಾಗುತ್ತಿತ್ತು. 
 ಸಂಗಮೇಶ ಕೆಂಭಾವಿ ಕಾಂಗ್ರೆಸ್‌ ಮುಖಂಡರು.

ನಿರಾಶದಾಯಕ ಬಡವರನ್ನು ಉದ್ದಾರ, ಯುವಕರ ಕೈಗೆ ಕೆಲಸ ನೀಡುತ್ತೆವೆ ಎಂದು ಭರವಸೆ ನೀಡಿದ ನಮೋ ಸರಕಾರ
ಸಾಧನೆ ಶೂನ್ಯವಾಗಿದೆ. ಉದ್ಯಮಿಗಳ ಪರ ಸರಕಾರ ಎನ್ನುವುದನ್ನು ಬಜೆಟ್‌ ಹೇಳುವಂತಾಗಿದೆ. ಬಡತನ ನಿವಾರಣೆ ಆದರೆ ಮಾತ್ರ ದೇಶದ ಪ್ರಗತಿ ಕಾಣುತ್ತದೆ. ಪ್ರತಿ ವರ್ಷ ಎರಡು ಲಕ್ಷ ಯುವಕರಿಗೆ ಕೆಲಸದ ಭರವಸೆ ನುಚ್ಚುನೂರಾಗಿದೆ. ನಾಲ್ಕನೆ ಬಜೆಟ್‌ ಕೂಡ ನಿರಾಶದಾಯಕವಾಗಿದೆ.
 ಸಂಗಮೇಶ ಬಳಿಗಾರ ಕಾಂಗ್ರೆಸ್‌ ಮುಖಂಡರು

ಆರ್ಥಿಕತೆಗೆ ಉತ್ತೇಜನ
ಪ್ರಸಕ್ತ ಸಾಲಿನ ಬಜೆಟ್‌ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. ಎಲ್ಲ ವರ್ಗಗಳಿಗೂ ಆದ್ಯತೆ ನೀಡಲಾಗಿದೆ. ರೈತರು, ಸಾಮಾನ್ಯ ನಾಗರಿಕರು, ಉದ್ಯಮಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿಯಾಗಿದೆ. ಇದು ಬದುಕು ಹಸನಾಗಿಸಲು ಸಹಕಾರಿಯಾಗಿದೆ. ತಲಾ 5 ಲಕ್ಷದಂತೆ 50 ಕೋಟಿ ಬಡಜನರಿಗೆ ನೇರವಾಗಿ ಆರೋಗ್ಯದ ವಿಮೆ ನೀಡುವ ಮೂಲಕ ಬಡವರ ಪರ ಸರಕಾರ ಎನ್ನುವುದು ಬಜೆಟ್‌ ಸಾಬಿತುಪಡಿಸಿದೆ.
 ಶಿವಾನಂದ ಅವಟಿ ಬಿಜೆಪಿ ಮುಖಂಡರು.

ಅತ್ಯುತ್ತಮ
ರೈತರು, ಕೃಷಿ ಕಾರ್ಮಿಕರು, ಶೋಷಿತರ, ಯುವಕರ ಪರ ಬಜೆಟ್‌ ಆಗಿದೆ. ಮುಂದಿನ ಐದು ವರ್ಷದಲ್ಲಿ ಆದಾಯ ದುಪ್ಪಟ್ಟು ಆಗುವ ಯೋಜನೆ ನೀಡಿ ರೈತರ ಆತಂಕ ನಿವಾರಣೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಇತರೆಡೆ ಚುನಾವಣೆ ಇದ್ದರೂ ಮತಬ್ಯಾಂಕ್‌ ಬಳಸಿಕೊಳ್ಳುವ ಯಾವುದೇ ಅಂಶ ನೀಡದೆ ಪ್ರಗತಿಗೆ ಮೊದಲ ಆದ್ಯತೆಯಾಗಿಸುವ ಮೂಲಕ ಅತ್ಯುತ್ತಮ ಬಜೆಟ್‌ ನೀಡಿದೆ.
 ಗದ್ದೆಪ್ಪ ಮಾದರ, ಬಿಜೆಪಿ ಮುಖಂಡರು 

ಉದ್ಯಮ ಸ್ನೇಹಿ 
ದೇಶದ ಪ್ರಗತಿ ವೇಗ ಹೆಚ್ಚಿಸಲಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಿದ್ದಾರೆ. 
 ಸಿದ್ರಾಮೇಶ ಅರಮನಿ, ನಿವೃತ್ತ ಸೈನಿಕ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.