ಬೆಳಕಿನ ಹಬ್ಬಕ್ಕೆ ಕೋವಿಡ್ ಕರಿನೆರಳು

ಕೆಜಿ ಚೆಂಡು ಹೂವು 100 ರಿಂದ 300ರೂ. ವರೆಗೂ ಮಾರಾಟ

Team Udayavani, Nov 15, 2020, 4:36 PM IST

ಬೆಳಕಿನ ಹಬ್ಬಕ್ಕೆ ಕೋವಿಡ್ ಕರಿನೆರಳು

ಮುದ್ದೇಬಿಹಾಳ: ಕೋವಿಡ್ ಸಂಕಷ್ಟದ ನಡುವೆ ಬಂದಿರುವ ಹಿಂದುಗಳ ದೊಡ್ಡ ಹಬ್ಬ ದೀಪಾವಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜೊತೆಗೆ ಆರ್ಥಿಕ ಸಂಕಷ್ಟ ಬಡವರನ್ನು ಹೈರಾಣು ಮಾಡಿದೆ. ಆದರೆ ಕೋವಿಡ್ ದಿಂದಾದ ಆರ್ಥಿಕ ನಷ್ಟ ಭರ್ತಿ ಮಾಡಿಕೊಳ್ಳಲು ಸಣ್ಣ, ದೊಡ್ಡ ವ್ಯಾಪಾರಸ್ಥರು ತಮ್ಮ ಖಜಾನೆ ತುಂಬಿಕೊಳ್ಳುವ ಧಾವಂತದಲ್ಲಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ದೀಪಾವಳಿ ಬಡವರ ಸಂಭ್ರಮಕ್ಕೆ ತಣ್ಣೀರು ಎರಚಿದ್ದು ಇಲ್ಲೆಲ್ಲ ಎದ್ದು ಕಾಣುತ್ತಿದೆ. ಲಕ್ಷ್ಮೀ ಪೂಜೆಗೆ, ಪಾಡ್ಯಕ್ಕೆ, ಮನೆ ಅಲಂಕರಿಸಲು ಅಗತ್ಯ ಎನ್ನಿಸಿಕೊಂಡಿರುವ ಚೆಂಡು ಹೂವು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಕಳೆದ ವರ್ಷ ಕೆಜಿಗೆ 30-40 ರೂ. ಇದ್ದ ಚೆಂಡು ಹೂವಿನ ದರ ಈ ಬಾರಿ ಕೇಜಿಗೆ ಹೂವಿನ ಗಾತ್ರ, ಗುಣಮಟ್ಟಆಧರಿಸಿ 100 ರಿಂದ 300ವರೆಗೂ ಮಾರಾಟ ಮಾಡಲಾಗುತ್ತಿರುವುದು ಬಡವರಿಗೆ ಹೊರೆ ಎನ್ನಿಸಿಕೊಂಡಿದೆ.

ಈ ಬಾರಿ ಅತಿವೃಷ್ಟಿಯಿಂದಾಗಿ ಬಹಳಷ್ಟು ರೈತರು ಚೆಂಡು ಹೂವನ್ನು ಬೆಳೆದಿಲ್ಲ. ಇದರಿಂದಾಗಿ ಸಹಜವಾಗಿ ಉತ್ಪನ್ನ ಕಡಿಮೆ ಆಗಿರುವುದು ಬೇಡಿಕೆ ಹೆಚ್ಚಲು, ಬೆಲೆ ಏರಲು ಕಾರಣ ಎನ್ನಲಾಗುತ್ತಿದೆ. ರೈತರು ತಮ್ಮ ಹೊಲದಲ್ಲಿ ಬೆಳೆದ ಹೂವನ್ನು ಇಲ್ಲಿನಮಾರುಕಟ್ಟೆಗೆ ತಂದಾಗ ದಲ್ಲಾಳಿಗಳು ಅದನ್ನು ಸವಾಲು ಮಾಡುತ್ತಾರೆ. ಸವಾಲು ಕೂಗುವಾಗಲೇ ದಲ್ಲಾಳಿಗಳು ಬೆಲೆ ಏರಿಸುವುದು, ತಮ್ಮವರಲ್ಲೇ 4-5 ಜನರನ್ನು ಬಿಟ್ಟು ಹೆಚ್ಚಿನ ದರಕ್ಕೆ ಸವಾಲು ಕೂಗುವ ತಂತ್ರಗಾರಿಕೆ ಬಳಸುತ್ತಾರೆ. ಇದರಿಂದಾಗಿ ಕಿರುಕುಳ ಮಾರಾಟಗಾರರು ಅನಿವಾರ್ಯವಾಗಿ ಮೋಸ ಹೋಗಬೇಕಾಗುತ್ತದೆ. ತಾವು ಮೋಸ ಹೋಗಿ ಕಳೆದುಕೊಂಡ ಹಣವನ್ನು ಗ್ರಾಹಕರ ತಲೆಗೆ ಕಟ್ಟಿ ಲಾಭ ಮಾಡಿಕೊಳ್ಳುವ ತರಾತುರಿ ಅವರಲ್ಲಿ ಎದ್ದು ಕಾಣುತ್ತಿದೆ.

ಲಕ್ಷ್ಮೀ ಪೂಜೆಗೆ ಅಗತ್ಯವಾಗಿರುವ ಬಾಳೆ ಕಂಬ, ಕಬ್ಬಿನ ಜಲ್ಲೆ, ವಿವಿಧ ರೀತಿಯ ಹಣ್ಣು, ಕಾಯಿ, ನಿಂಬೆಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆಯಂತು ಗಾಬರಿ ಬೀಳಿಸುವಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದು ಶೇ. 50-60 ಏರಿಕೆಆಗಿರುವುದು ಬಡವರ ದೀಪಾವಳಿಗೆ ಮಂಕು ಕವಿಯುವಂತೆ ಮಾಡಿದೆ.

ಕಾಣದ ಉತ್ಸಾಹ: ಕೋವಿಡ್ ದಿಂದಾಗಿ ಕೆಲಸ ಇಲ್ಲದೆ ಸಂಕಷ್ಟಕ್ಕೀಡಾಗಿರುವ ಬಡ ಮತ್ತುಮಧ್ಯಮವರ್ಗದ ಜನರು ಈ ಬಾರಿ ಖರೀದಿಗೆ ನಿರುತ್ಸಾಹ ತೋರಿರುವುದರಿಂದ ಮಾರುಕಟ್ಟೆಯಲ್ಲಿ ಕಳೆದ ವರ್ಷಗಳಲ್ಲಿ ಕಂಡು ಬರುತ್ತಿದ್ದ ಜನಸಂದಣಿ ಈ ಬಾರಿ ಇಲ್ಲದಾಗಿದೆ. ಈ ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹವೂ ಕಂಡು ಬರುತ್ತಿಲ್ಲ. ಹೇಗೋ ದೀಪಾವಳಿಯನ್ನು ಆಚರಿಸಿದರಾಯಿತು ಎನ್ನುವ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿದೆ. ಪ್ರತಿ ವರ್ಷ ಇಲ್ಲಿನ ಬಸವೇಶ್ವರ ವೃತ್ತದಿಂದ ದ್ಯಾಮವ್ವನಕಟ್ಟೆಯವರೆಗಿನ ಮುಖ್ಯ ರಸ್ತೆ ವ್ಯಾಪಾರಿಗಳು, ಸಾರ್ವಜನಿಕರಿಂದ ತುಂಬಿ ಗಿಜಿಗುಡುತ್ತಿತ್ತು.

ಪೊಲೀಸರು ಟ್ರಾಫಿಕ್‌ ನಿಯಂತ್ರಿಸುವಲ್ಲಿ ಸಾಕಷ್ಟು ಹೆಣಗಾಡುತ್ತಿದ್ದರು. ಆದರೆ ಈ ಬಾರಿಅಂತಹ ಯಾವುದೇ ಗಿಜಿಗಿಜಿ, ಧಾವಂತ ಕಂಡು ಬರದಿರುವುದು ಪೊಲೀಸರ ಟ್ರಾಫಿಕ್‌ ನಿಯಂತ್ರಣದ ತಲೆನೋವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದಂತಾಗಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯ ಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮಾರಾಟದ ಭರಾಟೆ ಎಂದಿನಂತಿದ್ದರೂ ಜನರ ಕೊರತೆ ಅವರ ಮುಖದಲ್ಲೂ ಚಿಂತೆಯ ಗೆರೆಗಳನ್ನು ಮೂಡಿಸಿದ್ದು ಕಂಡು ಬಂತು.

ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ: ಕೋವಿಡ್ ದಿಂದ 3-4 ತಿಂಗಳು ವ್ಯಾಪಾರ ಇಲ್ಲದೆ ಬಟ್ಟೆ ಅಂಗಡಿಯವರು ಕಂಗಾಲಾಗಿದ್ದರು. ಹಬ್ಬದನೆಪದಲ್ಲಾದರೂ ಬಟ್ಟೆ ಖರೀದಿಗೆ ಜನ ಬರುತ್ತಾರೆಎನ್ನುವ ನಿರೀಕ್ಷೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಟ್ಟೆಬರೆ ತರಿಸಿ ಸ್ಟಾಕ್‌ ಇಟ್ಟುಕೊಂಡಿದ್ದರು. ಆದರೆ ಆರ್ಥಿಕ ಹೊಡೆತದಿಂದ ಕಂಗಾಲಾಗಿರುವ ಬಡ, ಮಧ್ಯಮ ವರ್ಗದವರು ಮೊದಲಿನಂತೆ ಬಟ್ಟೆ ಖರೀದಿಸಲು ಈ ಬಾರಿ ಹೆಚ್ಚಿನ ಉತ್ಸಾಹ ತೋರಿಸಿಲ್ಲ. ಹೀಗಾಗಿ ಎಲ್ಲೆಡೆ ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ ಎದ್ದು ಕಾಣುತ್ತಿತ್ತು. ಆದರೂ ಹಬ್ಬ ಆಚರಿಸಲೇಬೇಕು ಎನ್ನುವ ಧಾವಂತದಲ್ಲಿ ದುಡಿಯುವ ವರ್ಗದವರುತಮ್ಮ ಮಕ್ಕಳಿಗೆ ಬಟ್ಟೆ ಕೊಡಿಸಿ ಅವರ ಸಂಭ್ರಮದಲ್ಲಿ ತಮ್ಮ ಸಾರ್ಥಕತೆ ಕಂಡು ಕೊಳ್ಳುತ್ತಿರುವುದು ಅಲ್ಲಲ್ಲಿ ಕಂಡುಬಂತು.

ಮೊದಲೆಲ್ಲ ಖರೀದಿದಾರದಿಂದ ಗಿಜಿಗುಡುತ್ತಿದ್ದ ಬಟ್ಟೆ ಅಂಗಡಿಗಳು ಈ ಬಾರಿ ಮಾತ್ರ ಅಂಥ ಯಾವುದೇ ಒತ್ತಡ ಇಲ್ಲದೆ ವ್ಯಾಪಾರ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದರು. ಹೀಗಾಗಿ ಕೊಳ್ಳುವವರ ಕೊರತೆ ಇದ್ದ ಹಿನ್ನೆಲೆ ಕೊಳ್ಳುವವರ ಮೇಲೆಯೇ ಹೆಚ್ಚಿನ ಬೆಲೆಯ ಭಾರ ಹಾಕಿ ಲಾಭ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಕೆಲ ಅಂಗಡಿಕಾರರು ನೇರವಾಗಿ ಒಪ್ಪಿಕೊಂಡರೂ ಅದನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿತ್ತು.

ವ್ಯಾಪಾರ ಈ ಬಾರಿ ಶೇ. 50ರಷ್ಟು ಕುಸಿತ ಕಂಡಿದೆ. ಜನ ಆರ್ಥಿಕ ಸಂಕಷ್ಟದಿಂದಾಗಿ ಮೊದಲೆಲ್ಲ ಖರ್ಚು ಮಾಡುತ್ತಿದ್ದ ಹಣದಷ್ಟು ಅರ್ಧ ಹಣ ಖರ್ಚಿಗೆ ಮುಂದಾಗಿದ್ದಾರೆ. ಅಂದರೆ ಸಾವಿರ ರೂ. ಬಟ್ಟೆ ಖರೀದಿಸುತ್ತಿದ್ದವರು 500ಕ್ಕೆ ಖರೀದಿ ಸೀಮಿತಗೊಳಿಸಿದ್ದಾರೆ. ಈ ದೀಪಾವಳಿಯಲ್ಲಿ ವ್ಯಾಪಾರಸ್ಥರು ಕೋವಿಡ್ ದಿಂದಾಗಿ ಸಾಕಷ್ಟು ಹೊಡೆತ ಅನುಭವಿಸುವಂತಾಗಿದೆ.  –ಅಶೋಕ ರೇವಡಿ, ಮಾಲೀಕರು, ಅಶೋಕ ಕ್ಲಾಥ್‌ ಸ್ಟೋರ್ಸ್‌, ಮುದ್ದೇಬಿಹಾಳ

ನಿರಂತರ ಮಳೆಯಿಂದಾಗಿ ಚೆಂಡು ಹೂವು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಇದ್ದಷ್ಟೇ ಮಾಲನ್ನು ಮಾರುಕಟ್ಟೆಗೆ ತಂದರೆ ದಲ್ಲಾಲಿಗಳ ಮೂಲಕ ಮಾರಾಟವಾಗಬೇಕು. ದಲ್ಲಾಳಿಗಳು ನಿಗದಿಪಡಿಸುವ ದರವೇ ಅಂತಿಮ. ಹೀಗಾಗಿ ಈ ಬಾರಿ ಹೂವಿನ ಬೆಲೆ ಗಗನಕ್ಕೇರಿದೆ. ನಮಗೂ ಲಾಭ, ದಲ್ಲಾಳಿಗಳಿಗೂ ಲಾಭ. –ಮಲ್ಲಪ್ಪ, ಢವಳಗಿ, ಚೆಂಡು ಹೂವು ಬೆಳೆದ ರೈತ

ಈ ಬಾರಿಯ ದೀಪಾವಳಿ ನಮ್ಮ ಪರಿಸ್ಥಿತಿ ಪರೀಕ್ಷಿಸುವಂತಿದೆ. ನಿತ್ಯ ದುಡಿದು ತಿನ್ನುವ ನಮಗೆ ಎಲ್ಲರಂತೆ ಖರೀದಿಸುವ ಶಕ್ತಿ ಇಲ್ಲ. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವಂತಾಗಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಹಬ್ಬ ಆಚರಿಸಬೇಕು ಎನ್ನುವುದನ್ನು ಅರಿತು ಕಷ್ಟದಲ್ಲೂ ಸಾಲ ಸೂಲ ಮಾಡಿ ಹಬ್ಬ ಆಚರಿಸುತ್ತಿದ್ದೇವೆ.  –ತಿಮ್ಮಪ್ಪ ಬಿರಾದಾರ, ಗೌಂಡಿ ಕೆಲಸ ಮಾಡುವ ಕುಟುಂಬದ ಯಜಮಾನ

 

ಡಿ.ಬಿ. ವಡವಡಗಿ

ಟಾಪ್ ನ್ಯೂಸ್

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.