ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರೆಯಲ್ಲಿ ಭಕ್ತಿಗಿಲ್ಲ ಬರ
Team Udayavani, Mar 18, 2019, 11:12 AM IST
ಆಲಮಟ್ಟಿ: ಈ ಭಾಗದ ಆರಾಧ್ಯ ದೈವವಾಗಿರುವ ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸದರನ್ನು ಇಳಿಸುವುದರೊಂದಿಗೆ ಶನಿವಾರ ಸಂಪನ್ನಗೊಂಡಿತು.
ಮಾ. 14ರಂದು ಆರಂಭವಾದ ಜಾತ್ರೆಯಂಗವಾಗಿ ಸಾಕ್ಷಾತ್ ಚಾಮುಂಡೇಶ್ವರಿ ಅವತಾರವೆಂದೇ ಜನ ಜನಿತವಾಗಿರುವ
ಚಂದ್ರಮ್ಮ ದೇವಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಜಾತ್ರೆಗೆ ಚಾಲನೆ ನೀಡಲಾಗಿತ್ತು.
ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಲಿಂಗಭೇದ ಹಾಗೂ ವಯೋಭೇದವಿಲ್ಲದೇ ಕೃಷ್ಣಾ ನದಿಯಲ್ಲಿ ಮಡಿಸ್ನಾನ ಮಾಡಿ ಶಿವಾಪಾರ್ವತಿ ಹರಹರ ಎನ್ನುತ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಭಕ್ತಿಗೆ ಬರವಿಲ್ಲ: ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿರುವುದರಿಂದ ರೈತರು ಬಿತ್ತನೆ ಮಾಡಿದ ಬೀಜ ಮೊಳಕೆಯಲ್ಲಿಯೇ ಕಮರಿ ಹೋಗಿದ್ದರೂ ಕೂಡ ನಾಡಿನ ಜನರಲ್ಲಿ ಭಕ್ತಿಗೆ ಬರವಿಲ್ಲ. ಪ್ರತಿ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತನುಮನಧನದಿಂದ ಭಕ್ತಿ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರಾದರು.
ಖರೀದಿ ಜೋರು: ಪ್ರತಿ ಬಾರಿಯೂ ಬೇಸಿಗೆ ಆರಂಭದಲ್ಲಿ ನಡೆಯುವ ಜಾತ್ರೆಯಲ್ಲಿ ಈ ಬಾರಿಯೂ ಕೂಡ 1 ಕಿ.ಮೀ.ವರೆಗೆ ವಿವಿಧ ಸಾಮಗ್ರಿಗಳ ಅಂಗಡಿಗಳನ್ನು ಹಾಕಲಾಗಿತ್ತು. ಚಿನ್ನವನ್ನು ನಾಚಿಸುವಂತೆ ಬಂಗಾರ ವರ್ಣದ ಚೈನ್, ಲಾಕೆಟ್, ಉಂಗುರ ಹೀಗೆ ಆಭರಣಗಳ ಖಜಾನೆಯಂತಿರುವ ಎಲ್ಲ ವಸ್ತುಗಳ ಎಲ್ಲರ ಗಮನ ಸೆಳೆಯುವುದರೊಂದಿಗೆ ಬೆಲೆಯಲ್ಲಿಯೂ ಕೂಡ ವಿಶೇಷವೆನಿಸಿತು.
ನೂರಾರು ರೂ.ಗಳ ದರವೆನ್ನುವಂತೆ ಅನಿಸಿದ ವಸ್ತುಗಳಿಗೆ ಕೇವಲ 10, 20, 30 ರೂ.ಗಳ ದರದಲ್ಲಿ ಆಭರಣಗಳು ಮಾರಾಟವಾಗುತ್ತಿದ್ದರೆ ಇನ್ನು ಮಕ್ಕಳ ವಿವಿಧ ಆಟಿಕೆ ಸಾಮಾನುಗಳು, ಪ್ರವಾಸದಲ್ಲಿ ಅತಿ ಅವಶ್ಯವಾಗುವ ಬ್ಯಾಗುಗಳು, ಒಕ್ಕಲುತನಕ್ಕೆ ಬೇಕಾಗುವ ಕೆಲ ಸಾಮಗ್ರಿಗಳು, ಬಿದಿರಿನಿಂದ ತಯಾರಿಸಿದ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ಮೊರ, ಬುಟ್ಟಿ ಮತ್ತು ನೈಜ ಹೂವುಗಳನ್ನು ನಾಚಿಸುವಂತೆ ಕೃತಕ ಹೂಗಳು, ಹೀಗೆ ತರಹೇವಾರಿ ವಸ್ತುಗಳ ಬೆಲೆ ಕಡಿಮೆಯಿದಿದ್ದರಿಂದ ಜಾತ್ರೆಗೆ ಬಂದ ಭಕ್ತರು ಒಂದಿಲ್ಲೊಂದು ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು.
ದೇವಸ್ಥಾನಕ್ಕೆ ತೆರಳುವ ಮಾರ್ಗದ ರಾಮಲಿಂಗೇಶ್ವರ ದೇವಸ್ಥಾನದ ವೃತ್ತ ಬಳಿಯಿಂದ ಸಂಗಮ ನರ್ಸರಿ ಶಾಲೆವರೆಗೂ ಎರಡೂ ಬದಿಯಲ್ಲಿ ಲಂಬಾಣಿ ಮಹಿಳೆಯರು ಧರಿಸುವ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ಉಡುಪುಗಳ ವ್ಯಾಪಾರ ಜೋರಾಗಿತ್ತು. ಇನ್ನು ಮಹಿಳೆಯರು ಹಾಗೂ ಮಕ್ಕಳ ಮನರಂಜನೆಗಾಗಿ ಇಡಲಾಗಿದ್ದ ಚಕ್ರಗಳಲ್ಲಿ ಕುಳಿತು ರಂಜಿಸಿದರು.
ಬೇಸಿಗೆಯಾದ್ದರಿಂದ ಭಕ್ತರು ಮುಂಜಾನೆಯಂದಲೇ ತಂಪು ಪಾನೀಯಗಳು, ಮಜ್ಜಿಗೆ, ಎಳನೀರು ಸೇವಿಸಿ ಮತ್ತೆ ಶಿವ ಪಾರ್ವತಿ ಹರಹರಾ ಎನ್ನುತ್ತ ದೇವಿಯ ದರ್ಶನಕ್ಕೆ ತೆರಳುತ್ತಿದ್ದರು. ಗುರುವಾರದಿಂದ ಆರಂಭವಾದ ಜಾತ್ರೆಯಲ್ಲಿ ನಾಟಕ ಹಾಗೂ ಭಜನೆ ಹಾಡುಗಳು ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಮಗಳು ಮೂರು ದಿನಗಳ ಕಾಲ ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.