ಕೌಟುಂಬಿಕ ಕಲಹ : ಒಂದೇ ಕುಟುಂಬದ ಮೂವರು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ
Team Udayavani, Feb 27, 2020, 9:58 PM IST
ವಿಜಯಪುರ : ಕೌಟುಂಬಿಕ ಕಲಹದ ಕಾರಣಕ್ಕೆ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಲ್ಲಿ ಅನಾಮಧೇಯ ಶವಗಳನ್ನು ಗುರುತು ಪತ್ತೆಯಾಗಿದೆ.
ಮೂವರೂ ವಿಜಯಪುರ ನಿವಾಸಿಯಾದ ಒಂದೇ ಕುಟುಂಬದ ತಾಯಿ-ಮಕ್ಕಳು ಎಂಬುದು ಪತ್ತೆಯಾಗಿದೆ.
ಫೆ.25 ರಂದು ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಅನಾಮಧೇಯವಾಗಿ ಪತ್ತೆಯಾಗಿದ್ದ ಮೂವರ ಶವಗಗಳ ಗುರುತು ಪತ್ತೆಯಾಗಿದೆ. ವಿಜಯಪುರ ನಗರದ ನಿವಾಸಿ ಅಶೋಕ ಹವಾಲ್ದಾರ ಅವರ ಪತ್ನಿ 45 ವರ್ಷದ ರೇಣುಕಾ, ಮಕ್ಕಳಾದ 23 ವರ್ಷದ ಐಶ್ವರ್ಯ ಹಾಗೂ 18 ವರ್ಷದ ಮಗ ಅಖಿಲೇಶ ಎಂದು ಗುರುತಿಸಲಾಗಿದೆ.
ರೇಣುಕಾ ಅವರು ತಮ್ಮ ಅಕ್ಕನ ಮಗಳು ದೀಪಾ ಎಂಬವರ ವಿಜಯಪುರ ನಗರದ ಮನೆಯಲ್ಲಿ ವಾಸವಿದ್ದು, ಹೆತ್ತವರನ್ನು ಕಳೆದುಕೊಂಡಿದ್ದ ತನ್ನನ್ನು ಸಾಕಿ ಸಲಹಿದ ತಮ್ಮನ್ನು ದೀಪಾ ಮನೆಯಿಂದ ಹೊರ ಹೋಗಿ ಎಂದು ಹೇಳಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅತ್ಮಹತ್ಯೆಗೆ ಶರಣರಾಗಿದ್ದಾರೆ.
ಈ ಮೂವರು ಫೆ.25 ರಂದು ತಮ್ಮ ಮನೆಯಿಂದ ಕಾಣೆಯಾಗಿದ್ದ ಈ ಮೂವರ ಕುರಿತು ವಿಜಯಪುರ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಈ ಮೂವರನ್ನು ಹುಡುಕುತ್ತಿರುವಾಗಲೇ ಕೊಲ್ಹಾರ ಬಳಿ ನದಿಯಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ.
ಮೃತ ರೇಣುಕಾ ಅವರ ಪತಿ ಅಶೋಕ ಹವಾಲ್ದಾರ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ತಮ್ಮ ಅಣ್ಣ ನಾರಾಯಣರಾವ, ಅತ್ತಿಗೆ ಉಷಾ ಇವರು ಅನಾರೋಗ್ಯದ ಕಾರಣ ಕಳೆದ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಪರಿಣಾಮ ಅಣ್ಣ-ಅತ್ತಿಗೆಯ ಮಗಳಾಗಿದ್ದ ದೀಪಾ ಸಣ್ಣವಳಿದ್ದ ಕಾರಣ ಆಕೆಯ ಆರೈಕೆಗಾಗಿ ತಮ್ಮ ಊರು ಮುಧೋಳ ತೊರೆದು ವಿಜಯಪುರಕ್ಕೆ ಆಗಮಿಸಿ ನೆಲೆಸಿದ್ದರು. ತಂದೆ ಮೃತರಾದ ಕಾರಣ ದೀಪಾ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ದೊರಕಿದ್ದು, ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದೀಪಾ ವಿವಾಹದ ನಂತರ ರೇಣುಕಾ-ಅಶೋಕ ದಂಪತಿ ಮುಧೋಳಕ್ಕೆ ಹೋಗಲು ನಿರ್ಧರಿಸಿದ್ದರು.
ಆದರೆ ಈಚೆಗೆ ದೀಪಾ ಹಾಗೂ ರೇಣುಕಾ ಅವರೊಂದಿಗೆ ಕೌಟುಂಬಿಕವಾಗಿ ಕಲಹ ಉಂಟಾಗಿದ್ದ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗಿ ಎಂದು ದೀಪಾ ಹೇಳಿದ್ದಳು. ಇದರಿಂದ ನೊಂದು ಈ ಮೂವರು ಮನೆಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಅದರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಐಶ್ವರ್ಯ ಬರೆದಿರುವ ಪತ್ರ ಮೃತರ ಮನೆಯಲ್ಲಿ ಸಿಕ್ಕಿದೆ. ತಮ್ಮ ಮರಣಕ್ಕೆ ತಮ್ಮ ಪರಿವಾರದವರಾಗಲಿ ಅಥವಾ ಸಂಬಂಧಿಕರಾಗಲಿ ಯಾರೂ ಕಾರಣಿಕರ್ತರಲ್ಲ, ತಮ್ಮ ಮರಣಕ್ಕೆ ತಾವೇ ಕಾರಣ ಎಂದು ಬರೆದಿದ್ದಾರೆ.
ಈ ಕುರಿತು ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.