ಪಾರಂಪರಿಕ ಕಸಬು ಮೇಲೆ ಕಂಪನಿಗಳ ಕಣ್ಣು
Team Udayavani, Feb 23, 2018, 2:37 PM IST
ವಿಜಯಪುರ: ಭಾರತೀಯ ಗ್ರಾಮೀಣ ಪಾರಂಪರಿಕ ಕಸಬುಗಳ ಮೇಲೆ ಇದೀಗ ಶ್ರೀಮಂತ ಉದ್ಯಮಿಗಳು ಹಾಗೂ ಬಹುರಾಷ್ಟ್ರೀಯ ಕಂಪನಗಳ ಕಣ್ಣು ಬಿದ್ದಿದೆ. ಅದರಂತೆ ಕುರಿ ಸಾಕಾಣಿಯಲ್ಲಿರುವ ಅಧಿಕ ಲಾಭದ ಉದ್ದೇಶದಿಂದ ಇದೀಗ ಕುರುಬ ಸಮುದಾಯದ ಪಾರಂಪರಿಕ ಉದ್ಯೋಗದತ್ತಲೂ ಚಿತ್ತ ನೆಟ್ಟಿದ್ದು, ಕುರುಬ ಸಮುದಾಯ ಎಚ್ಚರಗೊಳ್ಳಬೇಕು ಎಂದು ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ ಪಂಡಿತರಾವ ಚಿದ್ರಿ ಹೇಳಿದರು.
ಬೆಂಗಳೂರಿನ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ, ವಿಜಯಪುರ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಕುರಿ ಸಾಕಾಣಿಕೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಪರಂಪರೆ ಜೀವನ ಕ್ರಮದಲ್ಲಿ ಪ್ರತಿ ಉದ್ಯೋಗ-ಕಸಬು ಕೂಡ ವೃತ್ತಿ ಘನತೆ ಹೊಂದಿವೆ. ಆದರೂ ಕೀಳರಿಮೆ ಹೊಂದಿ ನಮ್ಮ ಪರಂಪರೆಯ ಕಸಬುಗಳಿಂದ ನಾವು ವಿಮುಖರಾಗಿದ್ದೇವೆ. ಆದರೆ ಭಾರತೀಯ ಕಸಬುಗಳಿಂದ ಲಾಭ ಗಳಿಸಲು ಸಾಧ್ಯ ಎಂಬ ಕಾರಣಕ್ಕೆ ಇದೀಗ ನಮ್ಮ ಎಲ್ಲ ಕಸಬುಗಳನ್ನೂ ಆಧುನಿಕ ತಾಂತ್ರಿಕತೆ ಹೆಸರಿನಲ್ಲಿ ಶ್ರೀಮಂತ ಉದ್ಯಮಿಗಳು ನಮ್ಮ ಎಲ್ಲ ಕಸಬುಗಳನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಕುರಿಯ ಗೊಬ್ಬರಕ್ಕೆ ಅಧಿಕ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವ ಸಾವಯವ ಕೃಷಿಯಲ್ಲೂ ಭಾರಿ ಬೇಡಿಕೆ ಇದ್ದು, ಈ ಮೂಲಕವೂ ಕುರಿಗಾರರು ಅಧಿಕ ಲಾಭ ಪಡೆಯಲು ಅವಕಾಶಗಳಿವೆ.
ಮತ್ತೂಂದೆಡೆ ಕುರಿ-ಮೇಕೆಗಳ ಹಾಲಿನಲ್ಲಿ ಹಲವು ರೋಗನಿವಾರಕ ಶಕ್ತಿ ಇದ್ದು, ಒಂದು ಕೆ.ಜಿ. ಮಾಂಸ 4 ರೂ. ಮಾರಾಟವಾದರೆ, ಕುರಿ-ಮೇಕೆಯ ಕೇವಲ ಒಂದು ಲೀಟರ್ ಹಾಲು 700 ರೂ. ಬೆಲೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಕುರಿ-ಮೇಕೆ ಸಾಕಾಣಿಕೆ ಕೇವಲ ಕುರುಬ ಸಮುದಾಯದ ಮೂಲ ಕಸಬಾಗಿ ಉಳಿದಿಲ್ಲ. ದೊಡ್ಡ ದೊಡ್ಡ ರೈತರೂ ಈ ಕುರಿ-ಮೇಕೆ ಸಾಕಾಣಿಕೆಯತ್ತ ಬರುತ್ತಿರುವ ಕಾರಣ ಕುರಿಸಾಕಾಣಿಕೆಯನ್ನೇ ಮೂಲ ಕಸಬು ಮಾಡಿಕೊಂಡಿರುವ ಕುರಿಗಾರರು, ವೈಜ್ಞಾನಿಕ ತಾಂತ್ರಿಕತೆ ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸುವಂತೆ ಕೋರಿದರು.
ಮಹಾ ಮಂಡಳದ ನಿರ್ದೇಶಕ ವೀರಭದ್ರಪ್ಪ ಕರೇಹೊಳಿ, ಡಾ| ಮಾರ್ತಾಂಡಪ್ಪ, ಕುರುಬ ಸಂಘದ ರಾಜು ಕಂಬಾಗಿ, ಕುರಿ ಸಾಕಾಣಿದಾರರ ಸಹಕಾರಿ ಸಂಘದ ಕಾಂತು ಇಂಚಗೇರಿ, ಕಲ್ಲಪ್ಪ ಶಿವಪ್ಪ ಗಡೇದ, ಖಾದಿ ನಿಗಮದ ಉಪ ನಿರ್ದೇಶಕಿ
ಸಾವಿತ್ರಿ ದಳವಾಯಿ, ಕುರಿ-ಉಣ್ಣೆ ನಿಮಗದ ಉಪ ನಿರ್ದೇಶಕ ಡಾ| ಅರಕೇರಿ ಇದ್ದರು. ವಿಜಯಪುರ ಮಂಡಳದ ನಿರ್ದೇಶಕ ಸಂಗಮೇಶ ವಾಲೀಕಾರ ಪ್ರಾಸ್ತಾವಿಕ ಮಾತನಾಡಿದರು. ಕಾಂತು ಇಂಚಗೇರಿ ಸ್ವಾಗತಿಸಿದರು. ಬಿ.ಜಿ.ಬಿರಾದಾರ ನಿರೂಪಿಸಿದರು. ಎಸ್.ಎಸ್. ಹುಡೇದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.