ಸಾಲ ಮನ್ನಾ ಬದಲು ಉದ್ಯೋಗ ಸೃಷ್ಟಿಸಿ
Team Udayavani, Sep 16, 2018, 2:33 PM IST
ಸಿಂದಗಿ: ಸರಕಾರಗಳು ವಿನಾಕಾರಣ ಸಾಲ ಮನ್ನಾ ರೂಪದಲ್ಲಿ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದರ ಬದಲು ಉದ್ಯೋಗ ಸೃಷ್ಟಿಸಿದರೆ ಸರಕಾರಕ್ಕೆ ಕೈಯೊಡ್ಡುವ ಪರಿಸ್ಥಿತಿ ತಪ್ಪುತ್ತದೆ ಎಂದು ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಮಹಾದೇವಪ್ಪ ಸಿಂದಗಿ ಹೇಳಿದರು.
ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಸಂಘದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಹಕರು ಬ್ಯಾಂಕ್ ಗಳಿಂದ ತೆಗೆದುಕೊಳ್ಳುವ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದ್ದಲ್ಲಿ ಬ್ಯಾಂಕ್‌ಗಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಬ್ಯಾಂಕ್ ಅಧ್ಯಕ್ಷ ಶಿವಾನಂದ ಹಡಪದ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಬ್ಯಾಂಕ್ ಪ್ರಾರಂಭದಲ್ಲಿ ಕೆಲವೇ ಸದಸ್ಯರನ್ನು ಹೊಂದಿ ಇಲ್ಲಿಯವರೆಗೆ 3.55 ಕೋಟಿ ರೂ. ಬಂಡವಾಳದೊಂದಿಗೆ 1320 ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ. ಸರ್ವರ ಸಹಕಾರದಿಂದ ಈ ವರ್ಷ 15.46 ಲಕ್ಷ ರೂ. ನಿವ್ವಳ ಲಾಭ ಪಡೆಯುವುದರೊಂದಿಗೆ ಉತ್ತಮ ಸೇವೆ ಸಲ್ಲಿಸಿ
ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಬ್ಯಾಂಕಿನಲ್ಲಿ ಸದಸ್ಯತ್ವ ಹೊಂದಿದ ವ್ಯಕ್ತಿ ಯಾವುದೇ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಲ್ಲಿ ಮೃತ ಕುಟುಂಬಕ್ಕೆ 1ಲಕ್ಷ ರೂ, ಸಾಮಾನ್ಯವಾಗಿ ಮೃತರಾದರೆ ಆ ಕುಟುಂಬಕ್ಕೆ 5 ಸಾವಿರ ರೂ. ಸಹಾಯಧನ ನೀಡುತ್ತದೆ.
ಈ ವರ್ಷದಿಂದ ಸದಸ್ಯತ್ವ ಹೊಂದಿವರ ಮಕ್ಕಳು ಮೆಟ್ರಿಕ್ ಪರೀಕ್ಷೆಯಲ್ಲಿ ಶೇ. 90 ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡುವ ಯೋಜನೆ ಹೊಂದಲಾಗಿದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಶ್ರೀಶೈಲ ಹಡಪದ, ಆಡಳಿತ ಮಂಡಳಿ ಸದಸ್ಯರಾದ ವೆಂಕಟೇಶ ಶಿಂಧೆ, ಪರಶುರಾಮ ಕಾಶೆ, ಮಂಜುನಾಥ ಹಡಪದ, ಚಿದಾನಂದ ಹಡಪದ, ರಮೇಶ ಸಿಂದಗಿ, ದೇವಕ್ಕಿ ದೇವೂರ, ಸುನೀತಾ ಹಡಪದ, ಶಿವಶರಣ ಸಿಂದಗಿ, ರಾಜು ಕುಮಸಗಿ, ತಾಲೂಕು ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಮಹಾಂತೇಶ ಮೂಲಿಮನಿ, ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ರೇವಣಸಿದ್ದ ಬಮ್ಮನಜೋಗಿ, ಚಂದ್ರಕಾಂತ ಗೊರಗುಂಡಗಿ, ಬಸವರಾಜ ದೇವರಹಿಪ್ಪರಗಿ, ಮಡಿವಾಳ ವಂದಾಲ, ಗುರುಪಾದ ಹಂದಿಗನೂರ, ಬಾಬು ನಾವಿ, ಗುರುಲಿಂಗಪ್ಪ ಹಡಪದ, ಅಂಬಣ್ಣ ಹಿಕ್ಕನಗುತ್ತಿ, ಪರಮಣ್ಣ ಚಾಂದಕವಠೆ ಇತರರು ಇದ್ದರು. ವ್ಯವಸ್ಥಾಪಕ ಎಂ.ಎಂ. ಹಡಪದ ಸ್ವಾಗತಿಸಿ, ನಿರೂಪಿಸಿದರು. ರಾಜು ನಾವಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.