![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 8, 2020, 1:41 PM IST
ಚಡಚಣ: ನಾಗಠಾಣ ಮತಕ್ಷೇತ್ರದ ಶಾಸಕ ಡಾ| ದೇವಾನಂದ ಚವ್ಹಾಣ ಇತ್ತೀಚೆಗೆ ನಂದರಗಿ, ಬರಡೋಲ, ಇಂಚಗೇರಿ, ದೇವರನಿಂಬರಗಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ತಡೆಗೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೋವಿಡ್ ತಡೆಗೆ ಶ್ರಮಿಸುತ್ತಿದ್ದಿರಿ. ಮೇಲಾಧಿಕಾರಿಗಳು ಹೇಳಿದ ವಿಚಾರ, ಸಲಹೆಗಳನ್ನು ಪರಿಪಾಲಿಸಬೇಕು. ಸಾರ್ವಜನಿಕರು ಅನವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಜಾಗೃತಿ ಮೂಡಿಸಬೇಕು. ಬೇರೆ ಊರುಗಳಿಂದ ಯಾರಾದರೂ ಬಂದರೆ ಅವರನ್ನು ಪರೀಕ್ಷಿಸಿ ಅವರ ಮಾಹಿತಿ ಒದಗಿಸಬೇಕು. ವೈದ್ಯರು ಗ್ರಾಮದಲ್ಲೇ ವಾಸ್ತವ್ಯ ಹೂಡಿ ನಿಗಾ ವಹಿಸಬೇಕೆಂದು ಹೇಳಿದರು.
ಇದೇ ವೇಳೆಯಲ್ಲಿ ಶಾಸಕರು ಜಿಗಜೇವಣಿ ಹಾಗೂ ಇಂಚಗೇರಿ ಕೆರೆಗೆ ಭೇಟಿ ನೀಡಿ ಕೂಲಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಿದರು. ಎಪಿಎಂಸಿ ಉಪಾಧ್ಯಕ್ಷ ಬಾಬು ಚವ್ಹಾಣ ಮಾತನಾಡಿ, ಕೊರೊನಾ ತಡೆಗೆ ಸಾರ್ವಜನಿಕರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಹಾಕಿಕೊಂಡು ಸಹಕರಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಭಾರತಿ ಚವ್ಹಾಣ, ರವಿದಾಸ ಜಾಧವ, ಪಿಡಿಒ ದಾನಯ್ಯ ಕರಜಗಿಮಠ, ಎಂ.ಟಿ.ಬಿರಾದಾರ, ಭೀಮರಾಯಗೌಡ ಬಿರಾದಾರ, ಅಲ್ಲಿಸಾಬ್ ಚಡಚಣ, ಡಾ| ಶಮಶೇರಲಿ ಮುಲ್ಲಾ, ಜೈನುದ್ದೀನ್ ಪಠಾಣ, ಮಹಾದೇವ ನಾವಿ, ಜಿಲಾನಿ ವಾಲೀಕಾರ, ಅಂಬರೀಷ ಬೆಳ್ಳೇನವರ ಸೇರಿಗ್ರಾಪಂ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಇದ್ದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
You seem to have an Ad Blocker on.
To continue reading, please turn it off or whitelist Udayavani.