ರಾಷ್ಟ್ರೀಯ ಮಹಿಳಾ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಪಘಾತ: 6 ಸೈಕ್ಲಿಸ್ಟ್ ಗಳಿಗೆ ಗಾಯ
Team Udayavani, Feb 10, 2020, 3:03 PM IST
ವಿಜಯಪುರ: ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಮಹಿಳಾ ಸೈಕ್ಲಿಂಗ್ ಕ್ರೀಡಾಕೂಟದ ಮೂರನೇ ದಿನವಾದ ಸೋಮವಾರ ಸ್ಪರ್ಧೆಯಲ್ಲಿ ಸೈಕಲ್ ಗಳ ನಡುವೆ ಢಿಕ್ಕಿಯಾಗಿ ಸಂಭವಿಸಿ 6 ಜನ ಕ್ರೀಡಾಪಟುಗಳು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹಿಟ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಮಾಸ್ ಸ್ಟಾಟ್ 50 ಕಿ.ಮೀ. ಸೈಕ್ಲಿಂಗ್‍ನಲ್ಲಿ ಸ್ಪರ್ಧೆಯ ಹಂತದಲ್ಲಿ ಕ್ರೀಡಾ ಪಟುಗಳು ವೇಗವಾಗಿ ಹೋಗುತ್ತಿದ್ದಾಗ, ಓರ್ವ ಸ್ಪರ್ಧಿಯ ಸೈಕಲ್ ಇನ್ನೋರ್ವ ಸ್ಪರ್ಧಿಯ ಸೈಕಲ್‍ಗೆ ತಾಗಿ, ನಿಯಂತ್ರಣ ಕಳೆದು ಕೆಳಗಿ ಬಿದ್ದಾದ್ದಾರೆ. ನಂತರ ಬಂದ ಸ್ಪರ್ಧಾಳುಗಳು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು.
ಗಾಯಗೊಂಡ 6 ಸ್ಪರ್ಧಾಳುಗಳನ್ನು ಸ್ಥಳೀಯವಾಗಿ ಕರ್ತವ್ಯದಲ್ಲಿದ್ದ ಆಂಬ್ಯುಲೆನ್ಸ್ ನಲ್ಲಿ ತಕ್ಷಣ ಬಿ.ಎಲ್.ಡಿ.ಇ. ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೃಷ್ಟವಶಾತ್ ಯಾವುದೇ ಸ್ಪರ್ಧಿಗೆ ಗಂಭೀರ ಗಾಯಗಳಾಗಿಲ್ಲ, ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಉಪ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ವಾರದ ತಿಳಿಸಿದ್ದಾರೆ.
ರಾಜಸ್ಥಾನ ಬಿಕಾನೇರ ಮಹಾರಾಜಾ ಗಂಜ ವಿಶ್ವವಿದ್ಯಾಲಯದ ಮುಸ್ಕಾನ್ ಹಾಗೂ ಕವಿತಾ, ಬೆಳಗಾವಿ ರಾಣಿ ಚನ್ನಮ್ಮ ವಿವಿಯ ದಾನೇಶ್ವರಿ ಪಾಯಣ್ಣವರ, ಪಂಜಾಬನ ಪಟಿಯಾಲ ವಿವಿಯ ಜಾಸ್ಮೀನ್ ಮತ್ತು ಅಮೃತಸರನ ಗುರುನಾನಕ ದೇವ ವಿವಿಯ ಮುಕುಲಾ, ಹರಿಯಾಣದ ಕುರುಕ್ಷೇತ್ರ ವಿವಿಯ ನಮೃತಾ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನೆ ಬಳಿಕವೂ ಮುಂದುವರೆದ ಸ್ಪರ್ಧೆಯಲ್ಲಿ ಪಂಜಾಬ ಪಟಿಯಾಲಾ ವಿವಿಯ ಬ್ರಿಸ್ಟಿ ಕಂಗಕೊನಾ ಪ್ರಥಮ, ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಸಾವಿತ್ರಿ ಹೆಬ್ಬಾಳಹಟ್ಟಿ ದ್ವಿತೀಯ ಹಾಗೂ ತೃತೀಯ ಮುಂಬೈನ ನಿತಿಬಾಯಿ ದಾಮೋದರ್ ಠಾಕರ್ಸಿ ವಿವಿಯ ರಂಜಿತಾ ಘೋರ್ಪಡೆ ತೃತೀಯ ಸ್ಥಾನ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.