ಅಪಾಯ ಆಹ್ವಾನಿಸುತ್ತಿವೆ ವಿದ್ಯುತ್‌ ಕಂಬ


Team Udayavani, Mar 15, 2022, 4:56 PM IST

22power

ದೇವರಹಿಪ್ಪರಗಿ: ಮೇಲಗಡೆಯಷ್ಟೇ ಸುಸಜ್ಜಿತ ಸಿಮೆಂಟ್‌ ಕಂಬಗಳು, ಕೆಳಗಡೆ ಮಾತ್ರ ಅಪಾಯಕ್ಕೆ ಆಹ್ವಾನ ನೀಡುವಂತೆ ಸಿಮೆಂಟ್‌ ಕಿತ್ತು ಹೋದ ಕಬ್ಬಿಣದ ಸ್ತಂಭಗಳು.

ಕಳೆದ ನಾಲ್ಕು ವರ್ಷಗಳಿಂದ ಗುಣಮಟ್ಟ ಕಳೆದುಕೊಂಡು, ಬದಲಾವಣೆಗಾಗಿ ಕಾಯುತ್ತಿರುವ ಬಿಬಿ.ಇಂಗಳಗಿ ಗ್ರಾಮದ ವಿದ್ಯುತ್‌ ಕಂಬಗಳ ವಾಸ್ತವಿಕ ಸ್ಥಿತಿಯಿದು.
ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ಒಂದಲ್ಲ, ಎರಡಲ್ಲ ಕನಿಷ್ಟ ಹತ್ತಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಗಾಳಿ, ಮಳೆಗೆ ಬೀಳುವ ಹಂತದಲ್ಲಿವೆ. ಜೊತೆಗೆ ಅಪಾಯದ ಮುನ್ಸೂಚನೆ ನೀಡುತ್ತಿವೆ. ಈ ಕುರಿತು ಗ್ರಾಪಂ ಸದಸ್ಯ ಸಲೀಂ ವಠಾರ ಹಾಗೂ ಮಾನಪ್ಪ ಹಿರೇಕುರುಬರ ಹೇಳುವಂತೆ, ಗ್ರಾಮದಲ್ಲಿ 25 ವರ್ಷಗಳ ಹಿಂದೆ ನೆಟ್ಟ ವಿದ್ಯುತ ಕಂಬಗಳೇ ಈವರೆಗೆ ಇವೆ. ಈಗ ಅವುಗಳ ಸಿಮೆಂಟ್‌ ಕಿತ್ತು ಹೋಗಿ ಎಲುಬಿನ ಗೂಡಿನಂತೆ ಕಬ್ಬಿಣದ ಗೂಡಾಗಿವೆ.

ಕಂಬಗಳ ಬದಲಾವಣೆಗಾಗಿ ಹಲವು ಬಾರಿ ಹೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿ ಗಮನ ಸೆಳೆಯಲಾಗಿದೆ. ಅದಾಗ್ಯೂ ಯಾರು ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ. ಸಾಕಷ್ಟು ಮಳೆ, ಗಾಳಿ ತಿಂದಿರುವ ಕಂಬಗಳು ನಿವೃತ್ತಿಯ ಅಂಚಿನಲ್ಲಿದ್ದು ಅವುಗಳಿಗೆ ವಿಶ್ರಾಂತಿ ನೀಡಬೇಕಾಗಿದೆ. ಒಂದು ವೇಳೆ ಇವುಗಳ ಸ್ಥಿತಿ ನಿರ್ಲಕ್ಷಿಸಿದ್ದಲ್ಲಿ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಗ್ರಾಮದ ಚಿಕ್ಕಮಕ್ಕಳು ಬಹುತೇಕ ಸಮಯ ತಮ್ಮ ಆಟಗಳನ್ನು ಇಂಥ ಅಪಾಯದ ಕಂಬಗಳ ಅಡಿಯಲ್ಲಿ ಆಡುವುದರಿಂದ ವಿದ್ಯುತ್‌ ಪ್ರವಹಿಸುವ ಸಾಧ್ಯತೆಗಳಿವೆ. ಆದ್ದರಿಂದ ಕಬ್ಬಿಣದ ಗೂಡಾಗಿರುವ ಇಂಥ ಕಂಬಗಳನ್ನು ಕೂಡಲೇ ಬದಲಾಯಿಸಲು ಹೆಸ್ಕಾಂ ಮುಂದಾಗಬೇಕು. ಜೊತೆಗೆ ಗ್ರಾಮದ ಎರಡನೇ ವಾರ್ಡಿನಲ್ಲಿ ವಿದ್ಯುತ್‌ ತಂತಿ ಮನೆಗಳ ಮೇಲೆ ಹಾದು ಹೋಗಿದ್ದು ಅತೀ ಸಮೀಪದಲ್ಲಿದೆ. ಇದು ಸಹ ಎಚ್ಚರಿಕೆ ಗಂಟೆಯಾಗಿದ್ದು ಇದನ್ನು ಸಹ ಬದಲಾಯಿಸಬೇಕು ಎನ್ನುತ್ತಾರೆ.

ಗ್ರಾಮದಲ್ಲಿರುವ ಎಲ್ಲ ವಿದ್ಯುತ್‌ ಕಂಬಗಳ ವಾಸ್ತವಿಕ ಸ್ಥಿತಿಗಳನ್ನು ಅರಿಯಲು ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ನಿವೃತ್ತಿಯ ಅಂಚಿನ ಕಂಬಗಳನ್ನು ಬದಲಾಯಿಸಿ ಹೊಸದಾದ ಕಂಬಗಳನ್ನು ಮಳೆಗಾಲದ ಆರಂಭದ ಮುನ್ನ ಸ್ಥಾಪಿಸಲು ಮುಂದಾಗಬೇಕು ಎಂದು ಗ್ರಾಮದ ಮಾಂತೇಶ ಮುದನೂರ, ಅಶೋಕ ಹೊಸಮನಿ, ಲಾಲಬಿ ನದಾಫ್‌, ಶಿವು ದಲ್ಲಾಳಿ, ರಫೀಕ್‌ ಬಾಗಲಕೋಟ, ಹನುಮಂತ ಮಾದರ, ಶಾರೂಖ್‌ ದೊಡಮನಿ ಆಗ್ರಹಿಸುತ್ತಾರೆ.

ಗ್ರಾಮದಲ್ಲಿ ಅವನತಿಯ ಅಂಚಿನಲ್ಲಿರುವ ಕಂಬಗಳ ಕುರಿತು ನನಗೆ ಮಾಹಿತಿಯಿದೆ. ಕೂಡಲೇ ಕಂಬಗಳ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. –ಎಸ್.ಆರ್.ಕಟ್ಟಿಮನಿ. ಶಾಖಾಧಿಕಾರಿ, ಹೆಸ್ಕಾಂ ಕೋರವಾರ

ಟಾಪ್ ನ್ಯೂಸ್

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.