![Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?](https://www.udayavani.com/wp-content/uploads/2024/12/Priyank-Kharge-415x237.jpg)
ಎರಡು ತಿಂಗಳಲ್ಲಿ ಕೃಷ್ಣಾ ತಾಂತ್ರಿಕ ಸಮಸ್ಯೆ ನಿವಾರಣೆ, ಅಧಿಸೂಚನೆ ಸಾಧ್ಯತೆ: ಬೊಮ್ಮಾಯಿ
Team Udayavani, Apr 26, 2022, 4:13 PM IST
![ಎರಡು ತಿಂಗಳಲ್ಲಿ ಕೃಷ್ಣಾ ತಾಂತ್ರಿಕ ಸಮಸ್ಯೆ ನಿವಾರಣೆ, ಅಧಿಸೂಚನೆ ಸಾಧ್ಯತೆ: ಬೊಮ್ಮಾಯಿ](https://www.udayavani.com/wp-content/uploads/2022/04/bommai-35-620x342.jpg)
ವಿಜಯಪುರ: ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಹೊರಬಿದ್ದು ದಶಕವೇ ಕಳೆದಿದೆ. ಕೇಂದ್ರ ಸರ್ಕಾರ ಬರುವ 2-3 ತಿಂಗಳಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅಧಿಸೂಚನೆ ಹೊರಬೀಳುತ್ತಲೇ ಬಜೆಟ್ ನಲ್ಲಿನ ಘೋಷಿತ ಅನುದಾನದ ಹೊರತಾಗಿ ಕೃಷ್ಣಾ ಯೋಜನೆಗೆ ಅಗತ್ಯದ ಅನುದಾನ ಬಿಡುಗಡೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಂಗಳವಾರ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪು ಹೊರ ಬಿದ್ದ ಬಳಿಕದ ಕಾನೂನು ಹೋರಾಟದ ತಾಂತ್ರಿಕ ಸಮಸ್ಯೆ ಇದೀಗ ಹಂತ ಹಂತವಾಗಿ ನಿವಾರಣೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಎರಡು-ಮೂರು ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಸೂಚನೆ ಹೊರ ಬೀಳುತ್ತಲೇ ಬಜೆಟ್ ನಲ್ಲಿ ನೀರಾವರಿ ಕಾರ್ಯಕ್ಕೆ ಘೋಷಿತ ಅನುದಾನ ಹೊರತಾಗಿ ಕೃಷ್ಷಾ ಮೇಲ್ದಂಡೆ ಯೋಜನೆಗೆ ಅಗತ್ಯ ಇರುವ ಪೂರ್ಣ ಅನುದಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಆಲಮಟ್ಟಿ ಬಳಿ ಕೃಷ್ಣಾ ನದಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 524 ಮೀಟರಗೆ ಗೇಟ್ ಅಳವಡಿಸುವ ಕಾರ್ಯ, ಭೂಸ್ವಾಧೀನವಾದ, ಪರಿಹಾರ ವಿತರಣೆ, ಮುಳುಗಡೆ ಆಗಲಿರುವ 20 ಹಳ್ಳಿಗಳ ಪುನರ್ವಸತಿ ಕಾರ್ಯ ಸೇರಿದಂತೆ ಇಡೀ ಯೋಹನೆಗೆ ಅಗತ್ಯ ಇರುವ ಅನುದಾನ ನೀಡುವುದಾಗಿ ಘೋಷಿಸಿದರು. ರಾಜ್ಯದ ಪಾಲಿನ 130 ಟಿಎಂಸಿ ಅಡಿ ನೀರು ಬಳಸಿಕೊಂಡು ರಾಜ್ಯದ ಅನ್ನದಾತರ ಜಮೀನಿಗೆ ನೀರು ಹರಿಸಿ ಭೂದೇವಿಗೆ ಹಸಿರು ಹೊದಿಸುವ ಕಾರ್ಯ ಮಾಡುವಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಲಿದೆ ಎಂದರು.
ಇದನ್ನೂ ಓದಿ:ಹಿಜಾಬ್ ತೀರ್ಪಿನ ವಿರುದ್ಧದ ಮೇಲ್ಮನವಿ ಶೀಘ್ರ ವಿಚಾರಣೆ ನಡೆಸಲು ಸುಪ್ರೀಂ ಸಮ್ಮತಿ
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಷಯದಲ್ಲಿ ಅಖಂಡ ವಿಜಯಪುರ ಜಿಲ್ಲೆಯ ಜನರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಈ ನೆಲದ ಹಿಂದಿನವರು ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದರಿಂದ ರಾಜ್ಯ ನಂದನವನವಾಗಿದೆ. ಹೀಗಾಗಿ ಈ ನೆಲದ ಜನತೆಯ ತ್ಯಾಗ ಸದಾ ಸ್ಮರಣೀಯ ಎಂದರು.
ಆದರೆ ವಿಜಯಪುರ ಜಿಲ್ಲೆ ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು, ಬರದ ನಾಡು ಎಂಬ ಅಪಕೀರ್ತಿಯ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಅಪಕೀರ್ತಿ ತೊಡೆದು ಹಾಕಿ, ಬರದ ನಾಡಿಗೆ ಜಲದ ನಾಡು ಎಂಬ ಅಭಿದಾನ ತಂದುಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲು ಬದ್ಧತೆ ತೋರುತ್ತೇನೆ ಎಂದರು.
ರಾಜ್ಯದಲ್ಲೇ ಕೆರೆಗೆ ತುಂಬುವ ಯೋಜನೆ ಅನುಷ್ಠಾನವನ್ನು 110 ಕೋಟಿ ರೂ. ಅನುದಾನ ನೀಡಿ, ವಿಜಯಪುರ ಜಿಲ್ಲೆಯಿಂದ ಯೋಜನೆ ಆರಂಭಿಸಿದ್ದು ನಾನು. ಆದರೆ ನೀರಾವರಿ ವಿಷಯದಲ್ಲಿ ಕೆಲವರು ಭಗೀರಥ ಎಂದು ಕರೆದುಕೊಳ್ಳುತ್ತಾರೆ. ಯಾರು ಬೇಕಾದರೂ ತಮ್ಮನ್ನು ಭಗೀರಥ ಎಂದು ಕರೆದುಕೊಳ್ಳಲಿ, ನನಗೆ ಭಗೀರಥ ಎಂದು ಕರೆಯುವುದು ಬೇಡ. ನಾಡಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಸಂತೃಪ್ತಿ ನನಗಿದೆ ಎಂದರು.
ಟಾಪ್ ನ್ಯೂಸ್
![Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?](https://www.udayavani.com/wp-content/uploads/2024/12/Priyank-Kharge-415x237.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-150x91.jpg)
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
![23-](https://www.udayavani.com/wp-content/uploads/2024/12/23--150x90.jpg)
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
![22-](https://www.udayavani.com/wp-content/uploads/2024/12/22--150x90.jpg)
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
![State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ](https://www.udayavani.com/wp-content/uploads/2024/12/dam-150x102.jpg)
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
![Government will not turn a blind eye if public is inconvenienced: CM Siddaramaiah](https://www.udayavani.com/wp-content/uploads/2024/12/sidda-3-150x85.jpg)
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.