ಸಂವಿಧಾನ ಬದಲಾವಣೆ ಮಾತು ಅಸಾಧ್ಯ
Team Udayavani, Jan 9, 2018, 2:23 PM IST
ಸಿಂದಗಿ: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವುದು ಮೂರ್ಖತನದ ಪರಮಾವಧಿ. ಯಾವ ಪಕ್ಷದಿಂದ ಮತ್ತು ಯಾವ ಸರಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು.
ಸೋಮವಾರ ಪಟ್ಟಣದ ದಿಕ್ಷಾ ಭೂಮಿಯಲ್ಲಿ 1.37 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಒಂದು ವೇಳೆ ಸಂವಿಧಾನದಲ್ಲಿ ಬದಲಾವಣೆ ಪರ್ವ ಕಂಡರೇ ದೇಶದ ತುಂಬಾ ಕ್ರಾಂತಿಯಾಗುತ್ತದೆ ಎಂದರು.
ಡಾ| ಅಂಬೇಡ್ಕರ್ ಆವರ ತತ್ವಗಳನ್ನು ಈ ಜಗತ್ತು ಒಪ್ಪಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಭಾರತೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲು ಬಾರಿಗೆ ನೀಡಿದವರು ಡಾ| ಅಂಬೇಡ್ಕರ್. ಭಾರತದ ಭವಿಷ್ಯ ಬದಲಾಯಿಸಲು ವಿವಿಧ ದೇಶದ ಸಂವಿಧಾನ ಅಧ್ಯಯನ ಮಾಡಿ ವಿಶಿಷ್ಟ ಮತ್ತು ಸೃಜನಾತ್ಮಕ ಸಂವಿಧಾನ ನೀಡುವಲ್ಲಿ ಅವರ ಕೊಡುಗೆ ಅಪಾರ ಎಂದರು.
ಮಹಿಳಾಪರ ಕಾನೂನನ್ನು ರೂಪಿಸಿ ಕಾರ್ಮಿಕರಿಗೆ ವಿವಿಧ ಭತ್ಯೆ ಮತ್ತು ಯೋಜನೆಗಳನ್ನು ರೂಪಿಸುವಲ್ಲಿ ಅಂಬೇಡ್ಕರ್
ಅವರು ಮಾಡಿರುವ ಪ್ರಯತ್ನ ಅವಿಸ್ಮರಣೀಯ. ಬ್ರಿಟಿಷ್ ಸರ್ಕಾರ ದಲಿತರಿಗೆ ಒಂದು ರಾಷ್ಟ್ರ ನೀಡುವ ಕಲ್ಪನೆಯಲ್ಲಿತ್ತು. ಆದರೆ ಅಂಬೇಡ್ಕರ್ ಅವರು ಅದನ್ನು ಅಲ್ಲಗಳೆದು ದಲಿತರು ಕಾಶ್ಮಿರದಿಂದ ಕನ್ಯಾಕುಮಾರಿವರೆಗೆ ಇದ್ದಾರೆ.
ಅವರೆಲ್ಲರೂ ಭಾರತೀಯರೇ, ಹೀಗಾಗಿ ದಲಿತ ರಾಷ್ಟ್ರಕ್ಕೆ ಅಂಬೇಡ್ಕರ್ ಧಿಕ್ಕಾರ ಹೇಳಿ ದೇಶಪ್ರೇಮ ಮೆರೆದಿದ್ದಾರೆ. ಇಂಥಹ ಭವ್ಯ ಶಕ್ತಿಯನ್ನು ಆಗಿನ ಕಾಂಗ್ರೆಸ್ ಸರಕಾರ ಹೀನಾಯವಾಗಿ ಕಂಡು ಉದ್ದೇಶಪೂರ್ವಕವಾಗಿ ವಿವಿಧ ಚುನಾವಣೆಯಲ್ಲಿ ಸೋಲಿಸಿ ಅಂತ್ಯಸಂಸ್ಕಾರಕ್ಕೂ ಮಾನ್ಯತೆ ಮಾಡದೇ ಕನಿಷ್ಠವಾಗಿ ಕಂಡಿದ್ದು ವಿಷಾದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಡಾ| ಅಂಬೇಡ್ಕರ್ ಭವನ ಪಟ್ಟಣದಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಖುಷಿ ತಂದಿದೆ. ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಲ್ಲಿ ಡಾ| ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ 82 ಭವನ, 7 ಸೇವಾಲಾಲ್ ಭವನ, 3 ವಾಲ್ಮೀಕಿ ಭವನ ನಿರ್ಮಾಣ ಮಾಡಿದ್ದೇನೆ ಎಂದರು.
ಪಟ್ಟಣದಲ್ಲಿ ಬಾಬು ಜಗಜೀವನರಾಮ ಅವರ ಭವನ ನಿರ್ಮಾಣ ಮಾಡಲು 50 ಲಕ್ಷ ರೂ. ಅನುದಾನ ತಂದು ಒಂದು ವರ್ಷ ಗತಿಸಿದೆ. ನಿವೇಶನ ಸಿಗದ ಕಾರಣ ಭವನ ನಿರ್ಮಾಣವಾಗಿಲ್ಲ. ಭಜಂತ್ರಿ ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು 50 ಲಕ್ಷ ರೂ. ಅನುದಾನ ನೀಡಲಾಗುವುದು. ಭೋವಿ ಸಮುದಾಯದವರು ಮುಂದೆ ಬಂದು ನಿವೇಶನ ನೀಡಿದಲ್ಲಿ ಭೋವಿ ಸಮಾಜ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ದಲಿತರ ಕೆರಿಗಳಿಗೆ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿಸುವ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಿದ್ದೇನೆ. ಅಂಬೇಡ್ಕರ್ ಆವಾಸ್ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿನ ಜೈಭೀಮ ನಗರದಲ್ಲಿನ ನಿವಾಸಿಗಳಿಗೆ ಶೇ. 100ರಷ್ಟು ಮನೆಗಳನ್ನು, ಮದಾರ ಕೆರಿ ನಿವಾಸಿಗಳಿಗೆ ಶೇ. 80ರಷ್ಟು, ಭೋವಿ ಸಮಾಜದವರಿಗೆ ಶೇ. 70ರಷ್ಟು, ಭಜಂತ್ರಿ ಸಮಾಜದವರಿಗೆ ಶೇ. 40ರಷ್ಟು ಹಾಗೂ ಲಂಬಾಣಿ ಸಮಾಜದವರಿಗೆ ಶೇ. 50 ಮನೆ ನೀಡಿದ್ದೇನೆ ಎಂದರು.
ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡಿದ ಮುಂದಿನ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಭರವಸೆ ನೀಡದ ಶಾಸಕ ರಮೇಶ ಭೂಸನೂರ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂರ್ಭದಲ್ಲಿ ಭವನ ನಿರ್ಮಾಣಕ್ಕೆ ಕಾರಣಿಭೂತರಾದ ಶಾಸಕ ರಮೇಶ ಭೂಸನೂರ ಮತ್ತು ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅವರನ್ನು ದಲಿತ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು. ಜಿಪಂ ಸದಸ್ಯ
ಬಿ.ಆರ್. ಯಂಟಮನ, ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ಪ್ರದೀಪ ಗೌರ, ತಾಪಂ ಸದಸ್ಯರಾದ ಎಂ.ಎನ್.ಕಿರಣರಾಜ, ಲಕ್ಕಪ್ಪ ಬಡಿಗೇರ, ಹಣಮಂತ ಸಂದಿಮನಿ, ಶಿರಸ್ತೆದಾರ ಸುರೇಶ ಮ್ಯಾಗೇರಿ, ಸಮಾಜ ಕಲ್ಯಾಣಾಧಿಕಾರಿ ಗೋಪಿನಾಥ ಮಳಜಿ, ಶ್ರೀಕಾಂತ ಸೋಮಜಾಳ, ಅಶೋಕ ಸುಲ್ಪಿ, ಹುಯೋಗಿ ತಳ್ಳೋಳ್ಳಿ, ಪ್ರಧಾನಿ ಮೂಲಿಮನಿ, ಪರಶುರಾಮ ಕಾಂಬಳೆ, ಚಂದ್ರಕಾಂತ ಸಿಂಗೆ. ಆನಂದ ಮಾಣಸುಣಗಿ, ಗೋಪಿ ಬಡಿಗೇರ, ಮಹೇಶ ಜಾಬನವರ, ಡಾ|ಎಚ್.ವಾಯ್.ಸಿಂಗೇಗೋಳ, ಶಿವಾನಂದ ಆಲಮೇಲ, ಪ್ರವೀಣ ಸುಲ್ಪಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು. ಜಗದೀಶ ಸಿಂಗೆ ನಿರೂಪಿಸಿದರು. ಮಹೇಶ ಪೋತದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.