ಪೊಲೀಸ್ ಇಲಾಖೆಗೆ ಸಹಕರಿಸಿ: ದೊಡ್ಡಿ
Team Udayavani, Nov 22, 2021, 1:13 PM IST
ದೇವರಹಿಪ್ಪರಗಿ: ಜನಸ್ನೇಹಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡುವುದರ ಮೂಲಕ ಜನಸಾಮಾನ್ಯರು ತಮ್ಮ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು.
ಪಟ್ಟಣದಲ್ಲಿ ನಡೆದ ವಿಜಯಪುರ ಜಿಲ್ಲಾ ಪೊಲೀಸ್ ಇಂಡಿ ಉಪ ವಿಭಾಗದ ದೇವರಹಿಪ್ಪರಗಿ ಪೊಲೀಸ್ ಠಾಣೆ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ. ಈಗಾಗಲೇ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಲಾಗಿದೆ. ಪಟ್ಟಣದಲ್ಲಿ ತಲೆದೋರಿರುವ ಟ್ರಾಫಿಕ್ ಸಮಸ್ಯೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಸೈ ರವಿ ಯಡವಣ್ಣವರ ಮಾತನಾಡಿ, ಸಾರ್ವಜನಿಕರು ಸುವ್ಯವಸ್ಥೆಗೆ ಧಕ್ಕೆ ತರುವಂತ ಘಟನೆ, ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಮಾಹಿತಿದಾರರ ಹೆಸರು ಬಹಿರಂಗಪಡಿಸದೇ ಘಟನೆ ಹಾಗೂ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂಬೇಡ್ಕರ್ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಸಾರ್ವಜನಿಕರ ಪರವಾಗಿ ಗುರುರಾಜ್ ಆಕಳವಾಡಿ, ರಾಜಕುಮಾರ ಸಿಂದಗೇರಿ, ಶರಣು ನಾಟೀಕಾರ, ರಾವುತ್ ತಳಕೇರಿ, ಸುಭಾಷ್ ಕೊಂಡಗೂಳಿ ಮಾತನಾಡಿದರು. ಪಿಎಸೈ ಎಸ್.ಬಿ. ನಡುವಿನಕೇರಿ, ಶ್ರೀಧರ ನಾಡಗೌಡ, ಗಂಗಾಧರ ಬಬಲೇಶ್ವರ, ರಾಜು ಮೆಟಗಾರ, ಪ್ರಕಾಶ ಗುಡಿಮನಿ, ಮುನೀರ್ ಅಹ್ಮದ್ ಬಿಜಾಪುರ, ಎ.ಡಿ. ಮುಲ್ಲಾ, ಕಾಶೀನಾಥ ಜಮಾದಾರ, ರಾಘವೇಂದ್ರ ಗುಡಿಮನಿ, ರಾವುತ್ ಹೊನ್ನುಟಗಿ, ಸುಭಾಸ್ ಚಂದ್ರ ಹೊನ್ನಕಂಠಿ, ಶಿವು ದಲ್ಲಾಳಿ, ತಿಪ್ಪಣ್ಣ ಮೇಲಿನಮನಿ, ಸುಭಾಷ್ ಹೊಸಟ್ಟಿ, ಪ್ರಭು ಅಂಬಲಗಿ, ರಾಘವೇಂದ್ರ ತಳವಾರ, ಅಶೋಕ ಖಾದ್ರಿ, ಮಹಮ್ಮದ್ ಮಂಡೆ, ಗೋಪಿಚಂದ್ ನಾಯಿಕ್, ನಾಸೀರ್ ಬೇಪಾರಿ, ಅರುಣ ಮಠ, ಶಿವು ಕವಲಗಿ, ಸಂಜು ರಾಠೊಡ ಸೇರಿದಂತೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.