ಚುಟುಕು ಸಾಹಿತಿ ಕೆ.ಜಿ. ಭದ್ರಣ್ಣವರಗೆ ನುಡಿ ನಮನ
Team Udayavani, Jul 5, 2021, 9:43 PM IST
ಮುದ್ದೇಬಿಹಾಳ: ಚುಟುಕು ಸಾಹಿತಿ ದುಂಡಿರಾಜರ ನಂತರ ಅತಿ ಹೆಚ್ಚು ಜನಮನ್ನಣೆ ಹೊಂದಿ ಮುದ್ದೇಬಿಹಾಳ ಪಟ್ಟಣವನ್ನು ರಾಜ್ಯಕ್ಕೆ ಪರಿಚಯಿಸಿದ ಶ್ರೇಯಸ್ಸು, ಹೆಗ್ಗಳಿಕೆ ದಿ| ಕೆ.ಜಿ. ಭದ್ರಣ್ಣವರಗೆ ಸಲ್ಲುತ್ತದೆ ಎಂದು ಶಿಕ್ಷಕ, ಸಾಹಿತಿ ರುದ್ರೇಶ ಕಿತ್ತೂರ ಹೇಳಿದರು. ಇಲ್ಲಿನ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ನ ಸಭಾ ಭವನದಲ್ಲಿ ರವಿವಾರ ನಡೆದ ದಿ| ಭದ್ರಣ್ಣವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುಟುಕು ಸಾಹಿತಿಯಾಗಿದ್ದ ಭದ್ರಣ್ಣವರ ಸಾಹಿತ್ಯ ಕೃಷಿ 10-12 ವರ್ಷ ನಿರಂತರ ನಡೆದಿದೆ. ಸಾಹಿತ್ಯದ ಮನೆತನದಿಂದ ಬರದಿದ್ದರೂ ಎಂಜಿನಿಯರ್ ವೃತ್ತಿಯಿಂದ ನಿವೃತ್ತರಾದ ನಂತರ ಅವರಲ್ಲಿನ ಉತ್ಸಾಹ ಸಾಹಿತ್ಯದೆಡೆ ಹೊರಳಿ ಅದನ್ನೇ ಜೀವನವನ್ನಾಗಿಸಿಕೊಂಡಿದ್ದರು. ಪತ್ರ ಬರೆಯುವ ಹವ್ಯಾಸವನ್ನೂ ಹೊಂದಿದ್ದರು. ಸಾಮಾಜಿಕ ಜೀವನದಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವಂಥವರಾಗಿದ್ದರು. ಅವರ ಚುಟುಕುಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಭದ್ರಣ್ಣವರ ಅವರನ್ನು ಕೆಜಿಬಿ ಎಂದು ಕರೆಯುವ ವಾಡಿಕೆ ಇತು.¤ ಸಾಹಿತ್ಯಿಕ ವಲಯದಲ್ಲಿ ಅದನ್ನು ಕೆಜಿ ಬಂಗಾರ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು ಎಂದರು.
ಮನೆಯಲ್ಲಿ ಮಹಾಮನೆ ಬಳಗದ ಹಿರಿಯರಾದ ಎಸ್.ಬಿ. ಬಂಗಾರಿ, ಶಿಕ್ಷಕ ಸಿ.ಜಿ. ನಾಗರಾಳ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಪುತ್ರ ಅಜಮನಿ, ಭದ್ರಣ್ಣವರ ಅವರಿಂದ ಪ್ರೇರಿತರಾದ ಸಿಂದಗಿಯ ಸುಕೃತಾ ಪಟ್ಟಣಶೆಟ್ಟಿ, ಹಿರಿಯ ಸಾಹಿತಿ ಬಿ.ಎಂ. ಹಿರೇಮಠ, ಜಿಲ್ಲಾ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಅಬ್ದುಲ್ ರಹೆಮಾನ ಬಿದರಕುಂದಿ, ಬಸವನಬಾಗೇವಾಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಖೇಡದ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ. ನಾವದಗಿ ಅವರು ಭದ್ರಣ್ಣವರ ಅವರ ಜೀವನ, ಸಾಹಿತ್ಯದ ಕುರಿತು ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು. ಭದ್ರಣ್ಣವರ ಕುಟುಂಬದ ಪರವಾಗಿ ಅಳಿಯ ಬೆಂಗಳೂರಿನ ಉದ್ಯಮಿ ಆದಪ್ಪ ನಾಗೂರ, ಮಕ್ಕಳಾದ ಶ್ರೀನಿವಾಸ, ಶಿವಶಂಕರ, ಶಿಕ್ಷಕಿ ಅನ್ನಪೂರ್ಣ, ವಿಮಲಾ ಮಾತನಾಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ, ವೀರಶೈವ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ ಆಲೂರ, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎಸ್.ಬಿ. ಕನ್ನೂರ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಮನೆಯಲ್ಲಿ ಮಹಾಮನೆ ಬಳಗ, ವಚನ ಮತ್ತು ಸಾಂಸ್ಕೃತಿಕ ಪರಿಷತ್ ಸೇರಿ ವಿವಿಧ ಸಾಹಿತ್ಯಿಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಭದ್ರಣ್ಣವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಮಹಾಂತೇಶ ಬಂಗಾರಗುಂಡ ಸ್ವಾಗತಿಸಿದರು. ಬಿಆರ್‌ಪಿ ಸಿದ್ದನಗೌಡ ಬಿಜೂರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.