![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 28, 2022, 4:51 PM IST
ಮುದ್ದೇಬಿಹಾಳ: ತಾಲೂಕಿನ ಗಂಗೂರ ಗ್ರಾಮದಲ್ಲಿರುವ ಚಾಕರಿ (ಇನಾಮ) ಜಮೀನನ್ನು ಮರಳಿ ಭೂಸ್ವಾಧೀನ ಪಡಿಸಿಕೊಂಡು ಅದನ್ನು ಮಾದಿಗ ಸಮಾಜದ ಸ್ಮಶಾನ ಭೂಮಿ ಎಂದು ಘೋಷಿಸುವಂತೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟ, ಗಂಗೂರಿನ ಪ್ರಮುಖರು ಮತ್ತು ಮಾದಿಗ ಸಮಾಜದ ಸದಸ್ಯರು ಬುಧವಾರ ಗಂಗೂರು ಗ್ರಾಮದಿಂದ ಪಾದಯಾತ್ರೆ ನಡೆಸಿದರು.
ಪಟ್ಟಣಕ್ಕೆ ಆಗಮಿಸಿ ಹಲಗೆ ಬಾರಿಸುತ್ತ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರಾಮದ ದಲಿತ ಪರಿವಾರದವರು ಮಾರುತೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಲಗಿ ಸೇವೆ ಮಾಡುತ್ತಿದ್ದರು. ಇದರಿಂದಾಗಿ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ದೇವಸ್ಥಾನದಿಂದ ಇವರಿಗೆ 2.8 ಎಕರೆ ಜಮೀನನ್ನು ಹಲಗಿ ಜಮೀನು ಅಂತ ದುರಗಪ್ಪ ಮಾದರ, ಭೀಮಪ್ಪ ಮಾದರ, ರಾಮಪ್ಪ ಮಾದರ, ಚಂದ್ರಪ್ಪ ಮಾದರ, ಬಸಪ್ಪ ಮಾದರ ಸಹೋದರರಿಗೆ ನೀಡಲಾಗಿತ್ತು.ಈ ಜಮೀನನ್ನು ಬೇರೊಬ್ಬರು ತಮ್ಮ ಹೆಸರಿಗೆ ಮಡಿಕೊಂಡು ಬೇರೆ ಕೃಷಿಯೇತರ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ.
1947ರಿಂದ ಇಲ್ಲಿಯವರೆಗೆ ಆ ಜಮೀನು ಮಾದಿಗ ಸಮಾಜದ ಕಬ್ಜಾದಲ್ಲಿದ್ದು, ಇದನ್ನು ಮರಳಿ ಕೊಡಿಸಬೇಕು. ಆ ಜಮೀನಿನಲ್ಲಿ ಮಾದಿಗ ಸಮಾಜದವರ ಪೂರ್ವಜರ ಸಮಾಧಿಗಳಿದ್ದು, ಅಲ್ಲಿ ಶವ ಸಂಸ್ಕಾರ ಮಾಡುತ್ತ ಬೇಸಾಯ ಮಾಡಲಾಗುತ್ತಿತ್ತು. ಇದನ್ನು ಕೂಡಲೇ ಭೂಸ್ವಧೀನಪಡಿಸಿಕೊಂಡು ಸ್ಮಶಾನ ಭೂಮಿ ಎಂದು ಘೋಷಿಸುವಂತೆ ಆಗ್ರಹಿಸಿಲಾಗಿದೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ. ಮುದೂರ, ಗಂಗೂರಿನ ಮಾದಿಗ ಸಮುದಾಯದ ಕುಟುಂಬದವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.