ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ “ಕೈ’ ಪ್ರತಿಭಟನೆ
Team Udayavani, Nov 20, 2020, 3:34 PM IST
ವಿಜಯಪುರ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ಇಳಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಡಿ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಹಾಸಿಂಪೀರ ವಾಲಿಕಾರ ಮಾತನಾಡಿ, ರಾಜ್ಯದ ಜನ ಆರ್ಥಿಕ ವಿಷಮ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ಹೆಚ್ಚಿನಹಣಕಾಸು ಹೊಂದಿಸಲಾರದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ಬೆಲೆ ಏರಿಕೆ ಮಾಡಿ ಸಮರ್ಥನೀಯವಲ್ಲದ ಅಮಾನವೀಯ ಕೆಲಸಕ್ಕೆ ಮುಂದಾಗಿದೆ. ಹೀಗಾಗಿ ರಾಜ್ಯಪಾಲರು ಕೂಡಲೇ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ಆದೇಶ ರದ್ದು ಮಾಡಬೇಕೆಂದು ಹರಿಹಾಯ್ದರು.
ಜನರು ಕೋವಿಡ್ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಜನರ ಜೊತೆ ಸಹಾನುಭೂತಿಯಿಂದ ವರ್ತಿಸಬೇಕು. ವಿಷಮ ಪರಿಸ್ಥಿತಿಗಳಲ್ಲಿ ಜನತೆಗೆ ನೀಡುವ ಸೇವೆಯಲ್ಲಿ ರಿಯಾಯ್ತಿ ನೀಡಿನೆರವಿಗೆ ಧಾವಿಸಬೇಕಿರುವುದು ಜನಪರ ಸರ್ಕಾರದ ಆದ್ಯತೆ. ಆದರೆ ಇಂಥ ರಾಜಧರ್ಮ ಬದಿಗೊತ್ತಿ, ರಿಯಾಯಿತಿ ನೀಡಬೇಕಾದ ಸರ್ಕಾರವೇ ಈಗ ವಿದ್ಯುತ್ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹೇರಿದೆ. ರಾಜ್ಯದ ಜನರಿಗೆ ದೀಪಾವಳಿ ಹಾಗೂ ರಾಜ್ಯೋತ್ಸವದ ಕೊಡುಗೆಯಾಗಿ ನ.1ರಿಂದಲೇ ವಿದ್ಯುತ್ ಪರಿಷ್ಕೃತ ದರಕ್ಕೆ ಆದೇಶಿಸಿದೆ. ಇದರಲ್ಲಿ ಸರಾಸರಿ ಶೇ.5.4ರಂತೆ ಅಂದರೆ ಪ್ರತಿ ಯೂನಿಟ್‌ಗೆ 40 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು. ಇದನ್ನು ಮರೆತು ಆಡಳಿತ ನಡೆಸುತ್ತಿರುವ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿದ್ಯುತ್ ದರ ಏರಿಕೆ ವಿರೋಧಿ ಸುತ್ತದೆ. ರಾಜ್ಯದ ರಾಜ್ಯಪಾಲರು ಕೂಡಲೇ ತಮಗೆ ಸಂವಿಧಾನದತ್ತವಾಗಿ ಇರುವ ಅಧಿಕಾರ ಬಳಸಿ ವಿದ್ಯುತ್ ದರ ಏರಿಕೆ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಅಬ್ದುಲ್ ಹಮೀದ ಮುರ್ಶಿಫ್, ಎಂ.ಎಂ. ಸುತಾರ, ಜೋತಿರಾಮ ಪವಾರ, ಆಜಾದ ಪಟೇಲ, ರಾಜು ಆಲಗೂರು ಮಾತನಾಡಿದರು. ಈ ವೇಳೆ ಚಾಂದಸಾಬ ಗಡಗಲಾವ, ವಿಶ್ವನಾಥ ಮಠ, ಮಹ್ಮಮದ ರಫೀಕ ಠಪಾಲ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪುರ, ಅಬ್ದುಲ ಖಾದರ, ಖಾಮ, ಜಮೀರ ಅಹ್ಮದ ಬಾಗಲಕೋಟ, ಉಸ್ಮಾನ ಪಟೇಲ, ಖಾನವಾಲೆ, ಸಾಹೇಬಗೌಡ ಬಿರಾದಾ, ಬಾಳನಗೌಡ ಪಾಟೀಲ, ಪೀರಪ್ಪ ನಡುವಿನಮನಿ, ಎಸ್.ದುಂಡಸಿ, ಶಬ್ಬಿರ ಜಾಗಿರದಾರ, ವಸಂತಹೊನಮೊಡೆ, ಐ.ಎಂ. ಇಂಡಿಕರ, ಪಿ.ಎಚ್. ಕಲಾಲ, ಸುರೇಶ ಗೊಣಸಗಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.