ಹೊರ್ತಿಯಲ್ಲಿ ಗಮನ ಸೆಳೆದ ಜಾನುವಾರು ಜಾತ್ರೆ
Team Udayavani, Dec 15, 2021, 3:39 PM IST
ಚಡಚಣ: ಹೊರ್ತಿ ರೇವಣಸಿದ್ದೇಶ್ವರ ಜಾತ್ರೆಯಲ್ಲಿ ಜಾನುವಾರುಗಳ ಜಾತ್ರೆಯೂ ನಡೆಯುತ್ತಿದೆ. ಗ್ರಾಮದ ಇಂಚಗೇರಿ ರಸ್ತೆ ಮೈದಾನದಲ್ಲಿ ಸಮಾವೇಶಗೊಂಡ ಜಾನುವಾರುಗಳು ಎರಡು ದಿನ ಮುಂಚಿತವಾಗಿಯೇ ತಮ್ಮ ತಮ್ಮ ಸ್ಥಳದಲ್ಲಿ ಠಿಕಾಣಿ ಹೂಡಿವೆ.
ಜಾತ್ರಾ ಕಮಿಟಿಯವರು ಜಾನುವಾರುಗಳಿಗೆ ಸಕಲ ಸೌಲಭ್ಯ ಕಲ್ಪಿಸಿದ್ದಾರೆ. ಸುಮಾರು 15000ಕ್ಕೂ ಹೆಚ್ಚು ಜಾನುವಾರುಗಳು ಭಾಗಿಯಾಗಿ ಜಾತ್ರೆಗೆ ಮೆರುಗು ತಂದಿವೆ. ಆದರೆ ಮಾರಾಟ ಮಂದಗತಿಯಲ್ಲಿದ್ದು. ಮಾಲಿಕರಿಗೆ ಸಂಕಷ್ಟಕ್ಕೀಡು ಮಾಡಿದೆ.
ಈ ಸಲ ಅತಿವೃಷ್ಟಿಯಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು ಮಾರಾಟ ಮಾಡಿ ನಿಶ್ಚಿಂತೆಯಿಂದ ಇರಬೇಕೆಂದ ರೈತನಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಗ್ರಾಹಕರ ದಾರಿ ನೊಡುವ ಪರಿಸ್ಥಿತಿ ಎದುರಾಗಿದೆ. ಜಾತ್ರೆಯಲ್ಲಿ ಖರೀದಿದಾರರ ಕೊರತೆ ಎದ್ದು ಕಾಣುತ್ತಿದೆ. ಗೋಕಾಕ, ಮೂಡಲಗಿ, ಮುಂಬೆ, ಆಂಧ್ರಪ್ರದೇಶ, ರಾಯಚೂರು ಮುಂತಾದವುಗಳ ಕಡೆಯಿಂದ ಆಗಮಿಸುತ್ತಿದ್ದ ಗ್ರಾಹಕರು ಜಾತ್ರೆಯಲ್ಲಿ ಎದ್ದು ಕಾಣುತ್ತಿಲ್ಲ. ಹೀಗಾಗಿ ವ್ಯಾಪಾರ ಅಷ್ಟಕಷ್ಟೇ ಇದೆ. ಜಾತ್ರೆಯಲ್ಲಿ ನೀಳವಾದ ಶುಭ್ರವಾದ ಎರಡು ಹಲ್ಲಿನ ಹೋರಿಗಳಿಗೆ ಬೇಡಿಕೆ ಇದೆ. ಜೋಡಿಗೆ 1.30 ಲಕ್ಷ ರೂ.ಗೆ ಮಾರಾಟವಾಗಿ ಬೆರಗು ಮೂಡಿಸಿದೆ.
ಇದರಂತೆ ಉತ್ತಮ ತಳಿಯ ಎತ್ತುಗಳು ಜೋಡಿಗೆ 70 ಸಾವಿರ ಮಾರಾಟವಾಗಿವೆ. ಖೀಲಾರಿ ಆಕಳುಗಳು ಜೋಡಿಗೆ 30ರಿಂದ 35 ಸಾವಿರಕ್ಕೆ ಮಾರಾಟವಾಗಿ ಒಡೆಯನಿಗೆ ಸಂತೋಷ ತಂದಿವೆ. ಹಲ್ಲಿಲ್ಲದ ಹೋರಿಗಳು 15 ರಿಂದ 20 ಸಾವಿರಕ್ಕೆ ಮಾರಾಟವಾಗುತ್ತಿವೆ.
ಜಾತ್ರೆಯಲ್ಲಿ ವಿದ್ಯುತ್ ನೀರು, ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೊರೊನಾ ಹಿನ್ನೆಲೆ ಮೂಡಲಗಿ, ಗೋಕಾಕ, ಮುಂಬೈ, ಪ್ರಸಿದ್ಧ ವ್ಯಾಪಾರಿಗಳು ಖರೀದಿಗೆ ಬಂದಿಲ್ಲ. ವ್ಯಾಪಾರವೂ ಮಂದಗತಿಯಲ್ಲಿದೆ. ಎಲ್ಲರೂ ಶಾಂತತೆ ಕಾಪಾಡಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಬೇಕು. -ಅಣ್ಣಪ್ಪ ಖೈನೂರ ಜಾತ್ರಾ ಕಮಿಟಿ ಅಧ್ಯಕ್ಷ
ಜಾನುವಾರುಗಳನ್ನು ಮಾರಾಟ ಮಾಡಲಿಕ್ಕೆ ಜಾತ್ರೆಗೆ ಬಂದಿದ್ದೇವೆ. ಆದರೆ ವ್ಯಾಪಾರ ಮಂದಗತಿಯಲ್ಲಿದ್ದು ನಮಗೆ ತೊಂದರೆಯಾಗುತ್ತಿದೆ. ಜಾತ್ರೆಯಲ್ಲಿ ಜಾನುವಾರುಗಳು ಅಪಾರ ಸಂಖ್ಯೆಯಲ್ಲಿ ಕೂಡಿದ್ದರೂ ವ್ಯಾಪಾರದ ಕೊರತೆ ಎದ್ದು ಕಾಣುತ್ತಿದೆ. -ಮಲ್ಲಿಕಾರ್ಜುನ ದೇಗಿನಾಳ, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.