ನೆರೆ ರಾಜ್ಯದ ವ್ಯಾಪಾರಿಗಳಿಗೆ ಬಸ್ ಸೌಲಭ್ಯ
Team Udayavani, May 13, 2020, 5:47 AM IST
ಮುದ್ದೇಬಿಹಾಳ: ತೊಂದರೆಯಲ್ಲಿ ಸಿಲುಕಿದ್ದ ಉತ್ತರಪ್ರದೇಶ, ಮಧ್ಯಪ್ರದೇಶ ಮೂಲದ ಮಹಿಳೆಯರು, ಮಕ್ಕಳು ಸೇರಿ 40ಕ್ಕೂ ಹೆಚ್ಚು ಸಾಮಾನ್ಯ ವ್ಯಾಪಾರಿಗಳನ್ನು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಂಗಳವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ, ಅವರೆಲ್ಲರಿಗೂ ಆಹಾರ ಸಾಮಗ್ರಿ ನೀಡಿ ಬೀಳ್ಕೊಟ್ಟರು.
ಮುದ್ದೇಬಿಹಾಳ, ನಾಲತವಾಡ ಪಟ್ಟಣಗಳಲ್ಲಿ ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದ ಇವರು ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಬಂದಾಗಿ ಸಂಕಷ್ಟದಲ್ಲಿದ್ದು ಶಾಸಕರ ಬಳಿ ಅಳಲು ತೋಡಿಕೊಂಡಿದ್ದರು. ಇದಕ್ಕೆ ಸ್ಪಂದಿ ಸಿದ್ದ ಶಾಸಕರು ಸೇವಾಸಿಂಧು ಆ್ಯಪ್‌ನಲ್ಲಿ ಇವರ ಹೆಸರು ನೋಂದಾಯಿಸಿದ ಲಿಸ್ಟ್ ತರಿಸಿಕೊಂಡು ವಿಜಯಪುರ ಜಿಲ್ಲಾಧಿ ಕಾರಿಯಿಂದ ಅನುಮೋದಿಸಿ ಊರಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದರು.
ಆದರೆ ಉತ್ತರಪ್ರದೇಶದ ಓರೈ ಜಿಲ್ಲಾಧಿಕಾರಿ ಇವರನ್ನು ಸ್ವೀಕರಿಸಲು ಒಪ್ಪಿಗೆ ಕೊಟ್ಟಿರಲಿಲ್ಲ. ಇದು ಶಾಸಕರಿಗೆ ತಿಳಿದು ಆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಪರಿಣಾಮ ಅವರೆಲ್ಲರೂ ಬಸ್‌ಗೆ ತಗಲುವ ಒಟ್ಟು 1.50 ಲಕ್ಷ ರೂ. ಬಸ್ ಚಾರ್ಜನ್ನು ಸಾರಿಗೆ ಇಲಾಖೆಗೆ ಭರಿಸಿದ್ದರು.
ಮಂಗಳವಾರ ಬಸ್‌ನಿಲ್ದಾಣಕ್ಕೆ ಬಂದಾಗ ಶಾಸಕರನ್ನು ಕಂಡು ಕೃತಜ್ಞತೆ ಸಲ್ಲಿಸಲು ಮುಂದಾಗಿದ್ದ ಇವರಿಗೆ ಶಾಸಕರು ಮಕ್ಕಳಿಗೋಸ್ಕರ ಒಂದು ಬಾಕ್ಸ್ ಬಿಸ್ಕೆಟ್, 4 ಬಾಕ್ಸ್ ಕುಡಿವ ನೀರಿನ ಬಾಟಲಿ, 4 ಬಾಕ್ಸ್‌ನಲ್ಲಿ ಪಲಾವ್ ಡಬ್ಬಿ ಪ್ಯಾಕ್ ಮಾಡಿಕೊಟ್ಟು ಬೀಳ್ಕೊಟ್ಟರು. ಇದರಿಂದ ಆ ಜನರೆಲ್ಲ ಶಾಸಕರಿಗೆ ಜೈಕಾರ ಹಾಕಿದರು. ಇದೇ ವೇಳೆ ಬಸ್‌ನ ಇಬ್ಬರು ಚಾಲಕರಿಗೂ ಶಾಸಕರು ಊಟದ ಡಬ್ಬಿ ಮತ್ತು ನೀರು ಒದಗಿಸಿ ಸಹಕರಿಸಿದರು. ಸಿಪಿಐ ಆನಂದ ವಾಗಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ, ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.