ದೊರೆಸ್ವಾಮಿ ವಿರುದ್ಧ ನನ್ನ ಹೇಳಿಕೆಗೆ ಬದ್ಧ: ಯತ್ನಾಳ
Team Udayavani, Feb 26, 2020, 6:45 PM IST
ವಿಜಯಪುರ : ಕಾಂಗ್ರೆಸ್, ಜೆಡಿಎಸ್ ಮುಖವಾಣಿಯಂತೆ ವರ್ತಿಸುತ್ತಿರುವ ಎಚ್.ಎಸ್. ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಅವರ ನಡವಳಿಕೆ ಏನೆಂದು ಎಲ್ಲರಿಗೂ ಗೊತ್ತು. ಹೀಗಾಗಿ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ, ಹೇಳಿಕೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಲ್ಲದ ವಿಷಯಗಳಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ದೊರೆಸ್ವಾಮಿ, ಪಾಕ್ ಪರ ದೇಶದ್ರೋಹಿ ಘೋಷಣೆ ಕೂಗಿದ ಅಮೂಲ್ಯ ಹಾಗೂ ಇತರೆ ಆರೋಪಿಗಳ ವಿರುದ್ಧ ಈ ವರೆಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಇಂಥವರ ಬೆಂಬಲದಿಂದಲೇ ರಾಜ್ಯದಲ್ಲಿ ದೇಶದ್ರೋಹಿಗಳ ವರ್ತನೆ ಅತಿರೇಕಕ್ಕೆ ಹೋಗುತ್ತಿದೆ ಎಂದು ಹರಿಹಾಯ್ದರು.
ದೊರೆಸ್ವಾಮಿ ವಿರುದ್ಧದ ನನ್ನ ಹೇಳಿಕೆಗೆ ಕಾಂಗ್ರೆಸ್ ಹೋರಾಟಕ್ಕೆ ಇಳಿದಿದೆ. ಇದರಿಂದ ಕಾಂಗ್ರೆಸ್ ಗೆ ಲಾಭವಿಲ್ಲ, ಇದಕ್ಕೆ ಬದಲಾಗಿ ದೇಶ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಹೋರಾಟ ಮಾಡಲಿ. ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ ಎಂದರು.
ಗಾಂಧೀಜಿ ಹೆಸರು ಹೇಳಿಕೊಂಡು, ಗಾಂಧೀಜಿ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್,
ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ಈಡಾದ ಹಿಂದೂಗಳಿಗೆ ಭಾರತದ ಪೌರತ್ವ ನೀಡಬೇಕೆಂದು ಗಾಂಧಿಜಿ ಹೇಳಿದ್ದರು. ಅದನ್ನು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಪಾಲಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಪೌರತ್ವ ಕಾಯ್ದೆ ತಿದ್ದುಪಡಿ ಮೂಲಕ ಗಾಂಧೀಜಿ ಕನಸು ಈಡೇರಿಸಿದೆ ಎಂದರು.
ದೇಶದ ಜನರ ಅನಕ್ಷರಸ್ಥತೆ ಬಂಡವಾಳ ಮಾಡಿಕೊಂಡಿದ್ದ ಕಾಂಗ್ರೆಸ್ ನವರು ಮಹಾತ್ಮ ಗಾಂಧಿ ವಂಶದ ಪೀಳಿಗೆ ಎಂದು ಬಿಂಬಿಸುತ್ತ ಬರುತ್ತಿತ್ತು. ದೇಶದ ಜನರಿಗೆ ಕಾಂಗ್ರೆಸ್ ಇಂದಿನ ಪೀಳಿಗೆ ಬೇರೆ ಎಂದು ಮನವರಿಕೆ ಆಗಿದೆ ಎಂದು ಕುಟುಕಿದರು.
ದೇಶದ ವಿರುದ್ಧ ದ್ರೋಹಿಗಳಿಗೆ ಗುಂಡು ಹೊಡೆಯುವ ಹೇಳಿಕೆಗೆ ನಿನ್ನೆಯಿಂದ ಆರಂಭವಾಗಿದೆ. ಪಾಕಿಸ್ತಾನದ ಪರ ಮಾತನಾಡುವ ಮನಸ್ಸುಗಳಿಗೆ ನೇರವಾಗಿ ಜನ್ನತ್ ಗೆ ಕಳುಹಿಸುವುದಾಗಿ ನಿನ್ನೆ ಹೇಳಿದ್ದೆ. ನಿನ್ನೆಯಿಂದ ದೆಹಲಿಯಲ್ಲಿ ಅದೂ ಕಾರ್ಯಾರಂಭವಾಗಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಜೈಲಿಗೆ ಕಳಿಸಿ ಬಿರಿಯಾನಿ ತಿನ್ನಿಸುವ ಕಾಲ ಮುಗಿಯಿತು. ಇನ್ನೇನಿದ್ದರೂ ಆನ್ ದಿ ಸ್ಪಾಟ್ ಡಿಷಿಶನ್ ಎಂದರು.
ಭಾರತದಲ್ಲಿದ್ದು ಪಾಕ್ ಪರ ಪ್ರೀತಿ ತೊರುವ ಪಾಕ್ ಏಜೆಂಟ್ ದೇಶದ್ರೋಹಿಗಳ ಸೇವೆ ಮಾಡಲು ಜನ್ನತ್ ನಲ್ಲಿರುವ 72 ಕನ್ಯೆಯರು ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಮೇರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಿದ್ದ ಕಾರಣ ಪ್ರಧಾನಿ ಮೋದಿ, ಗೃಹ ಸಚಿವ ಅಮೀತ್ ಶಾ ಸುಮ್ಮನಿದ್ದರು. ಟ್ರಂಪ್ ಸ್ವದೇಶಕ್ಕೆ ಮರಳುತ್ತಲೇ ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಮ್ಮ ಪೊಲೀಸರು ಗೋಲಿಬಾರ್ ನಂಥ ಕಠಿಣ ನಿರ್ಣಯ ಕೈಗೊಳ್ಳದಿದ್ದರೆ ದೆಹಲಿ ಮಾದರಿಯಲ್ಲಿ ಕರ್ನಾಟಕದಲ್ಲೂ ಹಿಂಸಾಚಾರ ತಾರಕಕ್ಕೆ ಏರುತ್ತಿತ್ತು ಎಂದು ಮಂಗಳೂರು ಗೋಲಿಬಾರ್ ಘಟನೆಯನ್ನು ಸಮರ್ಥಿಸಿದರು.
ದೇಶದಲ್ಲಿ ಇಂಥದೊಂದು ಕ್ರಾಂತಿಯ ಅಗತ್ಯವಿತ್ತು. ಇಲ್ಲದಿದ್ದರೆ ಭಾರತ ಹಾಗೂ ಹಿಂದೂಗಳಿಗೆ ಉಳಿಗಾಲ ಇರುತ್ತಿರಲಿಲ್ಲ ಎಂದರು.
ಸಂವಿಧಾನ ಆಧಾರದಲ್ಲೇ ಪೌರತ್ವ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಹೀಗಾಗಿ ಸಂವಿಧಾನಕ್ಕೆ ಗೌರವ ಕೊಡದ
ಸಿಎಎ ವಿರೋಧಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ಹಾಕಲುವ ನೈತಿಕತೆ ಹೊಂದಿಲ್ಲ ಎಂದರು.
ದೆಹಲಿಯಲ್ಲಿ ಸಿಎಎ ಪ್ರತಿಭಟನೆ ವಿಷಯದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಯಡಿಯೂರಪ್ಪ ಅವರನ್ನು ಪ್ರಧಾನಿ ಮೋದಿ, ಪಕ್ಷದ ವರಿಷ್ಠರಾಗಿದ್ದ ಅಮಿತ್ ಶಾ ಮುಖ್ಯಮಂತ್ರಿ ಮಾಡಿದ್ದಾರೆ.
ನಾವು ಯಾರೂ ಯಡಿಯೂರಪ್ಪ ಅವರ ವಿರೋಧಿಗಳಲ್ಲ, ಅವರು ಅಧಿಕಾರದಲ್ಲಿ ಇರಬೇಕು ಎನ್ನುವವರೇ ಎಂದರು.
ಯಡಿಯೂರಪ್ಪ ಬಳಿಕ ಯಾರು ಉತ್ತರಾಧಿಕಾರಿ ಎಂದು ಪಕ್ಷ ನಿರ್ಣಯಿಸುತ್ತದೆ. ಮುಂದಿನ ಆಧಿಕಾರಾವಧಿ ಅವರೇ ಸಿಎಂ ಆಗಿರ್ತಾರೆ. ನನ್ನೆ ಹಾಗೆ ನೇರವಾಗಿ ಮಾತನಾಡಬೇಕು.
ತಾಕತ್ತಿದ್ದರೆ ಓಪನ್ ಆಗಿ ಹೇಳಬೇಕು, ಭಿತ್ತಿಪತ್ರ ಪ್ರಿಂಟ್ ಮಾಡಿಸಿ ಮಾನಹಾನಿ, ಚಾರಿತ್ರ್ಯ ವಧೆ ಮಾಡುವ ಕ್ರಮ ಒಳ್ಳೆದಲ್ಲ. ರಾಜಕೀಯದಲ್ಲಿ ಕಾಲು ಎಳೆಯುವವರು ಇರ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲವರು ಹಗಲುರಾತ್ರಿ ಓಡಾಡಿದವರೂ ಸಾಧ್ಯವಾಗಲಿಲ್ಲ ಎಂದು ತಮ್ಮ ವಿರೋಧಿಗಳಿಗೆ ಚಾಟಿ ಬೀಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.