Congress ಶಾಸಕ ಕಾಶಪ್ಪನವರ ಪತ್ನಿ ವೀಣಾ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Team Udayavani, Nov 20, 2023, 8:03 PM IST
ವಿಜಯಪುರ : ಬಾಗಲಕೋಟೆ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರು ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಗರದಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುನಗುಂದ ಶಾಸಕ ವಿಜಯಯಾನಂದ ಕಾಶಪ್ಪನವರ ಪತ್ನಿಯಾಗಿರುವ ವೀಣಾ ಕಾಶಪ್ಪನವರ ವಿಜಯಪುರ ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50 ಮಾರ್ಗವಾಗಿ ಸಿಂದಗಿ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಪಾಸ್ ಬಳಿ ಅಪಘಾತ ಸಂಭವಿಸಿದ್ದು, ಎದೆಗೆ ಪೆಟ್ಟು ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ಬಳಿಕ ಸ್ಥಳದಲ್ಲಿಯೇ ಕಾರು ಬಿಟ್ಟು, ಕೂಡಲೇ ನಗರದ ಹೆದ್ದಾರಿ ಬಳಿಯೆ ಇರುವ ಜ್ಞಾನಯೋಗಿ ಶ್ರೀಸಿದ್ಧೇಶ್ವರ ಆಸ್ಪತ್ರೆಗೆ ದಾಖಲಾದ ವೀಣಾ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ವೀಣಾ ಅವರು ಪ್ರಯಾಣಿಸುತ್ತಿ ಕಾರಿಗೆ ದ್ವಿಚಕ್ರ ವಾಹನ ಸವಾರನೊಬ್ಬ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ವೀಣಾ ಅವರು ಚಲಿಸುತ್ತಿದ್ದ ಕಾರಿನ ಚಾಲನೆ ಪಕ್ಕಕ್ಕೆ ಕಾರು ಚಲಾಯಿಸಿದ್ದಾನೆ. ಇದರಿಂದ ರಸ್ತೆಯ ಬದಿಗೆ ಬಂದಾಗ ಸಂಭವಿಸಿದ ಅಪಘಾತದ ರಭಸದಲ್ಲಿ ವೀಣಾ ಅವರಿಗೆ ಗಾಯಗಳಾಗಿವೆ.
ವಿಷಯ ತಿಳಿಯುತ್ತಲೇ ವೀಣಾ ಅವರ ಪತಿ ಶಾಸಕ ವಿಜಯಾನಂದ ವಿಜಯಪುರಕ್ಕೆ ಧಾವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.