ಅಧಿಕಾರಿಗಳ ಕಾರ್ಯವೈಖರಿಗೆ ಗ್ರಾಹಕರ ಅಸಮಾಧಾನ
Team Udayavani, Feb 23, 2022, 5:28 PM IST
ಇಂಡಿ: ತೋಟದಲ್ಲಿನ ವಿದ್ಯುತ್ ಕಂಬ ಬಾಗಿ ಮೂರು ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಈವರೆಗೂ ಅದನ್ನು ಬದಲಾವಣೆ ಮಾಡಲು ಮುಂದೆ ಬಂದಿಲ್ಲ. ನಾಲ್ಕಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತ ವಜ್ರಕಾಂತ ಧನಶೆಟ್ಟಿ ಆರೋಪಿಸಿದರು.
ಪಟ್ಟಣದ ಹೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ನಡೆದ ತಾಲೂಕಿನ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಹೆಸ್ಕಾಂ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್ ಪರಿವರ್ತಕ ಸುಟ್ಟ 24 ಗಂಟೆಯಲ್ಲಿ ತುಂಬಿ ಕೊಡಬೇಕೆಂದು ಆದೇಶವಿದ್ದರೂ ಸಹಿತ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಹಲವು ರೈತರು ವಿದ್ಯುತ್ ಅದಾಲತ್ ವೇಳೆ ಆರೋಪ ಮಾಡಿದರು.
ಅರ್ಜಿ ಕೊಟ್ಟ ರೈತನ ಕಾರ್ಯವನ್ನು 15 ದಿನದಲ್ಲಿ ಮಾಡದಿದ್ದರೆ ನೇರವಾಗಿ ದೂರು ದಾಖಲಿಸಿ ನಾನು ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿ ಕೆ.ಜಿ. ಹಿರೇಮಠ ತಿಳಿಸಿದರು.
ಹೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಜಿ. ಹಿರೇಮಠ ಅದಾಲತ ಉದ್ದೇಶಿಸಿ ಮಾತನಾಡಿ, ಅಕ್ರಮ ಸಕ್ರಮದಲ್ಲಿ ಟ್ರಾನ್ಸ್‌ಫಾರ್ವರ್ ಕುರಿತು ಅರ್ಜಿ ಸಲ್ಲಿಸಿದವರಿಗೆ ಸರದಿಯ ಮೇಲೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ರೈತರು ಕೃಷಿಗೆ ಹಗಲು ನಾಲ್ಕು ತಾಸು ನಂತರ ರಾತ್ರಿ ಮೂರು ತಾಸು ವಿದ್ಯುತ್ ನೀಡಲು ವಿನಂತಿಸಿಕೊಂಡಾಗ ಈ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸುತ್ತಿದೆ. ಕೆಲವು ದಿನ ಕೆಲವು ಕಡೆ ಹಗಲು ಮೂರು ಗಂಟೆ, ರಾತ್ರಿ ನಾಲ್ಕು ಗಂಟೆ, ಕೆಲವು ಕಡೆ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವ್ಯವಸ್ಥೆಯ ಮೇಲೆ ವಿದ್ಯುತ್ ನೀಡಲಾಗುವದೆಂದರು.
ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಉಪ ವಿಭಾಗಕ್ಕೆ ಬಂದು ದಾಖಲಿಸಿದರೆ ಪರಿಹಾರ ನೀಡಲಾಗುವದು. ಅದಲ್ಲದೆ ಇನ್ನು ಮುಂದೆ ತಿಂಗಳ ಮೂರನೇ ಶನಿವಾರ ಗ್ರಾಹಕರ ಸಭೆ ನಡೆಸಲಾಗುವದು ಎಂದರು.
ಗ್ರಾಹಕರು ಹೊಸ ಲೇಔಟ್ ದಲ್ಲಿ ಗಿರಣಿಗೆ ವಿದ್ಯುತ್ ಸಂಪರ್ಕ ನೀಡದೇ ಇರುವ ಕುರಿತು, ಮನೆಯ ಮೇಲೆ ವಿದ್ಯುತ್ ತಂತಿ ಹೋಗಿರುವ ಕುರಿತು, ಟಿಸಿ ಸುಟ್ಟ, ರಸ್ತೆಯಲ್ಲಿ ಕಂಬು ಇರುವ ಕುರಿತು, ಲೈನ್‌ಮನ್ ಸ್ಪಂದನೆ ಮಾಡುತ್ತಿಲ್ಲ, ಆಕ್ರಮ ಸಕ್ರಮ ಟಿಸಿ ಬಂದಿಲ್ಲ, ಕೆಇಬಿಯವರು ಸೇವಾ ಪ್ರಮಾಣ ಪತ್ರ ನೀಡದೇ ಇರುವ ಕುರಿತು, ಟಿಸಿಯ ಕಂಬ ಶಿಥಿಲಗೊಂಡ ಸೇರಿದಂತೆ ಅನೇಕ ಸಮಸ್ಯೆ ಕುರಿತು ಚರ್ಚಿಸಿ ಕೆಲವೊಂದು ಸ್ಥಳದಲ್ಲಿಯೇ ಪರಿಹಾರ ನೀಡಿ ಕೆಲವು ಸಮಸ್ಯೆಗಳಿಗೆ ಕಾಲಾವಕಾಶ ಕೋರಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ರೈತರು ಮತ್ತು ಗ್ರಾಹಕರಾದ ಇಂಡಿಯ ಕಿರಣ ಧನಶೆಟ್ಟಿ, ಗುಲಾಬಚಂದ ಪಾಂಡರೆ, ಲಚ್ಯಾಣ ಗ್ರಾಮದ ನಿಂಗಪ್ಪ ಯಳಮೇಲಿ, ಸಾತಪುರ ಗ್ರಾಮದ ನಿಂಗಪ್ಪ ವಾಲೀಕಾರ, ಭೂಯ್ನಾರ ಗ್ರಾಮದ ಶಂಕರ ಚಿಕ್ಕಮಣೂರ, ಹಂಚಿನಾಳದ ಅಶೋಕ ಬರಗುಡಿ, ತಡವಲಗಾ ಗ್ರಾಮದ ಮಹಾಂತೇಶ ಅಂಗಡಿ ಸೇರಿದಂತೆ ಅನೇಕರು ತಮ್ಮ ಸಮಸ್ಯೆಗಳನ್ನು ಅರ್ಜಿ ಸಲ್ಲಿಸಿ ತೊಂದರೆ ಹೇಳಿ ಚರ್ಚಿಸಿದರು.
ವೇದಿಕೆಯಲ್ಲಿ ಎಇಇ ಎಸ್.ಆರ್. ಮೆಂಡೆಗಾರ, ಡಿ.ಎಂ. ಮೂಲಿಮನಿ, ಸುಧೀರ ಮದಭಾವಿ, ಆರ್.ಕೆ. ಚವ್ಹಾಣ, ಜಿ.ಡಿ. ಬಾಬಾನಗರ ಸಂತೋಷ ಬನಗೋಡೆ, ಸಂಗಮೇಶ ಇಮ್ಮನದ, ಆರ್.ಬಿ. ಕುಂಬಾರ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.