ಸಾಮಾಜಿಕ ಕಾರ್ಯಕ್ಕೆ ಸಹಕರಿಸಿ
Team Udayavani, Feb 20, 2018, 12:30 PM IST
ಮುದ್ದೇಬಿಹಾಳ: ಪಟ್ಟಣದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಪ್ರಾರಂಭಿಸುವುದಕ್ಕೆ ಪುರಸಭೆ ಅಧೀನದಲ್ಲಿರುವ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಅಥವಾ ಸೂಕ್ತ ನಿವೇಶನ ಒದಗಿಸಿಕೊಟ್ಟು ಸಹಕಾರ ನೀಡಬೇಕು ಎಂದು ಕೋರಿ ಇಲ್ಲಿನ ಹೃದಯ ಫೌಂಡೇಶನ್ ಪದಾಧಿಕಾರಿಗಳು ಸದಸ್ಯರು ಸೋಮವಾರ ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟೆಗೆ ಮನವಿ ಸಲ್ಲಿಸಿದರು.
ವೃದ್ಧಾಶ್ರಮ, ಅನಾಥಾಶ್ರಮ ಸ್ಥಾಪನೆಗೆ ಫೌಂಡೇಶನ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಟ್ಟಣದ ಹಲವೆಡೆ ಇರುವ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ನಿವೇಶನಗಳನ್ನು ಮೀಸಲಿರಿಸಲಾಗಿರುತ್ತದೆ. ಇಂಥ ಸ್ಥಳಗಳಲ್ಲಿ ಉದ್ಯಾನವನಕ್ಕೆ ಹೊಂದಿಕೊಂಡಿರುವ ಅಥವಾ ಪುರಸಭೆ ಮಾಲೀಕತ್ವದಲ್ಲಿರುವ ಖುಲ್ಲಾ ನಿವೇಶನ ಒದಗಿಸಿ ವೃದ್ಧರ, ಅನಾಥರ ರಕ್ಷಣೆ ಮತ್ತು ಸೇವೆಗೆ ಅವಕಾಶ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮುಂದಿನ ದಿನಗಳಲ್ಲಿ ರಕ್ತದಾನ, ನೇತ್ರದಾನ, ಆರೋಗ್ಯ ಉಚಿತ ತಪಾಸಣೆ ಶಿಬಿರ ಸಂಘಟಿಸಿ ಸಮಾಜಕ್ಕೆ ಉಪಯುಕ್ತವಾಗುವ ಯೋಜನೆಗಳನ್ನು ಫೌಂಡೇಶನ್ ಹಮ್ಮಿಕೊಂಡಿದೆ.
ವೃದ್ಧಾಶ್ರಮ, ಅನಾಥಾಶ್ರಮ ಸ್ಥಾಪನೆಯ ಯೋಜನೆ ವಿನೂತನ ಮತ್ತು ಮಹತ್ವದ ಚಿಂತನೆಯಾಗಿದ್ದು ಇದರ ಸಾಕಾರಕ್ಕೆ ಸ್ಥಳಾವಕಾಶ ಅಗತ್ಯವಾಗಿದೆ. ಈಗಾಗಲೇ ಹೃದಯ ಫೌಂಡೇಶನ್ ಪಟ್ಟಣದಲ್ಲಿ ಸ್ವತ್ಛ ಭಾರತ ಚಟುವಟಿಕೆಯಲ್ಲಿ ಪಾಲ್ಗೊಂಡು ಹಲವೆಡೆ ಸ್ವತ್ಛತೆ ಕುರಿತು ಜಾಗೃತಿ ಮೂಡಿಸುವ, ಸರ್ಕಾರಿ ಕಚೇರಿಗಳಲ್ಲಿ
ಸ್ವತ್ಛತೆಯ ಅರಿವು ಮೂಡಿಸಲು ಭಿತ್ತಿಪತ್ರ ಅಳವಡಿಸುವ ಕಾರ್ಯ ಕೈಗೊಂಡು ಜನಮನ್ನಣೆ ಗಳಿಸಿದೆ ಎಂದು ಮನವಿ
ಮೂಲಕ ಗಮನ ಸೆಳೆಯಲಾಗಿದೆ.
ಫೌಂಡೇಶನ್‌ನ ಪ್ರಮುಖರಾದ ಅಶ್ವಿನಿ ಬಾಗೇವಾಡಿ, ಆಶಾ ಹುದ್ದಾರ, ಸಂಗಯ್ಯ ಹಿರೇಮಠ, ಸುದರ್ಶನ ಬಡಿಗೇರ, ಸಂತೋಷ ಕಂಬಾರ, ಪರಶುರಾಮ ಕಾತರಕಿ, ಚೇತನ್ ನಾಗರಳ್ಳಿ, ಸುರೇಶ ಎಂ., ಮಹೇಶ ಚಲವಾದಿ, ರವಿ ಓದಿ, ಜಮೀರ್ ನದಾಫ್, ವಿನೋದ ದೇವರಮನಿ, ಯಾಸೀನ್ ನದಾಫ್, ಸಂಗಮೇಶ ಹವಾಲ್ದಾರ್, ಮುರುಗೇಶ ಯಡವಣ್ಣವರ್, ಸುರೇಶ ದೊಡ್ಡೆಣ್ಣವರ್, ವಿಷ್ಣು ದಾಸರ, ಗುರುನಾಥ ಹತ್ತರಕಿಹಾಳ, ಸಂಗಮೇಶ ಚಲವಾದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧ್ಯಕ್ಷ ಖರ್ಗೆಗೆ ರಾಜಕಾರಣ ಸಾಕು; ಅವರು ಮನೆಯಲ್ಲಿರಲಿ: ಸಂಸದ ಜಿಗಜಿಣಗಿ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Vijayapura: ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ; ಇಬ್ಬರ ಬಂಧನ
Vijayapura: ತಂದೆ ಸಹಿ ನಕಲು ಮಾಡಿದ ಬಿವೈವಿ ಒಪ್ಪಲ್ಲ; ಯತ್ನಾಳ್