![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 19, 2019, 11:30 AM IST
ಇಂಡಿ: ಜಿಲ್ಲೆಯವರೇ ಆರೋಗ್ಯ ಸಚಿವರಾದರೂ ಆಸ್ಪತ್ರೆಗಳು ಮಾತ್ರ ಸುಧಾರಣೆಯಾಗದೆ ಹಾಗೇ ಉಳಿಯುತ್ತಿವೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯ ಇದುವರೆಗೂ ಬಗೆಹರಿದಿಲ್ಲ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ರೋಗಿಗಳು ರಾತ್ರಿ ಸಮಯದಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಇದ್ದ ಕೆಲ ವೈದ್ಯರು ಸಹ ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಬೆಳಗ್ಗೆ ಬಂದು ಒಂದು ಗಂಟೆ ಕುಳಿತುಕೊಂಡು ಹೋಗುತ್ತಾರೆ. ಅವರಿಗೆ ಯಾರೂ ಏನೂ ಹೇಳಲ್ಲ. ಹೀಗಾಗಿ ರೋಗಿಗಳಿಗೆ ತೊಂದರೆಯಾಗುತ್ತದೆ.
ತೀವ್ರ ನಿಗಾ ಘಟಕ ಇಲ್ಲ. ಹೆಣ್ಣು ಮಕ್ಕಳ ಹೆರಿಗೆ ಮಾಡಿಸಿಕೊಳ್ಳಲು ಒಬ್ಬರೂ ಹೆರಿಗೆ ತಜ್ಞರಿಲ್ಲ. ಹೆರಿಗೆಗೆ ಸಹ ವಿಜಯಪುರ, ಸೊಲ್ಲಾಪುರ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇಲ್ಲಿದೆ. ಹೆಸರಿಗೆ 100 ಹಾಸಿಗೆ ಆಸ್ಪತ್ರೆಯಾಗಿದ್ದರೂ ಸಿಬ್ಬಂದಿಗಳು
ಇರದೇ ಇರುವುದರಿಂದ ರೋಗಿಗಳು ಮತ್ತೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ.
ಸಿಬ್ಬಂದಿಗಿಲ್ಲ ವಸತಿ ಗೃಹ: ಈ ಹಿಂದೆ ಹಳೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ವಸತಿ ಗೃಹಗಳಿದ್ದು ಅವುಗಳನ್ನು ದುರಸ್ತಿ ಮಾಡಿಸಿಲ್ಲ.
ಮೇಲಿನ ಹಂಚುಗಳು ಬೀಳುತ್ತಿವೆ. ಅಂತಹ ಮನೆಗಳಲ್ಲಿಯೇ ಸಿಬ್ಬಂದಿ ವಾಸವಿದ್ದಾರೆ. ಹೆರಿಗೆಗೆ ಸಂಬಂಧಿಸಿದಂತೆ ಹೆರಿಗೆ ತಜ್ಞರೆ ಇಲ್ಲ.
12 ನರ್ಸಗಳಿದ್ದು, ಮೂವರು ನರ್ಸಗಳು ಹೆರಿಗೆ ಮಾಡಿಕೊಳ್ಳುತ್ತಾರೆ. ಆಸ್ಪತ್ರೆಗೆ ಅವಶ್ಯವಿರುವಷ್ಟು ನರ್ಸಗಳು ಇದ್ದರೂ ರಾತ್ರಿ ಸಮಯದಲ್ಲಿ ಬಂದ ರೋಗಿಗಳು ಮತ್ತು ಹೆರಿಗೆಗಾಗಿ ಬಂದ ಮಹಿಳೆಯರಿಂದ ನರ್ಸಗಳು ದುಡ್ಡು ಪಡೆಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಖಾಲಿ ಹುದ್ದೆಗಳು: ಹೊರ ಗುತ್ತಿಗೆ ಆಧಾರದ ಮೇಲೆ 9 ಜನ ಕಾರ್ಯ ನಿರ್ವಹಿಸುತ್ತಿದ್ದು, ಗ್ರುಪ್‌ಡಿ ನೌಕರರು ಒಟ್ಟು 30 ಜನ ಬೇಕು.
ಆದರೆ ಈಗ ನಾಲ್ವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 26 ಖಾಲಿ ಇವೆ. ಕಚೇರಿಗೆ ಒಂದು ಎಫ್‌ಡಿಸಿ, ಒಂದು ಎಸ್‌ಡಿಸಿ ಹಾಗೂ
ಒಂದು ಡಾಟಾ ಆಪರೇಟರ್ ಹುದ್ದೆ ಖಾಲಿ ಇವೆ. ಇಬ್ಬರು ವೈದ್ಯರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಮೇಶ ಬಳಬಟ್ಟಿ
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.