ಭಾರತಕ್ಕೆ ಬಂಡವಾಳಶಾಹಿ ವ್ಯವಸ್ಥೆ ಮರಣಾಸ್ತ್ರ


Team Udayavani, Aug 13, 2018, 2:00 PM IST

vij-2.jpg

ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಪ್ರತಿಗಾಮಿಯಾಗಿ ಸಾಮ್ರಾಜ್ಯಸಾಹಿ ಹಂತಕ್ಕೆ ತಲುಪಿದಾಗ ಭಾರತ ಸ್ವತಂತ್ರಗೊಂಡಿತು. ಆಗ ಉದಯೋನ್ಮುಖವಾಗಿ ಬೆಳೆದ ಬಂಡವಾಳಶಾಹಿ ವ್ಯವಸ್ಥೆ ಇದೀಗ ಭಾರತದ ಪಾಲಿಗೆ ಬಂಡವಾಳವಾದ ಮರಣಾಸ್ತ್ರ ಹಂತಕ್ಕೆ ತಲುಪಿದೆ ಎಂದು ಎಸ್‌ಯುಸಿಐ ಮುಖಂಡ ಕೆ.ಸೋಮಶೇಖರ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಜರುಗಿದ ಎಸ್‌ಯುಸಿಐ ಕಮ್ಯೂನಿಷ್ಟ ಪಕ್ಷದ ವಿಜಯಪುರ ಜಿಲ್ಲಾ ಎರಡನೇ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ವ್ಯವಸ್ಥೆ ಬದಲಾವಣೆಗಳು ಪ್ರಾರಂಭದಲ್ಲಿ ಪ್ರಗತಿಪರವಾಗಿ ವರ್ತಿಸುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆ ವ್ಯಕ್ತಿ ಸ್ವಾತಂತ್ರ್ಯಾ ಸಮಾನತೆ, ಬ್ರಾತೃತ್ವ ಎನ್ನುವ ಪ್ರಗತಿಪರ ಘೋಷಣೆಯೊಂದಿಗೆ ಬಂದಿದ್ದು, ಆ ಸಂದರ್ಭದಲ್ಲಿ ಮಾನವ ಕುಲದ ಉತ್ತಮ ಬೆಳವಣಿಗೆಯಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪೂರ್ಣಾಧಿಕಾರ ಬಂಡವಾಳಶಾಹಿಗಳ ಕೈಗೆ ಸಿಕ್ಕು ನಲುಗುತ್ತಿದೆ ಎಂದು ಕಿಡಿ ಕಾರಿದರು.

ಪ್ರಜೆಗಳಿಂದ ಆಯ್ಕೆಯಾದ ಇಂದಿನ ನಮ್ಮ ಸರಕಾರಗಳು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಇನ್ನಿತರ ಹಲವಾರು ಜನ ವಿರೋಧಿ ನೀತಿಗಳು ಜಾರಿಗೊಳಿಸಿ ಬಂಡವಾಳ ಶಾಹಿ ಹಿತಾಸಕ್ತಿ ಕಾಪಾಡುತ್ತಿವೆ. ಇದರಿಂದ
ನಿರುದ್ಯೋಗ, ಬೆಲೆ ಏರಿಕೆ, ಬಡತನ, ಭ್ರಷ್ಟಾಚಾರ, ಅಭದ್ರತೆ, ಅಸಹಿಷ್ಣುತೆ, ಕೋಮುವಾದ, ಮೂಢನಂಬಿಕೆ, ಅವೈಜ್ಞಾನಿಕತೆ, ಅತ್ಯಾಚಾರ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ರೈತರು, ಕಾರ್ಮಿಕರು ವಿದ್ಯಾರ್ಥಿ-ಯುವಕರನ್ನು, ಮಹಿಳೆಯರನ್ನು ಒಟ್ಟಾರೆ ಜನಸಾಮಾನ್ಯರನ್ನು ಪೆಡಂಭೂತವಾಗಿ ಕಾಡುತ್ತಿವೆ. ಹಾಗಾಗಿ ಇಂದು ಜನತೆ ಇದೆಲ್ಲದರ ವಿರುದ್ದ ಒಗ್ಗಟ್ಟಾಗಿ ಹೋರಾಟ ಕಟ್ಟಬೇಕಾಗಿದೆ. ಈ ಹೋರಾಟ ಅಂತಿಮವಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಹೋಗಬೇಕಾಗಿದೆ ಎಂದರು.

ಸಮಾವೇಶದ ಕೊನೆಯಲ್ಲಿ ನೇಮಕವಾದ ನೂತನ ಜಿಲ್ಲಾ ಸಮಿತಿಗೆ ಪ್ರಗತಿಪರ ಹೋರಾಟ ಕಟ್ಟಲು ಪಕ್ಷದ ಸಂಘಟನೆ ವಿಸ್ತರಿಸಲು ಉತ್ಸಾಹಭರಿತರಾಗಿರಬೇಕು. ಜಿಲ್ಲೆಯಲ್ಲಿ ಎಡಪಂಥಿಯ ವಿಚಾರಗಳು ಗಟ್ಟಗೊಳ್ಳುವಲ್ಲಿ ಅನುಮಾನವಿಲ್ಲ. ವ್ಯವಸ್ಥೆಯಲ್ಲಿರುವ ಹಳೆ ವಿಚಾರಗಳು, ವ್ಯಕ್ತಿವಾದ, ಅಹಂ, ಇವುಗಳನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಪಕ್ಷದ ಆಂತರಿಕ ಹೋರಾಟ ಬೆಳೆಸಲು ಯಾವತ್ತೂ ಜಾಗರೂಕತೆ ವಹಿಸಬೇಕು ಎಂದರು.

ಎಸ್‌ಯುಸಿಐ ನೂತನ ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ರಂಗದ ಸಮಸ್ಯೆ ಗುರುತಿಸಿ ವಿದ್ಯಾರ್ಥಿ-ಯುವಕರನ್ನು-ಮಹಿಳೆಯರನ್ನು-ರೈತರನ್ನು-ಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ಭವಿಷ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ವೈಚಾರಿಕವಾಗಿ ಸಾಂಸ್ಕೃತಿಕವಾಗಿ ಸಂಘಟನಾತ್ಮಕವಾದ ಬಲಿಷ್ಠ ಹೋರಾಟ ಕಟ್ಟಲು ಪಣ ತೊಡಲಾಗುವುದು ಎಂದರು. 

ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ, ಭರತಕುಮಾರ, ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಎಚ್‌.ಗೀತಾ, ಸುನೀಲ ಸಿದ್ರಾಮಶೆಟ್ಟಿ, ಶೋಭಾ ಯರಗುದ್ರಿ, ಶಿವಬಾಳಮ್ಮ ಕೊಂಡಗೂಳಿ, ಕಾಶೀಬಾಯಿ ತಳವಾರ, ಸುಮಾ ಜೇವೋರ, ಸುರೇಖಾ, ಆಕಾಶ್‌, ಕಾವೇರಿ ರಜಪೂತ, ಸಂಗೀತಾ, ದ್ಯಾಮಣ್ಣ ಬಿರಾದರ, ಪ್ರೇಮಾ ಸಿದ್ರಾಮಶೆಟ್ಟಿ, ಅಂಜನಾ ಕುಂಬಾರ, ಮಾಹಾದೇವಿ ಧರ್ಮಶೆಟ್ಟಿ, ಮಹಾದೇವಿ ತೇಲಿ, ಶ್ರೀಕಾಂತ ಪಾಲ್ಗೊಂಡಿದ್ದರು. 

ಟಾಪ್ ನ್ಯೂಸ್

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.