ರೇವತಗಾಂವ ನಂದೂರ ಗಡಿ ಪುನಃ ಬಂದ್
ಗಡಿಯಲ್ಲಿ ರಸ್ತೆ ಓಪನ್ ಮಾಡಿದ ಕಿಡಿಗೇಡಿಗಳು
Team Udayavani, Apr 23, 2020, 4:46 PM IST
ಚಡಚಣ: ರೇವತಗಾಂವ ಮಾರ್ಗವಾಗಿ ಮಹಾರಾಷ್ಟ್ರದ ನಂದೂರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪುನಃ ಬಂದ್ ಮಾಡಲಾಯಿತು.
ಚಡಚಣ: ಕೋವಿಡ್ ಭೀತಿಯಿಂದ ಗಡಿಯಲ್ಲಿನ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿದ್ದರೂ ರಾತ್ರೋ ರಾತ್ರಿ ಕೆಲ ಕಿಡಿಗೇಡಿಗಳು ಗಡಿಯಲ್ಲಿನ ಮುಳ್ಳಿನ ಬೇಲಿ ಕಿತ್ತೆಸೆದು ರಸ್ತೆ ತೆರುವುಗೊಳಿಸಿ ಒಳ ನುಸುಳುತ್ತಿದ್ದಾರೆ.
ರೇವತಗಾಂವ ಗ್ರಾಮದಿಂದ ಮಹಾರಾಷ್ಟ್ರದ ನಂದೂರ ಮಾರ್ಗವಾಗಿ ಮಂಗಳವೇಡ ಹಾಗೂ ಪಂಢರಪುರ ಸೇರಿದಂತೆ ಇತರೆಡೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಲಾಕ್‌ಡೌನ್ ಹಿನ್ನಲೆಯಲ್ಲಿ ಈ ರಸ್ತೆಯನ್ನು ಗ್ರಾಪಂ ಅಧಿ ಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗ ಗಡಿಯಲ್ಲಿ ಈ ರಸ್ತೆಗೆ ಮುಳ್ಳಿನ ಬೇಲಿ ಹಾಗೂ ಗರಸು ಹಾಕಿ ಬಂದ್ ಮಾಡಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ರಾತ್ರೋರಾತ್ರಿ ಗಡಿ ರಸ್ತೆಯಲ್ಲಿನ ಮುಳ್ಳು ಬೇಲಿಯನ್ನು ತೆರುವುಗೊಳಿಸಿದ್ದರು.
ಇದ್ದನ್ನರಿತ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಮದ ಬೀಟ್ ಹವಾಲ್ದಾರ್ ಎಲ್.ಎಸ್. ರಾಠೊಡ ಅವರು, ಸಾರ್ವಜನಿಕರ ನೆರವಿನಿಂದ ಪುನಃ ಗಡಿ ರಸ್ತೆಯನ್ನು ಜೆಸಿಬಿ ಮೂಲಕ ಮುಳ್ಳಿನ ಬೇಲಿ ಹಾಗೂ ಗರಸನ್ನು ಹಾಕಿ ಬಂದ್ ಮಾಡಿದರು. ಈ ವೇಳೆ ನಾರಾಯಣ ವಾಘಮೋರೆ, ಸುರೇಶ ಹಕ್ಕೆ, ಪ್ರಕಾಶ ಜೀಗಜೇವಣಿ, ಸಿದ್ದರಾಮ ಕುಂಬಾರ, ಅರವಿಂದ ನಂದಗೊಂಡೆ, ಉಮೇಶ ಜೀಗಜೇವಣಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.