ಬರ ನಿರ್ವಹಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಬಿಜೆಪಿ ತಂಡಗಳಿಂದ ಬರ ಅಧ್ಯಯನ
ನ.6 ರಿಂದ ಮೈಸೂರು ಭಾಗದಲ್ಲಿ ನನ್ನ ಪ್ರವಾಸ : ಯತ್ನಾಳ
Team Udayavani, Nov 1, 2023, 5:25 PM IST
ವಿಜಯಪುರ : ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದ್ದರೂ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಬಿಜೆಪಿ ರಾಜ್ಯದ ಬರ ಅಧ್ಯಯನಕ್ಕೆ ತಂಡಗಳನ್ನು ರಚಿಸಿದ್ದು, ಮೈಸೂರು ಭಾಗಕ್ಕೆ ನಾನು ನ.6 ಹಾಗೂ 7 ರಂದು ಪ್ರವಾಸ ಮಾಡಲಿದ್ದೇನೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬುಧವಾರ ನರಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಯವ ಘಳಿಗೆಯಲ್ಲಿ ಅಧಿಕಾರಕ್ಕೆ ಬಂತೋ ಏನೋ, ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ರೈತರಿಗೆ ಬೆಳ ಹಾನಿ ಪರಿಹಾರ ನೀಡುತ್ತಿಲ್ಲ, ಪಂಪ್‍ಸೆಟ್‍ಗಳಿಗೆ ಸೂಕ್ತ ವಿದ್ಯುತ್ ನೀಡುತ್ತಿಲ್ಲ, ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲದ ದುಸ್ಥಿತಿ ಎದುರಾಗಿದೆ. ಇಷ್ಟಾದರೂ ಪರಿಸ್ಥಿತಿ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲೌಆಗಿರುವ ಕಾರಣ ಬಜೆಪಿ ರಾಜ್ಯದಲ್ಲಿನ ಬರ ಆಧ್ಯಯನಕ್ಕೆ ಮುಂದಾಗಿದೆ. ಅಧ್ಯಯನದ ವರದಿಯನ್ನು ವಿಧಾನಮಂಡಲದ ಬರುವ ಆಧಿವೇಶನದಲ್ಲಿ ತೆರೆದಿಡಲಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.