ಸರಳ ಗಣೇಶೋತ್ಸವ ಆಚರಿಸಿ
Team Udayavani, Sep 8, 2018, 12:00 PM IST
ವಿಜಯಪುರ: ರಾಜ್ಯದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಆವರಿಸಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸದೇ ಸರಳ ರೀತಿ ಆಚರಿಸಿ, ಉಳಿಕೆ ಹಣವನ್ನು ಸಂತ್ರಸ್ತರ ಪರಿಹಾರ ನಿಧಿಗೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿದರು.
ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಜರುಗಿದ ಗಜಾನನ ಮಹಾಮಂಡಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರದ್ಧೆ, ಭಕ್ತಿಯಿಂದಲೇ ಉತ್ಸಾಹದಿಂದ ಗಣೇಶೋತ್ಸವ ಆಚರಿಸಿ. ಆದರೆ ಈ ಬಾರಿ ಅದ್ಧೂರಿತನ ಕಡಿಮೆ ಮಾಡಿ, ಸರಳ ರೀತಿಯಿಂದ ಆಚರಿಸಬೇಕಿದೆ.
ಅರ್ಥಪೂರ್ಣ ಆಚರಣೆಗಾಗಿ ಅಬ್ಬರ ಧ್ವನಿ ವರ್ಧಕಗಳು, ಅದ್ಧೂರಿ ಅಲಂಕಾರಗಳಿಗೆ ಬಳಸುವ ಹಣವನ್ನು ಸಂತ್ರಸ್ತರ
ನೆರವಿಗೆ ನೀಡಿ ಎಂದು ಮನವಿ ಮಾಡಿದರು. ಇದಲ್ಲದೇ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನ ಮೂರ್ತಿ ಮಾರಾಟ ನಿಷೇಧಿಸಿದ್ದು, ಕೆಲವೆಡೆ ನಿಷೇಧ ಉಲ್ಲಂಘಿಸಿ, ಮಾರಾಟ ಮಾಡಲಾಗುತ್ತಿರುವ ಪ್ರಕರಣ ಕೇಳಿ ಬರುತ್ತಿದೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ರಸ್ತೆಗೆ ಹಗ್ಗ ಕಟ್ಟಿ ಸಂಚಾರಕ್ಕೆ ತೊಂದರೆ ನೀಡಿ ವಾಹನಗಳನ್ನು ತಡೆದು ಬಲವಂತವಗಿ ಗಣೇಶ ಉತ್ಸವಕ್ಕೆ ಹಣ ವಸೂಲಿ ಮಾಡುವ ಪ್ರಕರಣಗಳು ಕಂಡು ಬರುತ್ತವೆ. ಇದಕ್ಕೆ ಅವಕಾಶ ನೀಡಬಾರದು. ಇಂಥ ಪ್ರಕರಣಗಳು ವರದಿಯಾದರೆ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಸಿದರು.
ಪರಿಸರ ಅಭಿಯಂತರ ಬಿ.ಜಗದೀಶ ಮಾತನಾಡಿ, ಗಣೇಶನ ಉತ್ಸವ ಮೂರ್ತಿಗಳ ವಿಸರ್ಜನೆಗೆ ತಾಜ್‌ಬಾವಡಿ ಮುಂಭಾಗ ಸೇರಿದಂತೆ 9 ಕಡೆಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ತಾಜ್‌ಬಾವಡಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆಗೆ ಅವಕಾಶ ಕೊಡಿ. ಇಲ್ಲವೇ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಕೃತಕ ಹೊಂಡದ ಸ್ಥಳ ಇನ್ನೂ ಹೆಚ್ಚಾಗಿ ಆಳ-ಅಗಲ ವಿಸ್ತರಿಸಬೇಕು. ಗಜಾನನ ಉತ್ಸವ ಸಮಿತಿಗಳು ಸಹ ಡಿಜೆಯಲ್ಲಿ ದೇಶಭಕ್ತಿ ಗೀತೆ, ಭಕ್ತಗೀತೆಗಳನ್ನು ಅಳವಡಿಸಬೇಕು ಎಂದು ಕೋರಿದರು. ಗಜಾನನ ಮಹಾಮಂಡಳ ಅಧ್ಯಕ್ಷ ಶರತ್ ಬಿರಾದಾರ ಮಾತನಾಡಿದರು.
ಟ್ರೋಫಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಪರಿಸರ ಸ್ನೇಹಿಯಾಗಿ, ಅರ್ಥಪೂರ್ಣ ಆಚರಣೆಗೆ ಗಜಾನನ ಮಂಡಳಿಗಳಿಗೆ ಮೂರು ವಿಶೇಷ ಬಹುಮಾನ ನೀಡಲಾಗುವುದಾಗಿ ಎಸ್ಪಿ ಪ್ರಕಾಶ ನಿಕ್ಕಂ ಹೇಳಿದರು. ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸುವ, ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಣೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮೆರವಣಿಗೆ, ಟ್ರಾಫಿಕ್ ರೂಲ್ಸ್ ಫಾಲೋ ಮಾಡುವ ಗಜಾನನ ಉತ್ಸವ ಸಮಿತಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ಗಜಾನನ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಅನುಮತಿಗಾಗಿ ಏಕಗವಾಕ್ಷಿ ಯೋಜನೆ ರೂಪಿಸಲಾಗಿದ್ದು, ಸೋಮವಾರ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು. ಗಜಾನನ ಉತ್ಸವ ಸಮಿತಿಗಳು
ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ, ಹೆಚ್ಚು ಡೆಸಿಬಲ್ ಇರುವ ಡಿಜೆಗಳನ್ನು ಹಾಕಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.