ಗ್ರಾಮಾಭಿವೃದ್ಧಿಗೆ ಸಹಕಾರ ಮುಖ್ಯ
Team Udayavani, Oct 11, 2020, 7:00 PM IST
ಹೂವಿನಹಿಪ್ಪರಗಿ: ಗ್ರಾಮೀಣ ಪ್ರದೇಶಗಳ ಸವರತೋಮುಖ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್ ಧುರೀಣ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ನವೀಕರಿಸಲ್ಪಟ್ಟ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನ ಚಾಲನೆ ಮತ್ತು ಪರಿಕರಣಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಸ್ಥರ ಸಹಕಾರದಿಂದ ಕುದರಿ ಸಾಲವಾಡಗಿ ಪಂಚಾಯತ್ ಸತತವಾಗಿ ಎರಡು ಬಾರಿ ಗಾಂ ಧಿ ಗ್ರಾಮ ಪುರಸ್ಕೃತಗೊಂಡಿದ್ದು ಹೆಮ್ಮೆ ಸಂಗತಿಯಾಗಿದೆ. ಸರಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡುವ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಇಚ್ಛಾಶಕ್ತಿ ಪ್ರಮುಖವಾಗಿರುತ್ತದೆ. ಇದಕ್ಕೆಲ್ಲ ಪೂರಕವೆಂಬಂತೆ ಕುದರಿ ಸಾಲವಾಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗ ಶಿಸ್ತಿನಿಂದ ಕಾರ್ಯ ನಿರ್ವಹಿಸುವ ಮೂಲಕ ಇತರ ಪಂಚಾಯತ್ ಅಧಿ ಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಇಂದು ಪಂಚಾಯತ್‌ನಿಂದ ಘನತ್ಯಾಜ್ಯ ಸಂಗ್ರಹಿಸಲು ಬಿಪಿಎಲ್ ಕಾರ್ಡ್ ಹೊಂದಿದ ಹಾಗೂ ಬಡವರಿಗೆ ಎರಡು ಬಕೆಟ್ ನೀಡುತ್ತಿದ್ದಾರೆ. ಒಂದರಲ್ಲಿ ಹಸಿ ಕಸ ಇನ್ನೊಂದರಲ್ಲಿ ಒಣ ಕಸ ಹಾಕಬೇಕು. ಬೆಳಗ್ಗೆ ಘನತ್ಯಾಜ್ಯ ವಿಲೇವಾರಿ ವಾಹನ ನಿಮ್ಮ ಮನೆ ಮುಂದೆ ಬರುತ್ತದೆ. ನೀವು ಸಂಗ್ರಹಿಸಿದ ಕಸವನ್ನು ವಾಹನಕ್ಕೆ ಹಾಕುವ ಮೂಲಕ ಗ್ರಾಮದ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ಎರಡು ಬಾರಿ ಸತತವಾಗಿ ಗಾಂಧಿ ಪುರಸ್ಕಾರ ಮೂಲಕ ಕುದರಿ ಸಾಲವಾಡಗಿ ಪಂಚಾಯತ್ ತಾಲೂಕಿನಲ್ಲಿಯೇ ಮಾದರಿಯಾಗಿ ಹೊರ ಹೊಮ್ಮಿದೆ. ಗ್ರಾಮದ ಅಭಿವೃದ್ಧಿಗೆ ಪಂಚಾಯತ್ ಅಧಿ ಕಾರಿಗಳೊಂದಿಗೆ ಗ್ರಾಮಸ್ಥರು ಕೈ ಜೋಡಿಸಬೇಕು. ಕೊವೀಡ್-19 ಹೊಡೆದೊಡಿಸುವಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವದ ಹಂಗುತೊರೆದು ಹೋರಾಡುತ್ತಿದ್ದಾರೆ. ಅಂತಹ ಮಹನೀಯರನ್ನು ಇಲ್ಲಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಅರಣ್ಯಾಧಿಕಾರಿ ಎ.ಎಸ್. ಪಾಕಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಸವರಾಜ ದೇಸಾಯಿ, ಎಸ್.ಬಿ. ಪಾಟೀಲ, ಎ.ಬಿ. ಪಾಟೀಲ, ತಾಪಂ ಸದಸ್ಯ ಜಾಕೀರ್ ಹುಸೇನ್ ಶಿವಣಗಿ, ದೇವಮ್ಮ ಹಚಡದ, ಪಿ.ಎಸ್. ಲಗಳಿ, ಬೆಳ್ಳೆಪ್ಪ ಜಕ್ಕೆನಾಳ, ಭೀಮನಗೌಡ ಹಚಡದ, ಶೇಖರಗೌಡ ಪಾಟೀಲ, ರುದ್ರಗೌಡ ಹಚಡದ, ಗುರುನಗೌಡ ಪಾಟೀಲ, ಪಿಡಿಒ ಬಿ.ಎಸ್.ಬಡಿಗೇರ ವೇದಿಕೆಯಲ್ಲಿದ್ದರು. ಪಂಚಾಯತ್ ಕಾರ್ಯದರ್ಶಿ ಎನ್.ಶೈಲಜಾ ಸ್ವಾಗತಿಸಿದರು. ಶಿಕ್ಷಕ ಎಸ್.ಬಿ. ಬಾಗೇವಾಡಿ ನಿರೂಪಿಸಿದರು. ಎಂ.ವಿ. ಅಣ್ಣಪ್ಪನವರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.